Site icon Vistara News

Reliance Q3 results: ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭ 17,265 ಕೋಟಿ ರೂ.ಗೆ ಏರಿಕೆ

Reliance Industries Announces First Quarter Results 17448 crore rs profit declaration

ಮುಂಬೈ: ದೇಶದ ಪ್ರಮುಖ ಕಂಪನಿಯಾದ ರಿಲಯನ್ಸ್ ಇಂಡ್‌ಸ್ಟ್ರೀಸ್‌ನ(Reliance Industries), ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ (Q3 Results) ಫಲಿತಾಂಶಗಳು ಪ್ರಕಟವಾಗಿದೆ. ಕಂಪನಿಯ ನಿವ್ವಳ ಲಾಭದಲ್ಲಿ (Net Profit) ಶೇ.9 ಏರಿಕೆಯಾಗಿ, 17,265 ಕೋಟಿ ರೂಪಾಯಿಗೆ ತಲುಪಿದೆ. ಕಂಪನಿಯ ರಿಟೇಲ್ (Retail) ಮತ್ತು ಟೆಲಿಕಾಂ (Telecom) ವಿಭಾಗಗಳು ತೋರಿದ ಗಮನಾರ್ಹ ಸಾಧನೆಯು ನಿವ್ವಳ ಲಾಭದಲ್ಲಿ ಏರಿಕೆಗೆ ಕಾರಣವಾಗಿದೆ(Reliance Q3 results).

ಅಕ್ಟೋಬರ್-ಡಿಸೆಂಬರ್‌ನಲ್ಲಿ – ಪ್ರಸಕ್ತ 2023-24 ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಕಂಪನಿಗೆ ನಿವ್ವಳ ಲಾಭ ₹17,265 ಕೋಟಿ ಅಥವಾ ಪ್ರತಿ ಷೇರಿಗೆ ₹25.52 ಹೆಚ್ಚಾಗಿದೆ. ಅಂದರೆ, 9.3 ಶೇಕಡಾ ಹೆಚ್ಚಳ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 15,792 ಕೋಟಿ ರೂ. ಅಥವಾ ಪ್ರತಿ ಷೇರಿಗೆ 23.19 ರೂ. ಹೆಚ್ಚಾಗಿತ್ತು. ಹಾಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ಸಾಲಿನಲ್ಲಿ ನಿವ್ವಳ ಲಾಭದಲ್ಲಿ ಶೇ.9.3ರಷ್ಟು ಏರಿಕೆಯಾಗಿದೆ.

3ನೇ ತ್ರೈಮಾಸಿಕದಲ್ಲಿ ರಿಲಯನ್ಸ್‌ ಜಿಯೋಗೆ 5208 ಕೋಟಿ ರೂಪಾಯಿ ಲಾಭ

ಭಾರತದ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industries) ಟೆಲಿಕಾಂ ಮತ್ತು ಡಿಜಿಟಲ್ ಸೇವೆಗಳ ಅಂಗವಾದ ಜಿಯೋ ಇನ್ಫೊಕಾಮ್ ಲಿಮಿಟೆಡ್ (Reliance Jio) ಮೂರನೇ ತ್ರೈ ಮಾಸಿಕದ ಫಲಿತಾಂಶ ಶುಕ್ರವಾರ ಬಂದಿದೆ(q3 Results). ಈ ಹಣಕಾಸು ಫಲಿತಾಂಶವು 2023ನೇ ಇಸವಿಯ ಅಕ್ಟೋಬರ್‌ನಿಂದ ಡಿಸೆಂಬರ್ ತಿಂಗಳ ಅವಧಿಯದ್ದಾಗಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಿಯೋ ಇನ್ಫೋಕಾಮ್ ನಿವ್ವಳ ಲಾಭವು ಶೇ 12.3ರಷ್ಟು ಏರಿಕೆಯಾಗಿ, 5,208 ಕೋಟಿ ರೂಪಾಯಿ ಆಗಿದೆ(Net Profit). ಜಿಯೋದ ಚಂದಾದಾರರ ಸಂಖ್ಯೆಯಲ್ಲಿ ಭಾರೀ ಏರಿಕೆ ಆಗಿರುವುದನ್ನು ನಿಚ್ಚಳವಾಗಿ ಗಮನಿಸಬಹುದಾಗಿದೆ.

ಕಾರ್ಯಾಚರಣೆ ಮೂಲಕವಾಗಿ ಬರುವಂಥ ಆದಾಯವು ಶೇ 10.3ರಷ್ಟು ಹೆಚ್ಚಾಗಿ, 25,368 ಕೋಟಿ ರೂಪಾಯಿಗೆ ಮುಟ್ಟಿದೆ. ಅಂದ ಹಾಗೆ ಜಿಯೋಗೆ ಪ್ರಸಕ್ತ ತ್ರೈಮಾಸಿಕದಲ್ಲಿ 1.12 ಕೋಟಿ ಚಂದಾದಾರರು ಸೇರ್ಪಡೆ ಆಗಿದ್ದು, ಒಟ್ಟು ಬಳಕೆದಾರರ ಸಂಖ್ಯೆಯು 47.09 ಕೋಟಿಗೆ ತಲುಪಿದೆ.

ಇನ್ನು ಜಿಯೋ ನೆಟ್ ವರ್ಕ್ ಡೇಟಾ ದಟ್ಟಣೆಯು ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 32ರಷ್ಟು ಹೆಚ್ಚಾಗಿ, 38.1 ಎಕ್ಸಾಬೈಟ್ಸ್ ಆಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ತೈಲದಿಂದ ರಾಸಾಯನಿಕದ ತನಕ ವಿವಿಧ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದು, ಉಳಿದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಫಲಿತಾಂಶ ಘೋಷಣೆ ಆಗಬೇಕಾಗಿದೆ.

ಈ ಸುದ್ದಿಯನ್ನೂ ಓದಿ: Reliance Industries : ಉತ್ತರಪ್ರದೇಶದಲ್ಲಿ ರಿಲಯನ್ಸ್‌ನಿಂದ 75,000 ಕೋಟಿ ರೂ. ಹೂಡಿಕೆ: ಮುಕೇಶ್‌ ಅಂಬಾನಿ

Exit mobile version