ಮುಂಬೈ: ಔರಂಗಜೇಬ್, ಟಿಪ್ಪು ಸುಲ್ತಾನ ವಿಷಯಕ್ಕೆ ಗಲಾಟೆ ನಡೆದಿದ್ದ ಮಹಾರಾಷ್ಟ್ರದಲ್ಲೀಗ ವಂದೇ ಮಾತರಂ ವಿಷಯಕ್ಕೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿದೆ. ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ (MLA Abu Azmi) ಅವರು, “ವಂದೇ ಮಾತರಂ” ಎಂಬ ಘೋಷಣೆ ಕೂಗುವುದಿಲ್ಲ ಎಂದು ನೀಡಿರುವ ಹೇಳಿಕೆಯು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭವಾಗಿದ್ದು, ದೆಹಲಿಯಲ್ಲಿ ಶ್ರದ್ಧಾ ವಾಳ್ಕರ್‌ನನ್ನು ಹತ್ಯೆ ಮಾಡಿದ ಅಫ್ತಾಬ್ ಪೂನಾವಾಲಾ ಪ್ರಕರಣ ಸೇರಿ ಹಲವು ವಿಷಯಗಳ ಕುರಿತು ಚರ್ಚೆಯಾಗಿವೆ. ಅಫ್ತಾಬ್ ಪೂನಾವಾಲಾ ಮಾಡಿರುವುದು ತಪ್ಪೇ. ಆದರೆ, ಇಡೀ ಮುಸ್ಲಿಮರ ವಿರುದ್ಧ ಘೋಷಣೆ ಕೂಗುವುದು, ಮುಸ್ಲಿಮರನ್ನು ಕಟಕಟೆಗೆ ತಂದು ನಿಲ್ಲಿಸುವುದು ತಪ್ಪು” ಎಂದು ಹೇಳಿದ್ದಾರೆ.
#WATCH | Maharashtra Samajwadi Party MLA Abu Azmi says, "I respect 'Vande Mantram' but I can't read it because my religion says we can't bow down to anyone except 'Allah'. pic.twitter.com/uYJmkR7GWj
— ANI (@ANI) July 19, 2023
ವಂದೇ ಮಾತರಂ ವಿಷಯಕ್ಕೆ ಸಂಬಂಧಿಸಿದಂತೆ, ಸಂಭಾಜಿ ನಗರದಲ್ಲಿ ಗಲಾಟೆ ನಡೆದಿರುವ ಕುರಿತು ಮಾತನಾಡಿದ ಅಜ್ಮಿ, “ಭಾರತದಲ್ಲಿ ವಾಸಿಸಬೇಕು ಎಂದರೆ ವಂದೇ ಮಾತರಂ ಘೋಷಣೆ ಕೂಗಲೇಬೇಕು ಎಂದು ಹೇಳುತ್ತಾರೆ. ಆದರೆ, ನಾನು ವಂದೇ ಮಾತರಂ ಎಂಬ ಘೋಷಣೆ ಕೂಗಲು ಆಗುವುದಿಲ್ಲ. ವಂದೇ ಮಾತರಂ ಕೂಗಲು ನಮ್ಮ ಧರ್ಮ ಅನುವು ಮಾಡಿಕೊಡುವುದಿಲ್ಲ. ನಾವು ದೇವರಲ್ಲಿ ಮಾತ್ರ ನಂಬಿಕೆ ಇಟ್ಟವರು” ಎಂದಿದ್ದಾರೆ.
ಇದನ್ನೂ ಓದಿ: Siddaramaiah Video | ವಂದೇ ಮಾತರಂ ಹಾಡೋದು ಬೇಡಯ್ಯ ಎಂದ ಸಿದ್ದರಾಮಯ್ಯ!
ಟೀಕಾಸ್ತ್ರ ಪ್ರಯೋಗಿಸಿದ ಬಿಜೆಪಿ
ಅಬು ಅಜ್ಮಿ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. “ಸಮಾಜವಾದಿ ಪಾರ್ಟಿಯು I.N.D.I.A ಒಕ್ಕೂಟದ ಭಾಗವಾಗಿದೆ. ಆದರೆ, ಆ ಪಕ್ಷದ ಶಾಸಕರೊಬ್ಬರು ವಂದೇ ಮಾತರಂ ಎನ್ನುವುದಿಲ್ಲ ಎಂಬುದಾಗಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹೇಳುತ್ತಾರೆ. ಅವರು ಔರಂಗಜೇಬನ ಎದುರು ಹೋಗಿ ತಲೆ ಬಗ್ಗಿಸುತ್ತಾರೆ. ಆದರೆ, ಅವರಿಗೆ ವಂದೇ ಮಾತರಂ ಎನ್ನಲು ನಾಚಿಕೆಯಾಗುತ್ತದೆ. ಪ್ರತಿಪಕ್ಷಗಳು ತಮ್ಮ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟುಕೊಂಡು, ಇಂಡಿಯಾ ವಿರೋಧಿ ಕೃತ್ಯದಲ್ಲಿ ಏಕೆ ತೊಡಗುತ್ತಾರೆ” ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ತಿರುಗೇಟು ನೀಡಿದ್ದಾರೆ.