Site icon Vistara News

Reliance Jio: ರಿಲಯನ್ಸ್ ಜಿಯೋಗೆ ಮೊದಲ ತ್ರೈಮಾಸಿಕದಲ್ಲಿ 4863 ಕೋಟಿ ರೂ. ನಿವ್ವಳ ಲಾಭ

RS 5208 crore net profit for Jio infocom in the 3rd quarter

ನವದೆಹಲಿ: ಭಾರತದ ಅತ್ಯಂತ ಮೌಲ್ಯಯುತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ (Reliance Industries) ಶುಕ್ರವಾರ 2023ರ ಏಪ್ರಿಲ್‌ನಿಂದ ಜೂನ್ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು (first quarter report) ಪ್ರಕಟಿಸಲಾಗಿದೆ. ರಿಲಯನ್ಸ್ ಜಿಯೋ (Reliance Jio) ನಿವ್ವಳ ಲಾಭದಲ್ಲಿ (Net Profit) ಶೇಕಡಾ 12ರಷ್ಟು ಏರಿಕೆ ಕಂಡು, 4,863 ಕೋಟಿ ರೂಪಾಯಿಗೆ ಮುಟ್ಟಿದೆ ಎಂದು ಕಂಪನಿಯು ಸಲ್ಲಿಸಿದ ಮಾಹಿತಿಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Infosys Q1 Results : ಇನ್ಫೋಸಿಸ್‌ಗೆ 5,945 ಕೋಟಿ ರೂ. ನಿವ್ವಳ ಲಾಭ, 2023-24ರ ಮುನ್ನೋಟಕ್ಕೆ ಕತ್ತರಿ

ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ರಿಲಯನ್ಸ್ ಜಿಯೋ 4,335 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿತ್ತು. ವರದಿಯಾದ ತ್ರೈಮಾಸಿಕದಲ್ಲಿ ರಿಲಯನ್ಸ್ ಜಿಯೋದ ಒಟ್ಟು ಆದಾಯವು ಒಂದು ವರ್ಷದ ಹಿಂದೆ ಬಂದಿದ್ದ 21,995 ಕೋಟಿ ರೂಪಾಯಿಗಳಿಂದ 24,127 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಕಾರ್ಯಾಚರಣೆಗಳ ಆದಾಯವು 2022ರ ಜೂನ್ ತ್ರೈಮಾಸಿಕದಲ್ಲಿ 21,873 ಕೋಟಿ ರೂಪಾಯಿ ವರದಿಯಾಗಿತ್ತು. ಅಲ್ಲಿಂದ ಈಗ ವರದಿಯಾದ ತ್ರೈಮಾಸಿಕದಲ್ಲಿ ಶೇಕಡಾ 9.9ರಷ್ಟು ಮೇಲೇರಿ 24,042 ಕೋಟಿಗಳಿಗೆ ಏರಿಕೆಯಾಗಿದೆ.

ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version