Site icon Vistara News

Supreme Court: ಸುಪ್ರೀಂ ಕೋರ್ಟ್‌ನಲ್ಲಿ ಚೀಫ್ ಜಸ್ಟೀಸ್‌ ಡಿವೈ ಚಂದ್ರಚೂಡರ ಹಾರ್ವರ್ಡ್ ಸಹಪಾಠಿಗಳ ಪುನರ್ಮಿಲನ

Reunion of Harvard Friends of Chief Justices at the Supreme Court

ನವದೆಹಲಿ: ನಾಲ್ಕು ದಶಕಗಳ ಹಿಂದೆ ಹಾರ್ವರ್ಡ್ ಕಾನೂನು ಶಾಲೆಯ (Harvard Law School) ಕಾರಿಡಾರ್‌ಗಳನ್ನು ಹಂಚಿಕೊಂಡಿದ್ದ ಮೂವರು ಕಾನೂನು ಗಣ್ಯರ ಪುನರ್ಮಿಲನಕ್ಕೆ ಸುಪ್ರೀಂ ಕೋರ್ಟ್ (Supreme Court) ಸೋಮವಾರ ಸಾಕ್ಷಿಯಾಯಿತು. 1983ರ ಬ್ಯಾಚಿನ ವಿದ್ಯಾರ್ಥಿಗಳಾದ ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್(CJI DY Chandrachud), ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶೆ ಹಿಲರಿ ಚಾರ್ಲ್ಸ್‌ವರ್ತ್(International Court of Justice Judge Hillary Charlesworth), ಹಿರಿಯ ವಕೀಲ ಪರಾಗ್ ತ್ರಿಪಾಠಿ (senior lawyer Parag Tripathi) ಒಂದೆಡೆ ಸೇರಿದ್ದರು.

ಕಾನೂನು ವಲಯದ ಮೂವರು ಧೀಮಂತರು ಒಂದೆಡೆ ಸೇರಿದ್ದು ಸಂಭ್ರಮಾಚರಣೆಗೆ ಕಾರಣಾಯಿತು. ಈ ಮೂವರು ತಮ್ಮ ವಲಯದಲ್ಲಿ ಜೀವನ ಶ್ರೇಷ್ಠ ಸ್ಥಾನಗಳನ್ನು ಹೊಂದಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ರಿಯುನಿಯನ್ ಆಗಿದ್ದು ವಿಶೇಷವಾಗಿತ್ತು.

ಪ್ರಕರಣಗಳ ವಿಚಾರಣೆಯ ಪೀಠದ ಅಧ್ಯಕ್ಷತೆ ವಹಿಸಿದ್ದ ಸಿಜೆಐ ಚಂದ್ರಚೂಡ್ ಅವರು, ಸಂಸ್ಥಾಪನಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಉನ್ನತ ನ್ಯಾಯಾಲಯಕ್ಕೆ ಭೇಟಿ ನೀಡಿದ್ದ ತಮ್ಮ ಹಳೆಯ ಸ್ನೇಹಿತ ಮತ್ತು ಸಹಪಾಠಿ ನ್ಯಾಯಾಧೀಶ ಚಾರ್ಲ್ಸ್‌ವರ್ತ್ ಅವರಿಗೆ ಆತ್ಮೀಯ ಸ್ವಾಗತವನ್ನು ಕೋರಿದರು. ನ್ಯಾಯಮೂರ್ತಿ ಚಂದ್ರಚೂಡ್ ಅವರು ಪೀಠದಲ್ಲಿ ಐಸಿಜೆ ನ್ಯಾಯಾಧೀಶರನ್ನು ಹೊಂದಿರುವ ಅಪರೂಪದ ಗೌರವವನ್ನು ಒಪ್ಪಿಕೊಂಡರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನ್ಯಾಯಾಧೀಶ ಚಾರ್ಲ್ಸ್‌ವರ್ತ್ ನ್ಯಾಯಾಲಯದಲ್ಲಿ ಹಾಜರಿದ್ದಕ್ಕಾಗಿ ಸಂತೋಷವನ್ನು ವ್ಯಕ್ತಪಡಿಸಿದರು.

ಕಲಾಪದಲ್ಲಿ ಹಿರಿಯ ವಕೀಲ ಪರಾಗ್ ತ್ರಿಪಾಠಿ ಅವರು ಪಾಲ್ಗೊಂಡರು ಮತ್ತು ತಮ್ಮ ಅಪಾರ ಅನುಭವದ ಮೂಸೆಯಲ್ಲಿ ಭಾವೋದ್ರೇಕದಿಂದ ಒಂದು ಪ್ರಕರಣವನ್ನು ವಾದಿಸಿದರು. ನ್ಯಾಯಾಧೀಶರಾದ ಚಾರ್ಲ್ಸ್‌ವರ್ತ್ ಅವರ ಉಪಸ್ಥಿತಿಯನ್ನು ಕಂಡು ತ್ರಿಪಾಠಿ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದರು, ಸಿಜೆಐ ಚಂದ್ರಚೂಡ್ ಅವರೊಂದಿಗೆ ವೇದಿಕೆಯಲ್ಲಿ ಅವರನ್ನು ನೋಡಿದ ನಂತರ ಸಂತೋಷವಾಯಿತು ಎಂದು ಹೇಳಿದರು.

ವಿಚಾರಣೆಯ ನಂತರ, ಮೂವರು ಸ್ನೇಹಿತರು ನ್ಯಾಯಾಧೀಶ ಚಾರ್ಲ್ಸ್‌ವರ್ತ್ ಅವರೊಂದಿಗೆ ಮಹಾತ್ಮ ಗಾಂಧಿ ಮತ್ತು ಡಾ ಬಿಆರ್ ಅಂಬೇಡ್ಕರ್ ಪ್ರತಿಮೆಗಳಿಗೆ ನಮನ ಸಲ್ಲಿಸುವ ಮೂಲಕ ಸುಪ್ರೀಂ ಕೋರ್ಟ್ ಆವರಣದಲ್ಲಿ ಸುತ್ತಾಡಿದರು.

ಈ ಸುದ್ದಿಯನ್ನೂ ಓದಿ: Medical education: ನೀಟ್‌ ಕೇಸ್‌ಗಳ ಸಂಖ್ಯೆ ಹೆಚ್ಚಳವು ವೈದ್ಯಕೀಯ ಶಿಕ್ಷಣ ಸುಧಾರಣೆ ಅಗತ್ಯ ಬಿಂಬಿಸಿದೆ: ಸಿಜೆಐ ಚಂದ್ರಚೂಡ್

Exit mobile version