ಬೆಂಗಳೂರು: ರಾಮನವಮಿ ಹಾಗೂ ಹನುಮಾನ್ ಜಯಂತಿ ವೇಳೆ ಕಲ್ಲು ತೂರಾಟ, ಗಲಭೆ ನಡೆದ ಘಟನೆಗಳು ಕಳೆದ 15 ದಿನದಲ್ಲಿ ದೇಶದ 9 ರಾಜ್ಯಗಳಲ್ಲಿ ನಡೆದಿದೆ. ರಾಮನವಮಿ ಮೆರವಣಿಗೆ, ಹನುಮಾನ್ ಜಯಂತಿ ಶೋಭಾ ಯಾತ್ರೆ ಸಂದರ್ಭದಲ್ಲಿ ಹಿಂದು-ಮುಸ್ಲಿಂ ಸಮುದಾಯಗಳ ನಡುವಿನ ಜಗಳ ಅನೇಕ ಕಡೆಗಳಲ್ಲಿ ವಿಕೋಪಕ್ಕೆ ತಿರುಗಿದೆ.
ಕರ್ನಾಟಕದ ಹುಬ್ಬಳ್ಳಿ ಸೇರಿ ಕೆಲವೆಡೆಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆದಿದ್ದರೆ ಬಹುತೇಕ ಪ್ರಕರಣಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ. ಈ ಪ್ರಕರಣಗಳು ಬೇರೆ ಬೇರೆ ರಾಜ್ಯಗಳಲ್ಲಿ ನಡೆದವಾದರೂ ಒಂದೇ ಸಮಯಕ್ಕೆ ಅಪಾರ ಸಂಖ್ಯೆಯ ಜನರು ಒಟ್ಟು ಗೂಡಿದ್ದಾರೆ. ಅಲ್ಲದೆ, ಲಾರಿಗಟ್ಟಲೆ ಕಲ್ಲುಗಳನ್ನು ಶೇಖರಿಸಿಟ್ಟುಕೊಳ್ಳುವಂತಹ ರೀತಿಯಲ್ಲಿಯೂ ಸಮಾನತೆ ಇದೆ. ಕೆಲವು ಘಟನೆಗಳಲ್ಲಿ ಕಲ್ಲು ತೂರಾಟ ನಡೆಸುತ್ತಿದ್ದವರ ಮಾತಿನ ಶೈಲಿ ಬಂಗಾಳಿ ಹಾಗೂ ಬಾಂಗ್ಲಾದೇಶೀಯರನ್ನು ಹೋಲುತ್ತಿತ್ತು. ಹಾಗಾಗಿ ದೇಶಾದ್ಯಂತ ಅಶಾಂತಿ ನಿರ್ಮಿಸಲು ಯಾವುದೋ ಶಕ್ತಿಗಳು ಪ್ರಯತ್ನಿಸುತ್ತಿರಬಹುದೇ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ.
ಏಪ್ರಿಲ್ 10: ಮಧ್ಯಪ್ರದೇಶ
- ಖಾರ್ಗಾಂವ್ನ ತಾಲಾಬ್ ಚೌಕ್ ಹಾದು ಹೋಗುತ್ತಿದ್ದ ರಾಮನವಮಿ ಮೆರವಣಿಗೆ ವೇಳೆ ಗಲಭೆ
- ಕಲ್ಲು ತೂರಾಟದಲ್ಲಿ ಮನೆ, ಆಸ್ತಿಪಾಸ್ತಿ ಹಾನಿ, ಮೂವರು ಪೊಲೀಸರಿಗೆ ಗಾಯ
ಏಪ್ರಿಲ್ 10: ಪಶ್ಚಿಮ ಬಂಗಾಳ
- ಹಾವ್ಡಾ ನಗರದ ಶಿಬುಪುರ ಪ್ರದೇಶದಲ್ಲಿ ರಾಮನವಮಿ ರ್ಯಾಲಿ ವೇಳೆ ಕಲ್ಲು ತೂರಾಟ
- 10 ಜನರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ
- ಪೊಲೀಸರಿಂದ ಲಾಠಿ ಚಾರ್ಜ್, 17 ಆರೋಫಿಗಳ ಬಂಧನ
ಏಪ್ರಿಲ್ 10: ಗುಜರಾತ್
- ಆನಂದ್ ಜಿಲ್ಲೆಯ ಖಂಬತ್ನಲ್ಲಿ ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ
- ಒಬ್ಬರ ಸಾವು, ಒಬ್ಬರ ಸ್ಥಿತಿ ಗಂಭೀರ, ಆಸ್ತಿಪಾಸ್ತಿ ಹಾನಿ
ಏಪ್ರಿಲ್ 10: ಜಾರ್ಖಂಡ್
- ರಾಮನವಮಿ ಮೆರವಣಿಗೆ ವೇಲೆ ಲೋಹರ್ದಗ್ಗ ಹಾಗೂ ಬೊಕಾರೊ ಜಿಲ್ಲೆಯಲ್ಲಿ ಗಲಭೆ
- ಮೂವರು ಗಂಭೀರ ಗಾಯ, ಕಲ್ಲು ತೂರಾಟದಿಂದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ
ಏಪ್ರಿಲ್ 10: ದೆಹಲಿ ಜೆಎನ್‌ಯು
- ಜವಾಹರಲಾಲ್ ನೆಹರೂ ವಿವಿಯಲ್ಲಿ ರಾಮನವಮಿ ವೇಳೆ ಕಾವೇರಿ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ
- ಜೆಎನ್‌ಯು ಸ್ಟೂಡೆಂಟ್ಸ್ ಯೂನಿಯನ್ ಹಾಗೂ ಎಬಿವಿಪಿ ವಿದ್ಯಾರ್ಥಿಗಳ ನಡುವೆ ಕಲಹ
- ಗಲಾಟೆಯಲ್ಲಿ ಆರು ವಿದ್ಯಾರ್ಥಿಗಳಿಗೆ ಗಾಯ
ಏಪ್ರಿಲ್ 17: ದೆಹಲಿ
- ವಾಯವ್ಯ ದೆಹಲಿಯ ಜಹಾಂಗೀರ್ಪುರಿಯಲ್ಲಿ ಮಸೀದಿ ಬಳಿ ಹನೂಮಾನ್ ಜಯಂತಿ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ
- ಗುಂಡು ಹಾರಿಸಿದ ಕಿಡಿಗೇಡಿಗಳು, ಪೊಲೀಸರು, ಸಾರ್ವಜನಿಕರಿಗೆ ಗಾಯ.
- ಪ್ರಮುಖ ಆರೋಪಿ ಅನ್ಸರ್ ಸೇರಿ 21 ಜನರ ಬಂಧನ
Delhi Riots | ಪುಷ್ಪಾ ಸ್ಟೈಲಲ್ಲಿ ಸನ್ನೆ ಮಾಡಿದ ಜಹಾಂಗೀರ್‌ಪುರಿ ಗಲಭೆ ಪ್ರಮುಖ ಆರೋಪಿ: 20 ಜನರ ಬಂಧನ
ಏಪ್ರಿಲ್ 17: ಕರ್ನಾಟಕ(ಹುಬ್ಬಳ್ಳಿ)
- ಕಾಲೇಜು ವಿದ್ಯಾರ್ಥಿಯೊಬ್ಬನ ವಾಟ್ಸಾಪ್ ಸ್ಟೇಟಸ್ನಲ್ಲಿ ಮುಸ್ಲಿಂ ವಿರೋಧಿ ಪೋಸ್ಟರ್
- ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎಂದು ಬೀದಿಗಳಿದ ಬೃಹತ್ ಗುಂಪು
- ಪೊಲೀಸರ ಮೇಲೆ ಹಲ್ಲೆ, ಪೊಲೀಸ್ ವಾಹನಗಳು ಜಖಂ
- ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಜನಜೀವನದಲ್ಲಿ ಭಯ
- 85ಕ್ಕೂ ಹೆಚ್ಚು ಆರೋಪಿಗಳ ಬಂಧನ
ಹೆಚ್ಚಿನ ಓದಿಗಾಗಿ ಹುಬ್ಬಳ್ಳಿ ಗಲಭೆ | AIMIM ಕಾರ್ಪೊರೇಟರ್ ಪತಿ ಸೇರಿ 85 ಜನರ ಬಂಧನ: ಪೂರ್ವನಿಯೋಜಿತ ಶಂಕೆ
ಏಪ್ರಿಲ್17: ಆಂಧ್ರ ಪ್ರದೇಶ
- ಕರ್ನೂಲ್ ಜಿಲ್ಲೆಯಲ್ಲಿ ಹನುಮಾನ್ ಜಯಂತಿ ಮೆರವಣಿಗೆ ವೇಳೆ ಗಲಾಟೆ
- ಮಸೀದಿ ಬಳಿ ಮೆರವಣಿಗೆ ಬರುತ್ತಿದ್ದಂತೆ ಹಾಡುಗಳ ಸ್ಥಗಿತ
- ಕೆಲವರಿಂದ ಜೈ ಶ್ರೀ ರಾಮ್ ಘೋಷಣೆಯಾಗುತ್ತಿದ್ದಂತೆ ಗಲಾಟೆ
- 15ಕ್ಕೂ ಹೆಚ್ಚು ಜನರಿಗೆ ಗಾಯ
ಏಪ್ರಿಲ್ 17: ಉತ್ತರಾಖಂಡ
- ಭಗವಾನ್ಪುರದಲ್ಲಿ ಹಳ್ಳಿಯೊಂದರ ಮೂಲಕ ಹಾದು ಹೋಗುತ್ತಿದ್ದ ಹನುಮಾನ್ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ
- 4 ಜನರಿಗೆ ಗಾಯ, ಪೊಲೀಸರಿಂದ 9 ಜನರ ಬಂಧನ
ಏಪ್ರಿಲ್ 17: ಮಹಾರಾಷ್ಟ್ರ
- ಅಮರಾವತಿ ಜಿಲ್ಲೆಯ ಅಚಲ್ಪುರದಲ್ಲಿ ಧಾರ್ಮಿಕ ಧ್ವಜ ತೆರವಿನ ಕುರಿತು ವಿವಾದ
- ಕಿಡಿಗೇಡಿಗಳು ಧಾರ್ಮಿಕ ಧ್ವಜ ತೆಗೆದಿದ್ದರಿಂದ ಗಲಾಟೆ
- 8-10 ಜನರಿಗೆ ಗಾಯ, ಪೊಲೀಸರಿಂದ 25 ಜನರ ಬಂಧನ