ನವದೆಹಲಿ: ನೇರ ತೆರಿಗೆ ಸಂಗ್ರಹದಲ್ಲಿ (Net Direct tax) ಭಾರತವು (India) ಹೊಸ ದಾಖಲೆಯನ್ನು ಬರೆದಿದೆ. ಶುಕ್ರವಾರ ಬಿಡುಗಡೆಯಾದ ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಭಾರತದ ಒಟ್ಟು ನೇರ ತೆರಿಗೆ ಸಂಗ್ರಹ ವರ್ಷದಿಂದ ವರ್ಷಕ್ಕೆ ಶೇ.18.59 ಏರಿಕೆಯಾಗಿ, 12.37 ಲಕ್ಷ ಕೋಟಿಗೆ ಹೆಚ್ಚಿದೆ. ಮರುಪಾವತಿಯ ನಂತರ ನಿವ್ವಳ ನೇರ ತೆರಿಗೆ ಸಂಗ್ರಹವು ಶೇ.21.82 ರಷ್ಟು ಜಿಗಿದು, 10.60 ಲಕ್ಷ ಕೋಟಿ ರೂ.ಗೆ ತಲುಪಿದೆ.
ಈ ತೆರಿಗೆ ಸಂಗ್ರಹಣೆಯು 2023-24 ಹಣಕಾಸು ವರ್ಷದ ನೇರ ತೆರಿಗೆಗಳ ಒಟ್ಟು ಬಜೆಟ್ ಅಂದಾಜುಗಳ ಶೇಕಡಾ 58.15 ರಷ್ಟಾಗಿದೆ ಎಂದು ಹಣಕಾಸು ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
2023 ಏಪ್ರಿಲ್ 1ರಿಂದ ನವೆಂಬರ್ 9ರವರೆಗಿನ ಅವಧಿಯಲ್ಲಿ 1.77 ಲಕ್ಷ ಕೋಟಿ ರೂ. ರಿಫಂಡ್ ಮಾಡಲಾಗಿದೆ ಎಂದೂ ಹೇಳಲಾಗಿದೆ. ಕಾರ್ಪೊರೇಟ್ ಆದಾಯ ತೆರಿಗೆ (CIT) ಮತ್ತು ವೈಯಕ್ತಿಕ ಆದಾಯ ತೆರಿಗೆ (PIT) ಸಂಗ್ರಹಣೆಯಲ್ಲಿ ನಿವ್ವಳ ಬೆಳವಣಿಗೆಯು ಕ್ರಮವಾಗಿ ಶೇ.12.48 ಮತ್ತು ಶೇ.31.77 ಏರಿಕೆಯಾಗಿದೆ.
ಇದುವರೆಗೆ ಒಟ್ಟು ಆದಾಯ ಸಂಗ್ರಹಣೆದಲ್ಲಿ ಸಿಐಟಿ ಮತ್ತು ಪಿಐಟಿ ಬೆಳವಣಿಗೆಯ ದರವು 7.13 ಪ್ರತಿಶತದಷ್ಟಿದ್ದರೆ, ಪಿಐಟಿಯ ಬೆಳವಣಿಗೆಯ ದರವು 28.29 ಪ್ರತಿಶತ ಇದೆ ಎಂದು ಸಚಿವಾಲಯವು ತಿಳಿಸಿದೆ. ರಿಫಂಡ್ ಹೊಂದಾಣಿಕೆ ಮಾಡಿದ ಬಳಿಕ ಸಿಐಟಿ ನಿವ್ವಳ ಬೆಳವಣಿಗೆಯ ಸಂಗ್ರವು ಶೇ.12.48ರಷ್ಟಿದೆ ಮತ್ತು ಪಿಐಟಿ ಸಂಗ್ರವು ಶೇ.31.77ರಷ್ಟಿದೆ. ಎಸ್‌ಟಿಟಿ ಸೇರಿದಂತೆ ಪಿಐಟಿ ಸಂಗ್ರಹವು ಶೇ.31.26ರಷ್ಟಿದೆ ಎಂದು ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: CM Siddaramaiah: ರಾಜ್ಯದ ವಾಣಿಜ್ಯ ತೆರಿಗೆ ಸಂಗ್ರಹ ದೇಶದಲ್ಲೇ ಅತ್ಯಧಿಕ ; ಆದರೆ, ಸಿಎಂ ಸಿದ್ದರಾಮಯ್ಯಗೆ ಮಾತ್ರ ಸಮಾಧಾನವಿಲ್ಲ!