Site icon Vistara News

Chandrayaan 3: ನಿದ್ದೆಯಿಂದ ಎಚ್ಚರವಾಗಲು ಒಲ್ಲೆ ಎನ್ನುತ್ತಿರುವ ಲ್ಯಾಂಡರ್, ಪ್ರಜ್ಞಾನ್! ನಾಳೆ ಮತ್ತೆ ಇಸ್ರೋ ಪ್ರಯತ್ನ

Chandrayaan 3

ನವದೆಹಲಿ: ಚಂದ್ರನ ಅಂಗಳದಲ್ಲಿ (Moon) ಸ್ಲೀಪ್ ಮೋಡ್‌ನಲ್ಲಿರುವ (Sleep Mode) ಚಂದ್ರಯಾನ-3 (Chandrayaan 3) ಪ್ರಜ್ಞಾನ್ ರೋವರ್ (Pragyan Rover) ಮತ್ತು ವಿಕ್ರಮ್ ಲ್ಯಾಂಡರ್ (Vikram Lander) ಎಚ್ಚರಗೊಳಿಸುವ ಪ್ರಯತ್ನವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಶುಕ್ರವಾರ ಸಂಜೆ ಮಾಡಲು ಮುಂದಾಗಿತ್ತು. ಆದರೆ, ಆಗ ಪ್ರಯತ್ನವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದೆ ಎಂದು ತಿಳಿದು ಬಂದಿದೆ. ಅಂದರೆ, ಶನಿವಾರ ಸಂಜೆ ಚಂದ್ರಯಾನ-3 ಉಪಕರಣಗಳನ್ನು ಸಕ್ರಿಯಗೊಳಿಸುವ ಪ್ರಯತ್ನವನ್ನು ಇಸ್ರೋ ಮಾಡಲಿದೆ ಎಂದು ಸ್ಪೇಸ್ ಅಪ್ಲಿಕೇಷನ್ ಸೆಂಟರ್ ನಿರ್ದೇಶಕ ನಿಲೇಶ್ ದೇಸಾಯಿ ಅವರು ಹೇಳಿದ್ದರು. ಇಷ್ಟಾಗಿಯೂ, ಪ್ರಜ್ಞಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಅನ್ನು ಸಂಪರ್ಕಿಸುವ ಪ್ರಯತ್ನವನ್ನು ಶುಕ್ರವಾರ ಮಾಡಲಾಯಿತಾದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಇಸ್ರೋ ಟ್ವೀಟ್ ಮಾಡಿದೆ.

ಸೆಪ್ಟೆಂಬರ್ 22 ರ ಸಂಜೆ ರೋವರ್ ಮತ್ತು ಲ್ಯಾಂಡರ್ ಅನ್ನು ಮರುಸಕ್ರಿಯಗೊಳಿಸಲು ಯೋಜಿಸಿದ್ದೆವು. ಆದರೆ ಕೆಲವು ಕಾರಣಗಳಿಂದಾಗಿ ನಾವು ಅದನ್ನು ನಾಳೆ ಸೆಪ್ಟೆಂಬರ್ 23 ರಂದು ಮಾಡುತ್ತೇವೆ. ಲ್ಯಾಂಡರ್ ಮತ್ತು ರೋವರ್ ಅನ್ನು ಸ್ಲೀಪ್ ಮೋಡ್‌ನಿಂದ ಹೊರತೆಗೆದು ಅದನ್ನು ಪುನಃ ಸಕ್ರಿಯಗೊಳಿಸುವ ಯೋಜನೆಯನ್ನು ನಾವು ಹೊಂದಿದ್ದೇವೆ ಎಂದು ಸುದ್ದಿ ಸಂಸ್ಥೆ ನಿಲೇಶ್ ದೇಸಾಯಿ ಅವರು ತಿಳಿಸಿದ್ದಾರೆ.

ಭೂಮಿಯ 15 ದಿನಗಳು ಚಂದ್ರನ ಒಂದು ದಿನಕ್ಕೆ ಸಮ. ಹಾಗಾಗಿ, 15 ದಿನಗಳ ಹಿಂದೆ ಇಸ್ರೋ, ಚಂದ್ರನ ಅಂಗಳದಲ್ಲಿರುವ ಪ್ರಜ್ಞಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್‌ ಅನ್ನು ಸ್ಲೀಮ್ ಮೋಡಿಗೆ ವರ್ಗಾಯಿಸಿತ್ತು. ಇದೀಗ ಚಂದ್ರನಲ್ಲಿ ಸೂರ್ಯೋದಯವಾಗಿದ್ದು, ಚಂದ್ರಯನಾ-3 ವೈಜ್ಞಾನಿಕ ಉಪಕರಣಗಳನ್ನು ಸಕ್ರಿಯಗೊಳಿಸುವ ಪ್ರಯತ್ನವನ್ನು ಇಸ್ರೋ ಮಾಡುತ್ತಿದೆ. ಯಶಸ್ವಿಯಾಗಿ ತಮ್ಮ ವೈಜ್ಞಾನಿಕ ಸಂಸೋಧನೆಗಳನ್ನು ಕೈಗೊಂಡ ವಿಕ್ರಮ್ ಲ್ಯಾಂಡರ್ ಅನ್ನು ಸೆಪ್ಟೆಂಬರ್ 4 ಮತ್ತು ಪ್ರಜ್ಞಾನ್ ರೋವರ್ ಅನ್ನು ಸೆಪ್ಟೆಂಬರ್ 2ರಂದು ಸ್ಲೀಮ್ ಮೋಡ್‌ಗೆ ತಳ್ಳಲಾಗಿತ್ತು.

ಈ ಸುದ್ದಿಯನ್ನೂ ಓದಿ: Chandrayaan 3: ಚಂದ್ರಯಾನ 3 ಕೌಂಟ್‌ಡೌನ್‌ಗೆ ಧ್ವನಿಯಾಗಿದ್ದ ವಲರ್ಮತಿ ಇನ್ನಿಲ್ಲ; ದೇಶವೇ ಕೇಳಿದ್ದ ಧ್ವನಿ ಅದು

ಶುಕ್ರವಾರ ನಡೆಸಿದ ಪ್ರಯತ್ನ ವಿಫಲ

ಈ ಮಧ್ಯೆ, ಇಸ್ರೋ ಎಕ್ಸ್‌ ವೇದಿಕೆಯಲ್ಲಿ ಟ್ವೀಟ್ ಮಾಡಿದ್ದು, ಸ್ಲೀಮ್ ಮೋಡ್‌ನಲ್ಲಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಅನ್ನು ಸಕ್ರಿಯಗೊಳಿಸುವುದಕ್ಕಾಗಿ ಸಂಪರ್ಕಿಸುತ್ತಿದ್ದೇವೆ. ಸದ್ಯದ ಮಟ್ಟಿಗೆ ರೋವರ್ ಮತ್ತು ಲ್ಯಾಂಡರ್‌ನಿಂದ ಕಮ್ಯುನಿಕೇಷನ್ ಸಾಧ್ಯವಾಗುತ್ತಿಲ್ಲ. ಅಲ್ಲಿಂದ ಯಾವುದೇ ಸಿಗ್ನಲ್‌ಗಳು ದೊರೆಯುತ್ತಿಲ್ಲ. ಆದರೆ, ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಸಕ್ರಿಯೊಳಿಸುವ ಪ್ರಯತ್ನ ಮುಂದುವರಿಯಲಿದೆ ಎಂದು ಬರೆದುಕೊಂಡಿದೆ.

Exit mobile version