ಬೆಂಗಳೂರು: ಪಾರ್ಕ್ನಲ್ಲಿ, ಪಬ್ನಲ್ಲಿ ಪ್ರಪೋಸ್ ಮಾಡುವುದು ಮಾಮೂಲಿ. ಅದೇನೂ ವಿಶೇಷಲ್ಲ. ಆದರೆ, ಟಿವಿಯ, ಲೈವ್ ನ್ಯೂಸ್ನಲ್ಲಿ ಪ್ರಪೋಸ್ ಮಾಡಿ ಹೂ ಕೊಟ್ಟು ಉಂಗುರ ಹಾಕಿದರೆ ಹೇಗಿರುತ್ತದೆ? ನೋಡೋರಿಗಂತೂ ಫುಲ್ ಖುಷಿ ಖಂಡಿತ. ಡಬ್ಲ್ಯುಆರ್ಸಿಬಿ ಚಾನೆಲ್ನಲ್ಲಿ ಇಂಥ ಘಟನೆ ನಡೆದಿದೆ. ಎನ್ಬಿಸಿ ಅಂಗಸಂಸ್ಥೆಯಾಗಿರುವ ಡಬ್ಲ್ಯುಆರ್ಸಿ-ಟಿವಿಯ ಸುದ್ದಿ ನಿರೂಪಕಿ ಕಾರ್ನೆಲಿಯಾ ನಿಕೋಲ್ಸನ್ ದಿನದ ಮುಖ್ಯಾಂಶಗಳನ್ನು ನೀಡುವ ನಡುವೆ ಅವರ ಬಾಯ್ಫ್ರೆಂಡ್ ಹಾಗೂ ಜರ್ನಲಿಸ್ಟ್ ಹೂ ಕೊಟ್ಟು ಉಂಗುರ ಹಾಕಿ ಪ್ರಪೋಸ್ ಮಾಡಿದ್ದಾರೆ.
ಆ್ಯಂಕರ್ನ ಪ್ರಿಯತಮನ ಹೆಸರು ರಿಲೆ ನಾಗೆಲ್. ಕಾರ್ನೆಲಿಯಾ ನಿಕೋಲ್ಸನ್ ಸುದ್ದಿ ಓದುತ್ತಿದ್ದಾಗಲೇ ಮಧ್ಯ ಪ್ರವೇಶಿಸಿ ಉಂಗುರ ತೊಡಿಸಿದ್ದಾರೆ. ಅಲ್ಲದೆ ತಮ್ಮಿಬ್ಬರ ಪ್ರೀತಿಯ ವಿಚಾರವನ್ನು ಜಗಜ್ಜಾಹೀರುಗೊಳಿಸಿದ್ದಾರೆ.
ಉಂಗುರ ತೊಡಿಸಿದ ಬಳಿಕ ರಿಲೆ ನಾಗೆಲ್ ಪ್ರೇಕ್ಷಕರೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಅದು ಕೂಡ ಸುದ್ದಿ ಮಾದರಿಯಲ್ಲಿ. ನನ್ನ ಬಳಿ ಬಹಳ ವಿಶೇಷವಾದ ವರದಿ ಇದೆ. ಕಾರ್ನೆಲಿಯಾ ಮತ್ತು ನಾನು ಸುಮಾರು ನಾಲ್ಕು ವರ್ಷಗಳ ಹಿಂದೆ ಮೊಂಟಾನಾದಲ್ಲಿ ಸುದ್ದಿ ಕೇಂದ್ರದಲ್ಲಿ ಭೇಟಿಯಾಗಿದ್ದೆವು. ಅಲ್ಲಿಂದಲೇ ಅವರ ಬಗ್ಗೆ ಆಕರ್ಷಿತನಾಗಿದ್ದೆ. ಅವರನ್ನು ಮೊದಲು ಭೇಟಿಯಾದಾಗ, ತುಂಬಾ ಖುಷಿ ಎನಿಸಿತು. ಅವರು ಅದ್ಭುತ ವ್ಯಕ್ತಿತ್ವವನ್ನು ಹೊಂದಿದ್ದರು. ಆ ದಿನ ಹೊಳೆಯುವಂತೆ ಕಂಡಿದ್ದರು. ಅಂದಿನಿಂದ ಮನೆಯವರಿಗೆ ಗೊತ್ತಿಲ್ಲದ ಹಾಗೆ ಪ್ರೀತಿಸಲು ಆರಂಭಿಸಿದೆ. ಕಾರ್ನಲಿಯಾ ಅವರ ನಗು ಇಡೀ ಪರಿಸರವನ್ನು ಬೆಳಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಕಾರ್ನೆಲಿಯಾ ಕೂಡ ಗೆಳೆಯ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾಳೆ. ಹೌದು ಎಂದು ಹೇಳಿದ ಅವರು ನಾಗೆಲ್ ಅವರನನ್ನು ಅಪ್ಪಿಕೊಂಡು ಮುತ್ತಿಟ್ಟಿದ್ದಾರೆ.
ವೈರಲ್ ಆದ ವಿಡಿಯೊ
ವೀಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡ ಕೂಡಲೇ ಅದು ವೈರಲ್ ಆಯಿತು. ಸಿಕ್ಕಾಪಟ್ಟೆ ಕಾಮೆಂಟ್ಗಳು ಬರಲು ಆರಂಭಿಸಿದವು. ಬಳಿಕ ಅವರಿಬ್ಬರೂ ಸಂತೋಷವನ್ನು ಆಚರಿಸಿಕೊಂಡರು. ಅನೇಕರು ಇಬ್ಬರ ಮೇಲೆ ಪ್ರೀತಿಯ ಮಳೆ ಸುರಿಸಿದರು.
ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು. ಓಹ್, ಅಭಿನಂದನೆಗಳು. ಇದು ನೋಡಲು ತುಂಬಾ ಸುಂದರವಾದ ವಿಷಯ” ಎಂದು ಕಾಮೆಂಟ್ ಮಾಡಿದ್ದಾರೆ. ಇದು ತುಂಬಾ ಅದ್ಭುತವಾಗಿದೆ, ಅವನು ಅವಳನ್ನು ಆಶ್ಚರ್ಯಗೊಳಿಸುವ ಅದ್ಭುತ ಕೆಲಸವನ್ನು ಮಾಡಿದ್ದೀರಾ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Viral News : ತನ್ನ ಹಾಸಿಗೆಯಲ್ಲಿ ಒಂದಿಷ್ಟು ಜಾಗ ಹಂಚಿಕೊಂಡು ಈ ಮಹಿಳೆ ಸಂಪಾದಿಸಿದೆಷ್ಟು ನೋಡಿ!
ಅವರಿಬ್ಬರಿಗಾಗಿ ಸಂತೋಷದ ಕಣ್ಣೀರು ಸುರಿಸುತ್ತಿದ್ದೇನೆ. ಅಷ್ಟು ಸುಂದರ. ಅವರಿಬ್ಬರು ದಶಕಗಳ ಸಂತೋಷವನ್ನು ಅನುಭವಿಸಲಿ ಎಂದು ಇನ್ಸ್ಟಾಗ್ರಾಮ್ ಬಳಕೆದಾರರು ಬರೆದಿದ್ದಾರೆ. ಮಹಿಳೆಯೊಬ್ಬಳು, ನನಗೂ ಅಂಥ ಗೆಳೆಯ ಬೇಕು ಎಂದು ಬರೆದುಕೊಂಡಿದ್ದಾರೆ.
ಈ ಮುದ್ದಾದ ವೀಡಿಯೊವನ್ನು ಮಜ್ಲಿ ನ್ಯೂಸ್ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಎರಡು ದಿನಗಳ ಹಿಂದೆ ಹಂಚಿಕೊಂಡಿದೆ. ಈ ಕ್ಲಿಪ್ ಈಗಾಗಲೇ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. 18,000 ಲೈಕ್ಗಳನ್ನು ಪಡೆದುಕೊಂಡಿದೆ.