Site icon Vistara News

Tarek Fatah Dead: ಖ್ಯಾತ ಪಾಕ್-ಕೆನಡಿಯನ್ ಅಂಕಣಕಾರ, ಲೇಖಕ ತಾರೆಕ್ ಫತಾಹ್ ನಿಧನ

Renowned Pakistani-Canadian columnist, author Tarek Fatah passes away

ನವದೆಹಲಿ: ಪ್ರಖ್ಯಾತ ಲೇಖಕ, ಅಂಕಣಕಾರ, ಪಾಕ್-ಕೆನಡಿಯನ್ ತಾರೆಕ್ ಫತಾಹ್ ಅವರು ಮೃತರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ದೀರ್ಘಕಾಲದಿಂದ ಅನಾರೋಗ್ಯಕ್ಕೀಡಾಗಿದ್ದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ತಾರೆಕ್ ಫತಾಹ್ ಅವರ ನಿಧನವನ್ನು ಅವರ ಪುತ್ರಿ ನತಾಶಾ ಫತಾಹ್ ಅವರು ಖಚಿತಪಡಿಸಿದ್ದಾರೆ(Tarek Fatah Dead).

ತಾರೆಕ್ ಫತಾಹ್ ಅವರ ಪುತ್ರಿ ನತಾಶಾ ಅವರ ಟ್ವೀಟ್

ಪಂಜಾಬ್‌ನ ಸಿಂಹ, ಹಿಂದೂಸ್ತಾನದ ಪುತ್ರ, ಕೆನಡಾವನ್ನು ಪ್ರೀತಿಸುವವ, ಸತ್ಯ ಹೇಳುವಾತ, ನ್ಯಾಯಯಕ್ಕಾಗಿ ಹೋರಾಡುವ, ತುಳಿತಕ್ಕೊಳಗಾದವರು, ದೀನದಲಿತರು, ಹಿಂದುಳಿದವರು ಧ್ವನಿ, ತಾರೆಕ್ ಫತಾಹ್ ಬ್ಯಾಟನ್ ಪಾಸ್ ಮಾಡಿದ್ದಾರೆ. ಅವರ ಕ್ರಾಂತಿ ಅವರನ್ನು ತಿಳಿದಿರುವವರು ಮತ್ತು ಪ್ರೀತಿಸುವ ಎಲ್ಲರೊಂದಿಗೆ ಅದು ಮುಂದರಿಯಲಿದೆ. ನೀವು ನಮ್ಮೊಂದಿಗೆ ಸೇರಿಕೊಳ್ಳುತ್ತೀರಾ? 1949-2023 ಎಂದು ಫತಾಹ್ ಅವರ ಪುತ್ರಿ ನತಾಶಾ ಟ್ವೀಟ್ ಮಾಡಿದ್ದಾರೆ.

ನನ್ನ ತಂದೆಯೊಂದಿಗೆ ನಿಧಾನವಾದ ಭಾನುವಾರದ ಮುಂಜಾನೆಯನ್ನು ಆನಂದಿಸುತ್ತಿದ್ದೇನೆ. ಹಳೆಯ ಬಾಲಿವುಡ್ ಹಾಡುಗಳನ್ನು ಕೇಳುತ್ತಿದ್ದೇನೆ ಮತ್ತು ಭಾರತ ಮಾತೆಯ ಮೇಲಿನ ನಮ್ಮ ಪ್ರೀತಿಗಾಗಿ ನಾನು ಕಿತ್ತಳೆ ಬಣ್ಣ ಬಟ್ಟೆ ಧರಿಸಿದ್ದೇನೆ ಎಂದು ನತಾಶಾ ಅವರು ಟ್ವೀಟ್‌ ಮಾಡಿದ್ದರು.

Tarek Fatah ನಿಧನಕ್ಕೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಂಬನಿ

ಫತಾಹ್ ಅವರು ಇಸ್ಲಾಂ ಧರ್ಮದ ಬಗ್ಗೆ ಪ್ರಗತಿಪರ ದೃಷ್ಟಿಕೋನಗಳು ಮತ್ತು ಪಾಕಿಸ್ತಾನದ ಬಗ್ಗೆ ಅವರ ಕಡು ನಿಲುವುಗಳಿಗೆ ಹೆಸರುವಾಸಿಯಾಗಿದ್ದರು. ಅವರು ತಮ್ಮನ್ನು ‘ಪಾಕಿಸ್ತಾನದಲ್ಲಿ ಜನಿಸಿದ ಭಾರತೀಯ’ ಮತ್ತು ‘ಇಸ್ಲಾಂನಲ್ಲಿ ಜನಿಸಿದ ಪಂಜಾಬಿ’ ಎಂದು ಕರೆದುಕೊಳ್ಳುತ್ತಿದ್ದರು .ಭಾರತದಲ್ಲಿ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ನೀಡಿದ್ದರು.

ತಾರೆಕ್ ಫತಾಹ್ ಅವರು 1949 ನವೆಂಬರ್ 20ರಂದು ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದರು. ಅವರು 1980ರ ದಶಕದ ಆರಂಭದಲ್ಲಿ ಕೆನಡಾಕ್ಕೆ ವಲಸೆ ಹೋದರು. ರಾಜಕೀಯ ಕಾರ್ಯಕರ್ತ, ಪತ್ರಕರ್ತ ಮತ್ತು ದೂರದರ್ಶನ ನಿರೂಪಕರಾಗಿ ಕೆಲಸ ಮಾಡಿದರು. ಅವರು ‘ಚೇಸಿಂಗ್ ಎ ಮಿರಾಜ್: ದಿ ಟ್ರಾಜಿಕ್ ಇಲ್ಯೂಷನ್ ಆಫ್ ಆನ್ ಇಸ್ಲಾಮಿಕ್ ಸ್ಟೇಟ್’ ಮತ್ತು ‘ದಿ ಯಹೂದಿ ಈಸ್ ನಾಟ್ ಮೈ ಎನಿಮಿ: ಅನ್‌ವೇಲಿಂಗ್‌ ದಿ ಮಿಥ್ಸ್ ದ್ಯಾಟ್ ಫ್ಯೂಯಲ್ ಮುಸ್ಲಿಂ ಆ್ಯಂಟಿ-ಸ್ಮಿಟಿಸಂ’ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

ಇದನ್ನೂ ಓದಿ: ಕೆ.ವಿ ತಿರುಮಲೇಶ್‌: ಕನ್ನಡಕ್ಕೆ ಸದಾ ಹೊಸದನ್ನು ತರುತ್ತಿದ್ದ ಕವಿಹೃದಯಿ, ಚಿಂತಕ

ತಾರೆಕ್ ಫತಾಹ್ ನಿಧನ ಸುದ್ದಿ ಗೊತ್ತಾಗುತ್ತಿದಂತೆ ಹಲವರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಂತಾಪಗಳ ಟ್ವೀಟ್‌ಗಳಾಗುತ್ತಿವೆ. ನಟ ರಣವೀರ್ ಶೋರೆ ಅವರು ಟ್ವೀಟ್ ಮಾಡಿ, ಫತಾಹ್ ನಿಧನ ಸುದ್ದಿ ತಿಳಿದು ದುಃಖವಾಗಿದೆ. ನನಗೆ ಗೊತ್ತಿರುವ ಪೈಕಿ ಅವರು ಭಾರೀ ಧೈರ್ಯಶಾಲಿ ಮತ್ತು ಜಾಣ ವ್ಯಕ್ತಿಯಾಗಿದ್ದರು. ಅವರಿಗೆ ಸದ್ಗತಿ ಸಿಗಲಿ. ಅವರು ತಮ್ಮ ಪಾಲಿನಗಿಂತಲೂ ಹೆಚ್ಚಿನ ಒಳ್ಳೆಯದನ್ನು ಈ ಜಗತ್ತಿಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

Exit mobile version