Site icon Vistara News

Repo Rate: ರೆಪೋ ರೇಟ್‌ನಲ್ಲಿ ಬದಲಾವಣೆ ಇಲ್ಲ! ದಾಖಲೆ ಏರಿಕೆ ಕಂಡ ಷೇರುಪೇಟೆ

Repo rate unchanged by RBI and Stock markets hits new high

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ರೆಪೋ ರೇಟ್‌ನಲ್ಲಿ (Repo Rate) ಯಾವುದೇ ಬದಲಾವಣೆ ಮಾಡಿಲ್ಲ. ಮೂರು ದಿನಗಳ ಹಣಕಾಸು ನೀತಿ (Monetary Policy Committee) ಸಭೆಯ ಬಳಿಕ ರೆಪೋ ರೇಟ್ ಅನ್ನು ಶೇ.6.50ರಲ್ಲೇ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಲಾಯಿತು. ಸತತ ಐದನೇ ಬಾರಿಗೆ ಆರ್‌ಬಿಐ ರೆಪೋ ರೇಟ್‌ನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಆರ್‌ಬಿಐನ ನಿರ್ಧಾರದ ಈ ಬೆನ್ನಲ್ಲೇ ಷೇರು ಪೇಟೆ ಹೊಸ ದಾಖಲೆಯನ್ನು ಬರೆದಿದೆ. ನಿಫ್ಟಿ (Nifty) ಇದೇ ಮೊದಲ 21000 ಗಡಿ ದಾಟಿದರೆ, ಸೆನ್ಸೆಕ್ಸ್ (Sensex) ಆಲ್ಮೋಸ್ಟ್ 70 ಸಾವಿರ ಹತ್ತಿರಕ್ಕೆ ಹೋಗಿತ್ತು(Stock Market).

ಕೇಂದ್ರೀಯ ಬ್ಯಾಂಕಿನ ಹಣಕಾಸು ನೀತಿ ಸಮಿತಿಯು (MPC) ಸಹ withdrawal of accommodation ಮೇಲೆ ಕೇಂದ್ರೀಕರಿಸುವ ತನ್ನ ನಿಲುವನ್ನು ಉಳಿಸಿಕೊಂಡಿದೆ. ದರಗಳನ್ನು ಬದಲಾಗದೆ ಬಿಡುವ ನಿರ್ಧಾರವನ್ನು 6 ಸದಸ್ಯರ ಎಂಪಿಸಿ ಪ್ಯಾನೆಲ್ ಸರ್ವಾನುಮತದಿಂದ ಮತಕ್ಕೆ ಹಾಕಿತು. ದರ ಬದಲಾವಣೆ ಮಾಡದಿರಲು 6 ಸದಸ್ಯರು ಐದು ಸದಸ್ಯರು ತಮ್ಮ ಮತ ಚಲಾಯಿಸಿದರು.

ಆರ್‌ಬಿಐನ ನೀತಿ ಕ್ರಮಗಳ ಘೋಷಣೆಗೆ ಸೆಕೆಂಡುಗಳ ಮೊದಲು, ನಿಫ್ಟಿ 50 ಮೊದಲ ಬಾರಿಗೆ 21000 ಗಡಿ ದಾಟಿತು. ನೀತಿ ಘೋಷಣೆಯ ನಂತರ ಸೂಚ್ಯಂಕವು 0.4% ಏರಿಕೆಯಾಗಿ 20989.05 ಪಾಯಿಂಟ್‌ಗಳಲ್ಲಿ ವಹಿವಾಟು ನಡೆಸುತ್ತಿದೆ. 30 ಸ್ಟಾಕ್ ಸೆನ್ಸೆಕ್ಸ್ ಕೂಡ, ಘೋಷಣೆಯ ಮೊದಲು 69888.33 ಪಾಯಿಂಟ್‌ಗಳ ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿತು ಮತ್ತು ಲಾಭವನ್ನು ಹಿಡಿದಿಟ್ಟುಕೊಂಡಿತು. ಘೋಷಣೆಯ ನಂತರ 0.4% ರಷ್ಟು 69779.80 ಪಾಯಿಂಟ್‌ಗಳಲ್ಲಿ ವಹಿವಾಟು ನಡೆಸಿತು.

ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ನಿಧಾನವಾಗಿ ಇಳಇಯುತ್ತಿದ್ದು, ದೇಶೀಯ ಆರ್ಥಿಕ ಚಟುವಟಿಕೆಗಳು ಕೂಡ ಗಮನಾರ್ಹವಾಗಿ ಸುಧಾರಣೆಕೊಂಡಿವೆ. ಪರಿಣಾಮವಾಗಿ, ಎಂಪಿಸಿಯು ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಬಿಡಲು ನಿರ್ಧರಿಸಿತು. ಆದರೆ ಹೆಚ್ಚು ಜಾಗರೂಕತೆ ಮತ್ತು ವಿಕಾಸದ ಬೆಳವಣಿಗೆಗಳ ಬಗ್ಗೆ ಎಚ್ಚರದಿಂದ ಇದ್ದು, ಸೂಕ್ತವಾದ ನೀತಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಆರ್‌ಬಿಐ ಗೌರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಆಶ್ಚರ್ಯಕರ ರೀತಿಯಲ್ಲಿ ಜಿಡಿಪಿ ಶೇ.7.6 ಬೆಳವಣಿಗೆ ದಾಖಲಿಸಿದೆ. ಹಾಗಾಗಿ, ಆರ್‌ಬಿಐ ಕೂಡ 2024ರ ಹಣಕಾಸು ವರ್ಷಕ್ಕೆ ತನ್ನ ಜಿಡಿಪಿ ಅಂದಾಜು ಬೆಳವಣಿಗೆಯನ್ನು ಶೇ.6.5ರಿಂದ 7.0ಕ್ಕೆ ಏರಿಸಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ನೈಜ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಹಿಂದಿನ 6.0% ರಿಂದ 6.5% ಕ್ಕೆ ಏರಿಸಲಾಗಿದೆ ಮತ್ತು ಮಾರ್ಚ್ ತ್ರೈಮಾಸಿಕಕ್ಕೆ 30 ಮೂಲ ಅಂಕಗಳಿಂದ 6.0% ಗೆ ಏರಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Money Guide: ಇನ್ನು ಸಾಲ ಮಾಡಿ ತುಪ್ಪ ತಿನ್ನೋದು ತುಸು ಕಷ್ಟ!; ಆರ್‌ಬಿಐ ನಿಯಮ ಏನು ಹೇಳುತ್ತದೆ?

Exit mobile version