ಲಂಡನ್: ಗೋದ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದರೂ ಈಗ ಹತ್ಯಾಕಾಂಡದ ಕುರಿತು ಬಿಬಿಸಿ ವಿವಾದಾತ್ಮಕ ಡಾಕ್ಯುಮೆಂಟರಿ ನಿರ್ಮಿಸಿದೆ. ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ಡಾಕ್ಯುಮೆಂಟರಿ ವಿಷಯದಲ್ಲಿ ಭಾರತ ಮೂಲದವರಾದ, ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಅವರು ಮೋದಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಪಾಕಿಸ್ತಾನ ಮೂಲದ ಬ್ರಿಟನ್ ಸಂಸದರಾದ ಇಮ್ರಾನ್ ಹುಸೇನ್ ಅವರು ಸಂಸತ್ತಿನಲ್ಲಿ ಡಾಕ್ಯುಮೆಂಟರಿ ಪ್ರಸ್ತಾಪಿಸಿ ಮೋದಿ ಅವರ ಹೆಸರಿಗೆ ಕುಂದುಂಟು ಮಾಡಲು ಯತ್ನಿಸಿದರು. “ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಗೋದ್ರಾ ಹತ್ಯಾಕಾಂಡದ ಹೊಣೆಗಾರರು. ಸಾವಿರಾರು ಜನರ ಹತ್ಯೆಗೆ ಅವರೇ ಕಾರಣ” ಎಂದು ಉದ್ಧಟತನ ಮೆರೆದರು.
ಇದಕ್ಕೆ ಪ್ರತಿಕ್ರಿಯಿಸಿದ ರಿಷಿ ಸುನಕ್, ಮೋದಿ ಅವರ ಪರ ಮಾತನಾಡಿದರು. “ಜಗತ್ತಿನ ಯಾವುದೇ ಭಾಗದಲ್ಲಿ ಹಿಂಸಾಚಾರ, ಹತ್ಯೆ ನಡೆದರೆ ಅದನ್ನು ಬ್ರಿಟನ್ ಬೆಂಬಲಿಸುವುದಿಲ್ಲ. ಆದರೆ, ಮೋದಿ ವಿಷಯದಲ್ಲಿ ಬ್ರಿಟನ್ ನಿಲುವು ಬದಲಾಗುವುದಿಲ್ಲ. ಅವರೊಬ್ಬರ ಸಭ್ಯ ವ್ಯಕ್ತಿ” ಎಂದರು.
ಇದನ್ನೂ ಓದಿ | BBC Documentary On Modi | ಮೋದಿ ಕುರಿತು ಬಿಬಿಸಿ ಆಕ್ಷೇಪಾರ್ಹ ಡಾಕ್ಯುಮೆಂಟರಿ, ಅಷ್ಟಕ್ಕೂ ಏನಿದೆ ಇದರಲ್ಲಿ? ಯಾಕಿಷ್ಟು ವಿವಾದ?