Site icon Vistara News

Retail Inflation: ಶೇ.4.87ಕ್ಕೆ ಇಳಿಕೆಯಾದ ಚಿಲ್ಲರೆ ಹಣದುಬ್ಬರ!

Retail Inflation reduced to 4.87 percent Says Government report

ನವದೆಹಲಿ: ಅಕ್ಟೋಬರ್‌ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು (Retail Inflation) ಶೇ.4.87ಕ್ಕೆ ಇಳಿಕೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ.5.02ರಷ್ಟಿತ್ತು ಎಂದು ಸೋಮವಾರ ಬಿಡುಗಡೆಯಾಗಿರುವ ಅಂಕಿ-ಸಂಖ್ಯೆಗಳಲ್ಲಿ (Government Report) ವಿವರಿಸಲಾಗಿದೆ. ಇದೇ ವೇಳೆ, ಗ್ರಾಹಕ ಬೆಲೆ ಸೂಚ್ಯಂಕ (Consumer Price Index) ಆಧಾರಿತ ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಮೂರು ತಿಂಗಳ ಕನಿಷ್ಠ ಶೇ.5.02ಕ್ಕೆ ಇಳಿಕೆಯಾಗಿದೆ.

ಅಕ್ಟೋಬರ್ ತಿಂಗಳಲ್ಲಿ ನಡೆದ ಸಭೆಯಲ್ಲಿ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು (MPC) 2023-24ರಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರವನ್ನು ಶೇಕಡಾ 5.4 ಎಂದು ಅಂದಾಜು ಮಾಡಿತ್ತು. ಇದು 2022-23 ರಲ್ಲಿನ ಶೇ.6.7ಕ್ಕಿಂತಲೂ ತುಸು ಕಡಿಮೆಯಾಗಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ಹಣದುಬ್ಬರದ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ ಎಂದು ಹೇಳಿದ್ದರು. ಅಲ್ಲದೇ ರಿಸರ್ವ್ ಬ್ಯಾಂಕ್ ಇಂಡಿಯಾ ಹಣದುಬ್ಬರವನ್ನು ಶೇ.2ರಿಂದ 6ರ ಬದಲಿಗೆ ಶೇ.4ರ ಪ್ರಮಾಣದಲ್ಲಿ ಇಡಲು ಬಯಸುತ್ತದೆ ಎಂದು ಹೇಳಿದ್ದರು.

ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಹಣದುಬ್ಬರವು ಎರಡೂ ಕಡೆಗಳಲ್ಲಿ ಶೇ. 2 ಮಾರ್ಜಿನ್‌ನೊಂದಿಗೆ ಶೇಕಡಾ 4 ರಷ್ಟಿದೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ಆರ್‌ಬಿಐಗೆ ಸೂಚಿಸಿತ್ತು. ಸೆಂಟ್ರಲ್ ಬ್ಯಾಂಕ್ ತನ್ನ ದ್ವೈಮಾಸಿಕ ವಿತ್ತೀಯ ನೀತಿಗೆ ಬರುವಾಗ ಮುಖ್ಯವಾಗಿ ಚಿಲ್ಲರೆ ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಒಟ್ಟಾರೆ ಗ್ರಾಹಕ ಬೆಲೆಯ ಸೂಚ್ಯಂಕ ಹಣದುಬ್ಬರದಲ್ಲಿ ಅರ್ಧದಷ್ಟು ಭಾಗವನ್ನು ಹೊಂದಿರುವ ಆಹಾರ ಹಣದುಬ್ಬರವು ಸೆಪ್ಟೆಂಬರ್(ಶೇ.6.56) ತಿಂಗಳಿಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ 6.61% ರಷ್ಟು ಏರಿಕೆಯಾಗಿ ಎಂದು ವರದಿಯು ತಿಳಿಸಿದೆ.

ನಿವ್ವಳ ನೇರ ತೆರಿಗೆ ಸಂಗ್ರಹದಲ್ಲಿ ದಾಖಲೆ!

ನೇರ ತೆರಿಗೆ ಸಂಗ್ರಹದಲ್ಲಿ (Net Direct tax) ಭಾರತವು (India) ಹೊಸ ದಾಖಲೆಯನ್ನು ಬರೆದಿದೆ. ಶುಕ್ರವಾರ ಬಿಡುಗಡೆಯಾದ ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಭಾರತದ ಒಟ್ಟು ನೇರ ತೆರಿಗೆ ಸಂಗ್ರಹ ವರ್ಷದಿಂದ ವರ್ಷಕ್ಕೆ ಶೇ.18.59 ಏರಿಕೆಯಾಗಿ, 12.37 ಲಕ್ಷ ಕೋಟಿಗೆ ಹೆಚ್ಚಿದೆ. ಮರುಪಾವತಿಯ ನಂತರ ನಿವ್ವಳ ನೇರ ತೆರಿಗೆ ಸಂಗ್ರಹವು ಶೇ.21.82 ರಷ್ಟು ಜಿಗಿದು, 10.60 ಲಕ್ಷ ಕೋಟಿ ರೂ.ಗೆ ತಲುಪಿದೆ.

ಈ ತೆರಿಗೆ ಸಂಗ್ರಹಣೆಯು 2023-24 ಹಣಕಾಸು ವರ್ಷದ ನೇರ ತೆರಿಗೆಗಳ ಒಟ್ಟು ಬಜೆಟ್ ಅಂದಾಜುಗಳ ಶೇಕಡಾ 58.15 ರಷ್ಟಾಗಿದೆ ಎಂದು ಹಣಕಾಸು ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

2023 ಏಪ್ರಿಲ್ 1ರಿಂದ ನವೆಂಬರ್ 9ರವರೆಗಿನ ಅವಧಿಯಲ್ಲಿ 1.77 ಲಕ್ಷ ಕೋಟಿ ರೂ. ರಿಫಂಡ್ ಮಾಡಲಾಗಿದೆ ಎಂದೂ ಹೇಳಲಾಗಿದೆ. ಕಾರ್ಪೊರೇಟ್ ಆದಾಯ ತೆರಿಗೆ (CIT) ಮತ್ತು ವೈಯಕ್ತಿಕ ಆದಾಯ ತೆರಿಗೆ (PIT) ಸಂಗ್ರಹಣೆಯಲ್ಲಿ ನಿವ್ವಳ ಬೆಳವಣಿಗೆಯು ಕ್ರಮವಾಗಿ ಶೇ.12.48 ಮತ್ತು ಶೇ.31.77 ಏರಿಕೆಯಾಗಿದೆ.

ಇದುವರೆಗೆ ಒಟ್ಟು ಆದಾಯ ಸಂಗ್ರಹಣೆದಲ್ಲಿ ಸಿಐಟಿ ಮತ್ತು ಪಿಐಟಿ ಬೆಳವಣಿಗೆಯ ದರವು 7.13 ಪ್ರತಿಶತದಷ್ಟಿದ್ದರೆ, ಪಿಐಟಿಯ ಬೆಳವಣಿಗೆಯ ದರವು 28.29 ಪ್ರತಿಶತ ಇದೆ ಎಂದು ಸಚಿವಾಲಯವು ತಿಳಿಸಿದೆ. ರಿಫಂಡ್ ಹೊಂದಾಣಿಕೆ ಮಾಡಿದ ಬಳಿಕ ಸಿಐಟಿ ನಿವ್ವಳ ಬೆಳವಣಿಗೆಯ ಸಂಗ್ರವು ಶೇ.12.48ರಷ್ಟಿದೆ ಮತ್ತು ಪಿಐಟಿ ಸಂಗ್ರವು ಶೇ.31.77ರಷ್ಟಿದೆ. ಎಸ್‌ಟಿಟಿ ಸೇರಿದಂತೆ ಪಿಐಟಿ ಸಂಗ್ರಹವು ಶೇ.31.26ರಷ್ಟಿದೆ ಎಂದು ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Retail Inflation: ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾದ ಚಿಲ್ಲರೆ ಹಣದುಬ್ಬರ!

Exit mobile version