Site icon Vistara News

Recession In India | ಜೂನ್‌ ಬಳಿಕ ದೇಶದಲ್ಲಿ ಆರ್ಥಿಕ ಹಿಂಜರಿತ, ಆತಂಕ ಹೆಚ್ಚಿಸಿದ ಕೇಂದ್ರ ಸಚಿವ ನಾರಾಯಣ್‌ ರಾಣೆ ಹೇಳಿಕೆ

Narayan Rane Recession

ಮುಂಬೈ: ಕೊರೊನಾ ಬಿಕ್ಕಟ್ಟಿನ ನಂತರ ದೇಶದ ಆರ್ಥಿಕತೆ ಸುಧಾರಿಸಿಕೊಳ್ಳುತ್ತಿದೆ. ಉತ್ಪಾದನೆ, ಐಟಿ ಕ್ಷೇತ್ರಗಳು ಲಯಕ್ಕೆ ಬರುತ್ತಿವೆ. ಆರ್ಥಿಕ ಸಾಮಾನ್ಯ ಸ್ಥಿತಿಗೆ ದೇಶ ಮರಳುವ ಆಶಾಭಾವನೆ ಮೂಡಿದೆ. ಇದರ ಬೆನ್ನಲ್ಲೇ ಕೇಂದ್ರ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಶ್ರೇಣಿ ಉದ್ಯಮ (MSME) ಸಚಿವ ನಾರಾಯಣ್‌ ರಾಣೆ ನೀಡಿರುವ ಹೇಳಿಕೆಯು ವಿತ್ತೀಯ ಬಿಕ್ಕಟ್ಟಿನ (Recession In India) ಆತಂಕ ಹೆಚ್ಚಿಸಿದೆ.

“ಮುಂದಿನ ಜೂನ್‌ ತಿಂಗಳಲ್ಲಿ ಜಾಗತಿಕವಾಗಿ ಆರ್ಥಿಕ ಹಿಂಜರಿತ ಉಂಟಾಗುತ್ತಿದೆ. ಇದರಿಂದ ಬಹುತೇಕ ರಾಷ್ಟ್ರಗಳು ವಿತ್ತೀಯ ಹಿಂಜರಿತದ ಸುಳಿಗೆ ಸಿಲುಕಲಿವೆ. ಭಾರತಕ್ಕೂ ಜೂನ್‌ ನಂತರ ಆರ್ಥಿಕ ಹಿಂಜರಿತ ಬಾಧಿಸಬಹುದು. ಇದನ್ನು ತಡೆಯಲು ಕೇಂದ್ರ ಸರ್ಕಾರ ಸಕಲ ರೀತಿಯ ಕ್ರಮ ತೆಗೆದುಕೊಳ್ಳುತ್ತಿದೆ” ಎಂದು ಪುಣೆಯಲ್ಲಿ ತಿಳಿಸಿದ್ದಾರೆ.

“ಈಗಾಗಲೇ ಜಗತ್ತಿನ ಹಲವು ಮುಂದುವರಿದ ರಾಷ್ಟ್ರಗಳು ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿವೆ. ಜೂನ್‌ ವೇಳೆಗೆ ಹೆಚ್ಚಿನ ರಾಷ್ಟ್ರಗಳಿಗೆ ವಿತ್ತೀಯ ಬಿಕ್ಕಟ್ಟು ಬಾಧಿಸಲಿದೆ. ಇದರಿಂದ ಪಾರಾಗುವ ದಿಸೆಯಲ್ಲಿ ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಭೆ ನಡೆಸುತ್ತಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ | Shehbaz Sharif | ನಾವೀಗ ಭಿಕ್ಷಾ ಪಾತ್ರೆ ಹಿಡಿದು ನಿಂತಿದ್ದೇವೆ, ಆರ್ಥಿಕ ಬಿಕ್ಕಟ್ಟು ಒಪ್ಪಿಕೊಂಡ ಪಾಕ್‌ ಪ್ರಧಾನಿ

Exit mobile version