Site icon Vistara News

Mukesh Ambani: ರಿಲಯನ್ಸ್‌ಗೆ ಜಾಗತಿಕ ಟಾಪ್ 10 ಉದ್ಯಮ ಸಮೂಹದಲ್ಲಿ ಸ್ಥಾನ ಪಡೆಯುವ ಗುರಿ; ಮುಕೇಶ್ ಅಂಬಾನಿ

Mukesh Ambani

Mukesh Ambani Regains Title As Asia's Richest, Surpasses $100 Billion Net Worth

ನವದೆಹಲಿ: ಒಂದೇ ಸ್ಥಳದಲ್ಲಿ ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಸಮುಚ್ಚಯ ನಿರ್ಮಾಣದಿಂದ ದೇಶದ ಅತಿದೊಡ್ಡ ಮೊಬೈಲ್ ನೆಟ್ ವರ್ಕ್ ಆಪರೇಟರ್ ಎಂದು ಕೆಲವೇ ವರ್ಷದಲ್ಲಿ ಉದ್ಯಮವು ಬೆಳೆದಿದೆ. ಆದರೆ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಇಷ್ಟಕ್ಕೇ ತೃಪ್ತಿ ಆಗುವುದಿಲ್ಲ, ವಿಶ್ವದ ಟಾಪ್ 10 ಉದ್ಯಮ ಸಮೂಹಗಳಲ್ಲಿ ಒಂದಾಗಿ ಬೆಳೆಯಲಿದೆ (Top 10 Companies of World) ಎಂದು ಮುಕೇಶ್ ಅಂಬಾನಿ (Mukesh Ambani) ಹೇಳಿದರು. ಅಂದ ಹಾಗೆ ಸಮೂಹದ ಸ್ಥಾಪಕರಾದ ಧೀರೂಭಾಯಿ ಅಂಬಾನಿ ಅವರ ಜನ್ಮದಿನವನ್ನು ರಿಲಯನ್ಸ್ ಕುಟುಂಬ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ(Dhirubhai Ambani’s Birthday). ರಿಲಯನ್ಸ್ ಕುಟುಂಬ ದಿನದ (Reliance Family Day) ಅಂಗವಾಗಿ ಗುರುವಾರದಂದು ಉದ್ಯೋಗಿಗಳನ್ನು ಉದ್ದೇಶಿಸಿ ಮುಕೇಶ್ ಮಾತನಾಡಿದರು. ರಿಲಯನ್ಸ್ ಈಗ ಡಿಜಿಟಲ್ ಡೇಟ್ ಪ್ಲಾಟ್ ಫಾರ್ಮ್ಸ್ ಮತ್ತು ಎಐ (ಕೃತಕ ಬುದ್ಧಿಮತ್ತೆ) ಅಳವಡಿಕೆಯಲ್ಲಿ ಜಾಗತಿಕ ನಾಯಕರ ಸಾಲಿನಲ್ಲಿ ರಿಲಯನ್ಸ್ ಸ್ಥಾನ ಪಡೆಯುವ ಗುರಿ ಇರಿಸಿಕೊಂಡಿದೆ ಎಂದು ಹೇಳಿದರು.

“ಇವತ್ತಿಗೆ ಉದ್ಯಮ ದೇಶೀಯ ಮತ್ತು ಜಾಗತಿಕ ಜಾಗತಿಕ ಪರಿಸರುವು ಬಹಳ ವೇಗವಾಗಿ ಬದಲಾಗುತ್ತಿದೆ. ಅಲ್ಲಿ ಸಂತೃಪ್ತಿಗೆ ಯಾವುದೇ ಅವಕಾಶ ಇಲ್ಲ,” ಎಂದು ಅವರು ತಿಳಿಸಿದ್ದು, “ರಿಲಯನ್ಸ್ ಹಿಂದೆಯೂ ಸಂತೃಪ್ತಗೊಂಡಿಲ್ಲ ಮತ್ತು ಭವಿಷ್ಯದಲ್ಲೂ ಸಂತೃಪ್ತ ಆಗುವುದಿಲ್ಲ,” ಎಂದು ಅವರು ಹೇಳಿದರು. “ನಿರಂತರವಾದ ನಾವೀನ್ಯತೆ ಮತ್ತು ಮರು ಸಂಶೋಧನೆಯ ಮೂಲಕ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಮಾಡುವುದಕ್ಕೆ” ರಿಲಯನ್ಸ್ ಹೆಸರು ಪಡೆದಿದೆ ಎಂದರು.

ಮುಂಬೈನಲ್ಲಿ ಸಣ್ಣ ಜವಳಿ ಉತ್ಪಾದನಾ ಘಟಕದೊಂದಿಗೆ ಪ್ರಾರಂಭಿಸಿ, ರಿಲಯನ್ಸ್ ಹಿಮ್ಮುಖ ಸಂಯೋಜನೆ ಮಾಡಿತು. ಇದು ಪೆಟ್ರೋಕೆಮಿಕಲ್ಸ್ ಆರಂಭಿಸಿತು (ಜವಳಿಗಳಿಗೆ ಫೀಡ್ ಸ್ಟಾಕ್ ಅನ್ನು ಒದಗಿಸುತ್ತದೆ) ಮತ್ತು ದೇಶದ ಅತಿದೊಡ್ಡ ಉತ್ಪಾದಕ ಆಯಿತು. ಆ ನಂತರ ತೈಲ ಸಂಸ್ಕರಣಾಗಾರ ಆರಂಭಿಸಿತು. ಇದು ದೇಶದಲ್ಲೇ ಅತಿದೊಡ್ಡ ಸಂಸ್ಕರಣಾಗಾರವಾಗಿತ್ತು ಮತ್ತು ಆ ನಂತರ ವಿಶ್ವದಲ್ಲೇ ಅತಿದೊಡ್ಡ ಏಕಸ್ಥಳ ತೈಲ ಸಂಸ್ಕರಣಾಗಾರವಾಗಿ ವಿಸ್ತರಣೆ ಆಯಿತು.

ರಿಲಯನ್ಸ್ ಇಂಡಸ್ಟ್ರೀಸ್ 2005ರಲ್ಲಿ ಚಿಲ್ಲರೆ (ರೀಟೇಲ್) ವಲಯವನ್ನು ಪ್ರವೇಶಿಸಿತು ಮತ್ತು ಈಗ ದೇಶದಲ್ಲಿ ಕಿರಾಣಿ ಅಂಗಡಿಗಳು, ಹೈಪರ್‌ಮಾರ್ಕೆಟ್‌ಗಳು ಮತ್ತು ಆನ್‌ಲೈನ್ ಚಿಲ್ಲರೆ ವ್ಯಾಪಾರದ ಅತಿದೊಡ್ಡ ಆಪರೇಟರ್ ಆಗಿದೆ. 2016ರಲ್ಲಿ ಇದು ಟೆಲಿಕಾಂ ಸೇವೆ ಜಿಯೋವನ್ನು ಪ್ರಾರಂಭಿಸಿತು, ಇದು ಶೀಘ್ರವಾಗಿ ಭಾರತದಲ್ಲಿ ಅತಿದೊಡ್ಡ ಆಪರೇಟರ್ ಮತ್ತು ವಿಶ್ವದ ಮೂರನೇ ಅತಿದೊಡ್ಡ ಆಪರೇಟರ್ ಆಯಿತು. ಇವತ್ತಿಗೆ ರಿಲಯನ್ಸ್ ಹೊಸ ಇಂಧನ ವ್ಯವಹಾರಗಳಿಗಾಗಿ ಗಿಗಾ-ಸ್ಕೇಲ್ (ಬೃಹತ್ ಪ್ರಮಾಣದ) ಕಾರ್ಖಾನೆಗಳನ್ನು ನಿರ್ಮಿಸುತ್ತಿದೆ ಮತ್ತು ಹಣಕಾಸು ಸೇವೆ ಕ್ಷೇತ್ರದಲ್ಲೂ ಮುನ್ನುಗ್ಗಿದೆ.

“ನಾವು ಗುರಿಯನ್ನು ಎತ್ತರಕ್ಕೆ ನಿಗದಿ ಮಾಡುವ ಧೈರ್ಯವನ್ನು ತೋರಿಸಿದ್ದೇವೆ ಮತ್ತು ಹೊಸ ದಾಖಲೆಗಳನ್ನು ಸೃಷ್ಟಿಸಲು ಇನ್ನಷ್ಟು ಎತ್ತರಕ್ಕೆ ಜಿಗಿಯುವ ಸಾಮರ್ಥ್ಯವನ್ನು ತೋರಿಸಿದ್ದೇವೆ. ಈ ಮೂಲಕ ರಿಲಯನ್ಸ್ ದೀರ್ಘಕಾಲಿಕ ಬೆಳವಣಿಗೆಯನ್ನು ಸಾಧಿಸಿದೆ,” ಎಂದು ರಿಲಯನ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಂಬಾನಿ ಹೇಳಿದರು. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ (ಐದನೇ ಸ್ಥಾನದಿಂದ) ಆಗಲು ಮುಂದೆ ಸಾಗುತ್ತಿರುವಾಗ, ಅಭೂತಪೂರ್ವ ಅವಕಾಶವು ರಿಲಯನ್ಸ್‌ಗೆ ಕಾಯುತ್ತಿದೆ ಎಂದು ಅವರು ಹೇಳಿದರು.

“ರಿಲಯನ್ಸ್ ಗೆ ಆಗಲು ಸಾಧ್ಯವಿದೆ ಮತ್ತು ರಿಲಯನ್ಸ್ ವಿಶ್ವದ ಟಾಪ್ 10 ಉದ್ಯಮ ಸಮೂಹ ಸಂಸ್ಥೆಗಳಲ್ಲಿ ಒಂದಾಗಿ ಬೆಳೆಯುತ್ತದೆ,” ಎಂದು ಅವರು ಯಾವುದೇ ನಿಗದಿತ ಸಮಯದ ಗುರಿಯನ್ನು ನೀಡದೆ ಅವರು ‌‌ಹೇಳಿದರು. ಆದಾಯ, ಲಾಭ ಮತ್ತು ಮಾರುಕಟ್ಟೆ ಮೌಲ್ಯದಿಂದ ರಿಲಯನ್ಸ್ ಭಾರತದ ಅತಿದೊಡ್ಡ ಕಂಪನಿ ಆಗಿದೆ. ಇದು ಸಾಧ್ಯವಾಗಬೇಕು ಎಂದಾದಲ್ಲಿ ಸಹಭಾಗಿತ್ವ ಮತ್ತು ವ್ಯವಸ್ಥೆಗಳ ಸುಧಾರಣೆಯ ಮೂಲಕ ಗ್ರಾಹಕರಿಗೆ ಯಾವಾಗಲೂ ಅತಿಹೆಚ್ಚಿನ ಮೌಲ್ಯವನ್ನು ಒದಗಿಸುವಲ್ಲಿ ‘ಲೇಸರ್ ರೀತಿ‘ಯಲ್ಲಿ ಗಮನ ಕೇಂದ್ರೀಕರಿಸಿ ಕೆಲಸ ಮಾಡಬೇಕು ಎಂದು ಅವರು ಉದ್ಯೋಗಿಗಳನ್ನು ಕೇಳಿದರು. “ಮುಂದಿನ ವರ್ಷಗಳಲ್ಲಿ, ಯಾರೂ ಹಿಂದೆಂದೂ ಮಾಡಿರದ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ನಾವು ಇನ್ನಷ್ಟು ಶ್ರಮಿಸಬೇಕು,” ಎಂದು ಅವರು ಹೇಳಿದರು.

ಇದೇ ವೇಳೆ ಕಂಪನಿಯ ಕಾರ್ಯಗಳು ಯಾವಾಗಲೂ ಸಮುದಾಯದ ನಂಬಿಕೆಯನ್ನು ಗೆಲ್ಲಬೇಕು. ಅಲ್ಲದೆ, ಇದು ನಿರಂತರವಾಗಿ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಬೇಕು ಎಂದರು. “ನಮ್ಮ ಎಲ್ಲ ವ್ಯವಹಾರಗಳು ಅದ್ಭುತವಾಗಿ ಬೆಳೆದಾಗ ನಾವು ಭಾರತದ ಸಮಗ್ರ ಸಮೃದ್ಧಿಗೆ ಹೆಚ್ಚಿನ ಕೊಡುಗೆ ನೀಡಬಹುದು ಮತ್ತು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಬಹುದು,” ಎಂದರು.

ಹೊಸ ವರ್ಷಕ್ಕೆ ತಮ್ಮ ಮೂರು ಪ್ರಮುಖ ಸಂದೇಶಗಳನ್ನು ಮುಕೇಶ್ ನೀಡಿದರು: ಡಿಜಿಟಲ್ ಡೇಟಾ ಪ್ಲಾಟ್‌ಫಾರ್ಮ್‌ಗಳು ಮತ್ತು ಎಐ ಅಳವಡಿಕೆಯಲ್ಲಿ ಜಾಗತಿಕ ನಾಯಕರಲ್ಲಿ ರಿಲಯನ್ಸ್ ಸ್ಥಾನವನ್ನು ಪಡೆಯುವುದು, ಪ್ರತಿಭೆಗಳ ಪುಷ್ಟೀಕರಣದಲ್ಲಿಯೂ ಜಾಗತಿಕ ನಾಯಕರಲ್ಲಿ ಒಬ್ಬರಾಗಿ ಸ್ಥಾನ ಪಡೆಯುವುದು ಮತ್ತು ಸಾಂಸ್ಥಿಕ ಸಂಸ್ಕೃತಿಯಲ್ಲಿಯೂ ಜಾಗತಿಕ ನಾಯಕರಲ್ಲಿ ಸುರಕ್ಷಿತ ಸ್ಥಾನ ಗಳಿಸಬೇಕು ಎಂದು ಅಂಬಾನಿ ಹೇಳಿದರು.

ಸಾಂಸ್ಥಿಕ ಸಂಸ್ಕೃತಿಯ ಬಗ್ಗೆ ವಿವರಿಸಿದ ಅಂಬಾನಿ, ರಿಲಯನ್ಸ್ ಸಂಸ್ಕೃತಿಯ ಪ್ರಮುಖ ತತ್ವವೆಂದರೆ ಸಂಸ್ಥಾಪಕರ ಮನಸ್ಥಿತಿಯೊಂದಿಗೆ ಕೆಲಸ ಮಾಡುವುದು. “ಇದರರ್ಥ ಮಾಲೀಕತ್ವದ ಮನಸ್ಥಿತಿಯೊಂದಿಗೆ ಕೆಲಸ ಮಾಡುವುದು,” ಎಂದರು.

“ಸಂಸ್ಥಾಪಕರ ಉದ್ದೇಶ ಮತ್ತು ಉತ್ಸಾಹವನ್ನು ನೀವು ಹೊಂದಿದಾಗ ನೀವು ಪ್ರತಿಯೊಬ್ಬರೂ ರಿಲಯನ್ಸ್‌ನ ಮಾಲೀಕರಾಗುತ್ತೀರಿ” ಎಂದು ಅವರು ಉದ್ಯೋಗಿಗಳಿಗೆ ಹೇಳಿದರು. “ಯುವ ನಾಯಕರು ತಪ್ಪು ಮಾಡುತ್ತಾರೆ, ಅದು ಖಚಿತ. “ಆದರೆ ಅವರಿಗೆ ನನ್ನ ಸಲಹೆ ಸರಳವಾಗಿದೆ: ಹಿಂದಿನ ತಪ್ಪುಗಳ ಪೋಸ್ಟ್ ಮಾರ್ಟಂ ನಡೆಸಲು ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ. ಬದಲಿಗೆ, ಅದೇ ತಪ್ಪುಗಳನ್ನು ಪುನರಾವರ್ತಿಸದಿರಲು ಕಲಿಯಿರಿ,” ಎಂದು ಹೇಳಿದರು.

ಎಲ್ಲಾ ತಂಡಗಳ ಸರಾಸರಿ ವಯಸ್ಸನ್ನು 30ರಲ್ಲಿ ಇರುವಂತೆ ಖಚಿತಪಡಿಸಿಕೊಳ್ಳುವ ಮೂಲಕ ರಿಲಯನ್ಸ್ ಎಂದೆಂದಿಗೂ ತಾರುಣ್ಯಾವಸ್ಥೆಯಲ್ಲಿ ಇರಬೇಕು ಎಂದ ಮುಕೇಶ್ ಅಂಬಾನಿ ಹೇಳಿದರು. “ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ: “ರಿಲಯನ್ಸ್‌ನ ಭವಿಷ್ಯವು ಆಕಾಶ್, ಇಶಾ, ಅನಂತ್ ಮತ್ತು ಅವರ ಪೀಳಿಗೆಗೆ ಸೇರಿದೆ” ಎಂದು ಅವರು ತಮ್ಮ ಮೂವರು ಮಕ್ಕಳನ್ನು ಉಲ್ಲೇಖಿಸಿ ಹೇಳಿದರು.

ಈ ಸುದ್ದಿಯನ್ನೂ ಓದಿ: RIL Q4 Results : ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ಜನವರಿ-ಮಾರ್ಚ್‌ನಲ್ಲಿ 19,299 ಕೋಟಿ ರೂ. ನಿವ್ವಳ ಲಾಭ, 19% ಏರಿಕೆ

Exit mobile version