ದಿಲ್ಲಿಯ ಜಹಾಂಗೀರ್ಪುರಿಯಲ್ಲಿ ನಡೆಸಿದ ಬುಲ್ಡೋಜರ್ ಕಾರ್ಯಾಚರಣೆ ದೇಶಾದ್ಯಂತ ಸುದ್ದಿ ಮಾಡಿದೆ. ಕರ್ನಾಟಕದಲ್ಲೂ ಇಂಥದೇ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಇದೆ. ಏನಿದು ಬುಲ್ಡೋಜರ್ ಸದ್ದು?
ಬಹುತೇಕ ಗಲಭೆಗಳಲ್ಲಿ ಸಾಮ್ಯತೆ ಇದೆ. ದೇಶಾದ್ಯಂತ ಅಶಾಂತಿ ನಿರ್ಮಿಸಲು ಯಾವುದೋ ಶಕ್ತಿಗಳು ಪ್ರಯತ್ನಿಸುತ್ತಿರಬಹುದೇ ಎಂಬ ಅನುಮಾನವನ್ನೂ ಈ ಘಟನೆಗಳು ಹುಟ್ಟುಹಾಕಿವೆ.
ಜಹಾಂಗೀರ್ಪುರಿಯಲ್ಲಿ ಗಲಭೆ ವೇಳೆ ಕಲ್ಲು ತೂರಿದ ಅನೇಕರು ಬಂಗಾಳಿ ಅಥವ ಬಾಂಗ್ಲಾದೇಶಿ ಶೈಲಿಯಲ್ಲಿ ಘೋಷಣೆ ಕೂಗುತ್ತಿದ್ದರು ಎಂದು ಗಾಯಗೊಂಡ ಪೊಲೀಸ್ ಅಧಿಕಾರಿ ಹೇಳಿದ್ದಾರೆ.