ಬೆಂಗಳೂರು: ಇದೀಗ ‘ಟಿರಾ’ ಬೆಂಗಳೂರಿಗೆ (Bengaluru) ಕಾಲಿಟ್ಟಿದೆ. ಅಂದ ಹಾಗೆ ಟಿರಾ ಎಂಬುದು ರಿಲಯನ್ಸ್ ರೀಟೇಲ್ ನ (Reliance Retail) ಸೌಂದರ್ಯ ರೀಟೇಲ್ ಪ್ಲಾಟ್ ಪ್ಲಾರ್ಮ್. ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ (phoenix mall of Asia) ರೀಟೇಲ್ ಕೇಂದ್ರವನ್ನು ಶುರು ಮಾಡುವ ಮೂಲಕ ಟಿರಾ ಬೆಂಗಳೂರು ನಗರಕ್ಕೆ ಪ್ರವೇಶ ಮಾಡಿದೆ. ಇಲ್ಲಿಯ ತನಕ ಮುಂಬೈ, ಹೈದರಾಬಾದ್ ಹಾಗೂ ಚೆನ್ನೈನಲ್ಲಿ ಮಾತ್ರ ‘ಟಿರಾ’ (Tira) ಇತ್ತು. ಅದರ ಹೆಜ್ಜೆ ಗುರುತು ಬೆಂಗಳೂರಲ್ಲೂ ಮೂಡಿದೆ.
ಟಿರಾದಿಂದ ಖರೀದಿ ಮಾಡುವಂಥ ಅನುಭವವೇ ಬಹಳ ವಿಶಿಷ್ಟವಾದದ್ದು. ಈಗಿನ ತಲೆಮಾರಿನ ಅಗತ್ಯಗಳು ಹಾಗೂ ಅಭಿರುಚಿಯನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಿದಂಥ ಜಾಗತಿಕ ಹಾಗೂ ಸ್ಥಳೀಯವಾದ ಸೌಂದರ್ಯ ಬ್ರ್ಯಾಂಡ್ ಗಳ ವಿಶೇಷ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ. ಖರೀದಿ ಮಾಡುವಂಥ ಗ್ರಾಹಕರಿಗೆ ಸೌಂದರ್ಯ ರೀಟೇಲ್ ಉತ್ಪನ್ನಗಳ ಪೈಕಿ ಬೇರೆಲ್ಲೂ ಸಿಗದಂಥ ಅನುಭವ ದೊರೆಯಲಿ ಎಂಬ ಕಾರಣಕ್ಕಾಗಿಯೇ ‘ಟಿರಾ’ದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಬೆಂಗಳೂರಿನಲ್ಲಿ ಹೊಸದಾಗಿ ಶುರುವಾಗಿರುವ ಟಿರಾ ಮಳಿಗೆಯಲ್ಲಿ ತಮಗೆ ಬೇಕಾದಂಥ ಸುಗಂಧ ಅಥವಾ ಸುವಾಸನೆಯನ್ನು ಹುಡುಕಿಕೊಳ್ಳುವುದಕ್ಕೆ ಗ್ರಾಹಕರಿಗೆ ವಿಶಾಲವಾದ ಆಯ್ಕೆಗಳಿವೆ. ಪ್ರತಿ ವ್ಯಕ್ತಿಯೂ ತಮ್ಮದೇ ಆದ ಆದ್ಯತೆಯ ಮೇಲೆ ಸುಗಂಧ ದ್ರವ್ಯಗಳನ್ನು ಆರಿಸಿಕೊಳ್ಳಬಹುದಾಗಿದೆ. ಇನ್ನೂ ವಿಶೇಷ ಏನೆಂದರೆ, ಟಿರಾದಲ್ಲಿ ಲಭ್ಯ ಇರುವಂಥ ಸ್ಮಾರ್ಟ್ ಕನ್ನಡಿಗಳು ಹಾಗೂ ಆಗ್ಯುಮೆಂಟೆಡ್ ರಿಯಾಲಿಟಿ ಕಾರಣಕ್ಕೆ ಗ್ರಾಹಕರು ಉತ್ಪನ್ನಗಳನ್ನು ವರ್ಚುವಲ್ ಆಗಿ ಪ್ರಯೋಗಿಸಬಹುದು. ಅದೇ ರೀತಿ ಇಲ್ಲಿ ಲಭ್ಯ ಇರುವಂಥ ಬ್ಯೂಟಿ ಟ್ರೀಟ್ಸ್ ಮತ್ತು ನಮೂನೆಗಳನ್ನು ವಿತರಿಸುವಂಥ ವಿತರಣೆ ಯಂತ್ರಗಳ ಸಹಾಯದಿಂದ ಗ್ರಾಹಕರು ತಮಗೆ ಬೇಕಾದಂಥದ್ದನ್ನು ತಮ್ಮ ಮನೆಗೆ ಕೊಂಡೊಯ್ಯಬಹುದು.
ಅಂದಹಾಗೆ ಸೌಂದರ್ಯದ ವಿಚಾರದಲ್ಲಿ ಸಲಹೆ ನೀಡುವುದರಲ್ಲಿ ಪರಿಣತರಾದಂಥವರೇ ರೂಪಿಸಿರುವ ‘ಟಿರಾ ಸಿಗ್ನೇಚರ್ ಲುಕ್ಸ್’ ಬಗ್ಗೆ ಗ್ರಾಹಕರು ದೊಡ್ಡ ಮಟ್ಟದಲ್ಲಿ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದರ ಜತೆಗೆ ಇಲ್ಲಿ ಗ್ರಾಹಕರು ತಮ್ಮ ಅಚ್ಚುಮೆಚ್ಚಿನ ಉಚಿತ ಗ್ಲಾಮ್ ಲುಕ್ ಪಡೆಯಬಹುದಾಗಿದೆ. ಇನ್ನೂ ಮುಂದುವರಿದು ಹೇಳಬೇಕು ಅಂದರೆ, ‘ಟಿರಾ’ದಲ್ಲಿ ಉಡುಗೊರೆ ನೀಡುವುದಕ್ಕೆ ಅಂತಲೇ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರು ತಾವು ಖರೀದಿ ಮಾಡಿದ ವಸ್ತುಗಳ ಮೇಲೆ ಪ್ರೀತಿಪಾತ್ರರ ಹೆಸರನ್ನು ಬರೆಸಿ, ನೀಡುವುದರೊಂದಿಗೆ ತಮ್ಮ ಉಡುಗೊರೆಗಳನ್ನು ಇನ್ನಷ್ಟು ವಿಶೇಷ ಎನ್ನುವಂತೆ ಮಾಡಬಹುದು.
ಸೌಂದರ್ಯ ಉತ್ಪನ್ನಗಳ ರೀಟೇಲ್ ವ್ಯಾಪ್ತಿಯಲ್ಲಿ ಟಿರಾ ಹಿಗ್ಗಿಸುತ್ತಾ ಬಂದಿದ್ದು, ಪ್ರತಿ ಗ್ರಾಹಕರಿಗೆ ತಮಗೆ ಬೇಕಾದದ್ದು ಇಲ್ಲಿ ದೊರೆಯುತ್ತದೆ ಎಂಬ ಭರವಸೆಯನ್ನು ನೀಡಿತ್ತಾ ಬಂದಿದೆ. ಇನ್ನು ‘ಟಿರಾ’ ಆಪ್ ಡೌನ್ ಲೋಡ್ ಸಂಖ್ಯೆಯು ಐದು ಮಿಲಿಯನ್ ಸಂಖ್ಯೆಯ ಮೈಲುಗಲ್ಲು ದಾಟಿದೆ. ಈ ಸಂಖ್ಯೆಯೇ ಮೂಲಕ ತಿಳಿಯಬಹುದಾದದ್ದು ಏನೆಂದರೆ, ಸೌಂದರ್ಯ ಅಭಿಮಾನಗಳಲ್ಲಿ ಟಿರಾಗೆ ಜನಪ್ರಿಯತೆಯು ಹೆಚ್ಚುತ್ತಲೇ ಬರುತ್ತಿದೆ. ಭಾರತ ದೇಶದಾದ್ಯಂತ ಶೇ 98ರಷ್ಟು ಪಿನ್ ಕೋಡ್ ಗಳ ವ್ಯಾಪ್ತಿಯಲ್ಲಿ ಟಿರಾ ಉತ್ಪನ್ನಗಳನ್ನು ವೇಗವಾಗಿ ಪೂರೈಕೆ ಮಾಡಲಾಗುತ್ತಿದ್ದು, 100ಕ್ಕೂ ಹೆಚ್ಚು ನಗರಗಳ ಗ್ರಾಹಕರನ್ನು ತಲುಪುತ್ತಿದೆ.
ಮಾಲ್ ಆಫ್ ಏಷ್ಯಾದಲ್ಲಿನ ಮಳಿಗೆಯು ಬೆಂಗಳೂರು ಮಾತ್ರವಲ್ಲದೆ ಅದರ ಆಚೆಗೆ ಇರುವಂಥ ಸೌಂದರ್ಯ ಉತ್ಪನ್ನಗಳ ಬಳಕೆದಾರರ ಪಾಲಿಗೆ ಪ್ರಮುಖ ಕೇಂದ್ರ ಆಗುವುದಕ್ಕೆ ಎಲ್ಲ ರೀತಿಯಿಂದಲೂ ಸಜ್ಜಾಗಿದ್ದು, ಉನ್ನತ ಮಟ್ಟದ- ಅತ್ಯಾಧುನಿಕ ತಂತ್ರಜ್ಞಾನದ ಅನುಭವದ ಹೊಸ ಯುಗಕ್ಕೆ ಇದು ನಾಂದಿ ಹಾಡಿದೆ. ಟಿರಾ ಮಳಿಗೆ ವಿಳಾಸ: ಕೆಳ ಮಹಡಿ, 239/240, ಬ್ಯಾಟರಾಯನಪುರ, ಯಲಹಂಕ ಹೋಬಳಿ, ಯಲಹಂಕ ತಾಲೂಕು, ಬಳ್ಳಾರಿ ರಸ್ತೆ, ಬೆಂಗಳೂರು, ಕರ್ನಾಟಕ 560092.
ಈ ಸುದ್ದಿಯನ್ನೂ ಓದಿ: ರಿಲಯನ್ಸ್ ರಿಟೇಲ್ ಅಧ್ಯಕ್ಷರಾಗಿ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ನೇಮಕ