ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Nodi) ಮಂಗಳವಾರ (ಫೆ. 13) ಹೊಸ ಸೋಲಾರ್ ಯೋಜನೆ ಘೋಷಿಸಿದ್ದಾರೆ. ಮನೆಯ ಛಾವಣಿಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲು ಸಾರ್ವಜನಿಕರಿಗೆ ಈ ಯೋಜನೆ ಮೂಲಕ ಉತ್ತೇಜನ ನೀಡಲಾಗುತ್ತದೆ (Rooftop Solar Scheme). ”ಈ ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ (PM Surya Ghar: Muft Bijli Yojana) ಮೂಲಕ ದೇಶದ ಸುಮಾರು 1 ಕೋಟಿ ಕುಟುಂಬಗಳಿಗೆ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಲಾಗಿದೆ. ಈ ಯೋಜನೆ ಮುಖಾಂತರ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ದೊರೆಯಲಿದೆʼʼ ಎಂದು ಮೋದಿ ತಿಳಿಸಿದರು.
75,000 ಕೋಟಿ ರೂ. ಹೂಡಿಕೆ
ಸುಮಾರು 75,000 ಕೋಟಿ ರೂ. ಹೂಡಿಕೆಯ ಯೋಜನೆ ಇದಾಗಿದೆ. ಈ ಯೋಜನೆಯನ್ನು ಆರಂಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ರ ಮಧ್ಯಂತರ ಬಜೆಟ್ ವೇಳೆ ಘೋಷಿಸಿದ್ದರು. ʼʼಈ ಸೌರ ಫಲಕ ಯೋಜನೆಯಡಿ ಫಲಾನುಭವಿಗಳಿಗೆ ಗಣನೀಯ ಸಬ್ಸಿಡಿಗಳನ್ನು ನೀಡಲಾಗುವುದು ಮತ್ತು ಅದನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದುʼʼ ಎಂದು ಮೋದಿ ಹೇಳಿದರು.
Let’s boost solar power and sustainable progress. I urge all residential consumers, especially youngsters, to strengthen the PM – Surya Ghar: Muft Bijli Yojana by applying at- https://t.co/sKmreZmenT
— Narendra Modi (@narendramodi) February 13, 2024
“ಜನರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ನೀಡಲಾಗುವ ಸಬ್ಸಿಡಿಗಳಿಂದ ಹಿಡಿದು ಭಾರಿ ರಿಯಾಯಿತಿ ದರದ ಬ್ಯಾಂಕ್ ಸಾಲಗಳವರೆಗೆ ಕೇಂದ್ರ ಸರ್ಕಾರವು ಜನರ ಮೇಲೆ ಯಾವುದೇ ಹೊರೆಯಾಗದಂತೆ ನೋಡಿಕೊಳ್ಳುತ್ತದೆ” ಎಂದು ಮೋದಿ ತಿಳಿಸಿದರು. ʼʼನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ಗಳು ತಮ್ಮ ವ್ಯಾಪ್ತಿಯಲ್ಲಿ ಮೇಲ್ಛಾವಣಿ ಸೌರ ಫಲಕ ವ್ಯವಸ್ಥೆಗಳನ್ನು ಅಳವಡಿಸಲು ಸರ್ಕಾರ ಪ್ರೋತ್ಸಾಹ ನೀಡುತ್ತದೆ. ಈ ಯೋಜನೆಯು ಹೆಚ್ಚಿನ ಆದಾಯ, ಕಡಿಮೆ ವಿದ್ಯುತ್ ಬಿಲ್ ಮತ್ತು ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆʼʼ ಎಂದು ಮೋದಿ ವಿವರಿಸಿದರು.
ಅರ್ಜಿ ಸಲ್ಲಿಸುವ ವಿಧಾನ
ಹಂತ 1
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
- ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ.
- ವಿದ್ಯುತ್ ವಿತರಣಾ ಸಂಸ್ಥೆಯನ್ನು ಆಯ್ಕೆ ಮಾಡಿ.
- ನಿಮ್ಮ ವಿದ್ಯುತ್ ಬಿಲ್ ಸಂಖ್ಯೆ ನಮೂದಿಸಿ.
- ನಿಮ್ಮ ಮೊಬೈಲ್ ನಂಬರ್ ನಮೂದಿಸಿ.
- ಇ-ಮೇಲ್ ವಿಳಾಸ ಒದಗಿಸಿ.
ಹಂತ 2
- ನಿಮ್ಮ ಕನ್ಸ್ಯೂಮರ್ ನಂಬರ್ ಮತ್ತು ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಿ.
- ಫಾರ್ಮ್ ಪ್ರಕಾರ ಛಾವಣಿ ಸೌರಶಕ್ತಿಗೆ ಅರ್ಜಿ ಸಲ್ಲಿಸಿ.
ಹಂತ 3
- ನಿಮ್ಮ ಅರ್ಜಿಯ ಅನುಮೋದನೆಗಾಗಿ ಸ್ವಲ್ಪ ಹೊತ್ತು ಕಾಯಿರಿ.
- DISCOMನ ಯಾವುದೇ ನೋಂದಾಯಿತ ಮಾರಾಟಗಾರರಿಂದ ಪ್ಯಾನಲ್ ಅಳವಡಿಸಿ.
ಹಂತ 4
- ಸೌರ ಫಲಕ ಅಳವಡಿಕೆ ಆದ ಬಳಿಕ ಸ್ಥಾವರದ ವಿವರಗಳನ್ನು ಸಲ್ಲಿಸಿ ಮತ್ತು ನೆಟ್ ಮೀಟರ್ಗೆ ಅರ್ಜಿ ಸಲ್ಲಿಸಿ.
ಹಂತ 5
- ನೆಟ್ ಮೀಟರ್ ಅಳವಡಿಸಿದ ನಂತರ ಮತ್ತು DISCOMನಿಂದ ತಪಾಸಣೆಯ ನಂತರ ಪೋರ್ಟಲ್ನಿಂದ ನಿಯೋಜನೆ ಪ್ರಮಾಣ ಪತ್ರವನ್ನು ದೊರೆಯುತ್ತದೆ.
ಹಂತ 6
- ಒಮ್ಮೆ ನೀವು ಕಮಿಷನಿಂಗ್ ವರದಿಯನ್ನು ಪಡೆದ ನಂತರ ಬ್ಯಾಂಕ್ ಖಾತೆ ವಿವರಗಳನ್ನು ಪೋರ್ಟಲ್ ಮೂಲಕ ಸಲ್ಲಿಸಿ.
- ನಿಮ್ಮ ಸಬ್ಸಿಡಿ 30 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ.
ಇದನ್ನೂ ಓದಿ: PM Suryoday Yojana: ಮನೆ ಬೆಳಗುವ ಸೂರ್ಯೋದಯ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?