Site icon Vistara News

ಲಕ್ಷದ್ವೀಪದಲ್ಲಿ ಮೋದಿ ಫೋಟೊ ತೆಗೆಸಿಕೊಂಡಿದ್ದಕ್ಕೆ ಉರ್ಕೊಂಡ ಮಾಲ್ಡೀವ್ಸ್;‌ ಕಾರಣ ಇಲ್ಲಿದೆ

Maldives

Maldives plans road shows in India to attract tourists back

ನವದೆಹಲಿ: ಕೆಲ ದಿನಗಳ ಹಿಂದೆ ಲಕ್ಷದ್ವೀಪಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi), ಅಲ್ಲಿನ ಸೌಂದರ್ಯ, ಬೀಚ್‌ಗಳು, ಶಾಂತಿಯುತ ವಾತಾವರಣದ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದ್ದರು. ಹಾಗೆಯೇ, ದೇಶದ ಜನ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಲಕ್ಷದ್ವೀಪವನ್ನು (Lakshadweep) ಸೇರಿಸಿಕೊಂಡು, ಇಲ್ಲಿಗೆ ಬರಬೇಕು ಎಂದು ಕರೆ ನೀಡಿದ್ದರು. ಅಲ್ಲದೆ, ಲಕ್ಷದ್ವೀಪದ ಕಡಲಿನಲ್ಲಿ ಈಜಾಡಿದ, ಬೀಚ್‌ನಲ್ಲಿ ಸುತ್ತಾಡಿದ ಫೋಟೊಗಳನ್ನು ಶೇರ್‌ ಮಾಡಿದ್ದರು. ಹೀಗೆ ಮೋದಿ ಅವರು ಪ್ರವಾಸೋದ್ಯಮದ ದೃಷ್ಟಿಯಿಂದ ಲಕ್ಷದ್ವೀಪಕ್ಕೆ ಆದ್ಯತೆ ನೀಡಿ ಎಂದು ಕರೆ ನೀಡಿರುವುದಕ್ಕೆ ಮಾಲ್ಡೀವ್ಸ್‌ಗೆ ಹೊಟ್ಟೆಕಿಚ್ಚಾಗಿದೆ. “ಪ್ರವಾಸೋದ್ಯಮದಲ್ಲಿ ಭಾರತವು ಮಾಲ್ಡೀವ್ಸ್‌ಗೆ ಸ್ಪರ್ಧೆಯೊಡ್ಡಲು ಸಾಧ್ಯವಿಲ್ಲ” ಎಂದು ಮಾಲ್ಡೀವ್ಸ್‌ ಸಚಿವ ಅಬ್ದುಲ್ಲಾ ಮಹ್ಜೂಮ್‌ ಮಾಜಿದ್ (Abdulla Mahzoom Majid)‌ ಉದ್ಧಟತನದ ಪೋಸ್ಟ್‌ ಮಾಡಿದ್ದಾರೆ.

“ಭಾರತವು ಸುಖಾಸುಮ್ಮನೆ ಮಾಲ್ಡೀವ್ಸ್‌ಅನ್ನು ಟಾರ್ಗೆ ಮಾಡುತ್ತಿದೆ. ಬೀಚ್‌ ಪ್ರವಾಸೋದ್ಯಮದಲ್ಲಿ ಭಾರತವು ಮಾಲ್ಡೀವ್ಸ್‌ಗೆ ಸವಾಲೊಡ್ಡಬೇಕು ಎಂದರೆ ತುಂಬ ಸವಾಲುಗಳನ್ನು ಎದುರಿಸಬೇಕಾಗುತ್ತದೆ” ಎಂದು ಅಬ್ದುಲ್ಲಾ ಮಹ್ಜೂಮ್‌ ಮಾಜಿದ್ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಪ್ರವಾಸಕ್ಕೆ ಬನ್ನಿ ಎಂದು ಹೇಳಿದ್ದಾರೆಯೇ ಹೊರತು, ಮಾಲ್ಡೀವ್ಸ್‌ ಹೆಸರು ಉಲ್ಲೇಖಿಸಿಲ್ಲ. ಹೀಗಿದ್ದರೂ ಮಾಲ್ಡೀವ್ಸ್‌ ಹೊಟ್ಟೆಕಿಚ್ಚಿನ ಪೋಸ್ಟ್‌ ಮಾಡಿದೆ.

ಲಕ್ಷದ್ವೀಪದಲ್ಲಿ ಮೋದಿ ವಿಹಾರದ ಫೋಟೊಗಳು

ಚೀನಾವನ್ನು ಮೆಚ್ಚಿಸಲು ಇಂತಹ ಪೋಸ್ಟ್?‌

ಕೆಲ ತಿಂಗಳ ಹಿಂದಷ್ಟೇ ಚೀನಾ ಪರ ನಿಲುವಿನ ಮೊಹಮ್ಮದ್‌ ಮುಯಿಜು ಅವರು ಮಾಲ್ಡೀವ್ಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಚೀನಾವನ್ನು ಮೆಚ್ಚಿಸಲು ಮಾಲ್ಡೀವ್ಸ್‌ ಸಚಿವ ಹೀಗೆ ಪೋಸ್ಟ್‌ ಮಾಡಿದ್ದಾರೆ ಎನ್ನಲಾಗಿದೆ. ಅದರಲ್ಲೂ, ಸೋಮವಾರ (ಜನವರಿ 8) ಮೊಹಮ್ಮದ್‌ ಮುಯಿಜು ಅವರು ಚೀನಾಗೆ ಭೇಟಿ ನೀಡಲಿದ್ದು, ಕಮ್ಯುನಿಸ್ಟ್‌ ರಾಷ್ಟ್ರದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆ ಮಾತುಕತೆ ನಡೆಸಲಿದ್ದಾರೆ. ಇದೇ ಕಾರಣಕ್ಕಾಗಿ ಮಾಲ್ಡೀವ್ಸ್‌ ಈಗ ಸುಖಾಸುಮ್ಮನೆ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಯಿಜು ಅಧ್ಯಕ್ಷರಾಗುತ್ತಲೇ ಮಾಲ್ಡೀವ್ಸ್‌ನಲ್ಲಿರುವ ಭಾರತದ ಸೈನಿಕರನ್ನು ವಾಪಸ್‌ ಕಳುಹಿಸಲು ತೀರ್ಮಾನಿಸಿತ್ತು.

ಇದನ್ನೂ ಓದಿ: PM Narendra Modi: ಲಕ್ಷದ್ವೀಪ ಸಮುದ್ರದಲ್ಲಿ ಈಜಾಡಿದ ಮೋದಿ; ಇಲ್ಲಿದೆ ವಿಡಿಯೋ ನೋಡಿ

ನರೇಂದ್ರ ಮೋದಿ ಅವರು ಕೆಲ ದಿನಗಳ ಹಿಂದೆ ಲಕ್ಷದ್ವೀಪದಲ್ಲಿ ಈಜಾಡುವ (Snorkelling-ನೀರಿನ ಮೇಲ್ಮೈನಲ್ಲಿ ಕೃತಕ ಆಮ್ಲಜನಕದ ಮಾಸ್ಕ್‌, ಸ್ವಿಮ್ಮಿಂಗ್ ದಿರಸು ಧರಿಸಿ ಈಜಾಡುವುದು) ಮೂಲಕ ಗಮನ ಸೆಳೆದಿದ್ದರು. ಅಲ್ಲದೆ, ಸ್ವಿಮ್ಮಿಂಗ್‌ ಸೂಟ್‌ ಧರಿಸಿ, ಆಕ್ಸಿಜನ್‌ ಮಾಸ್ಕ್‌ ಧರಿಸಿಕೊಂಡು ಈಜಾಡಿದ ಫೋಟೊಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಯಾರು ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕನಸು ಕಾಣುತ್ತಿದ್ದೀರೋ, ನಿಮ್ಮ ಪಟ್ಟಿಯಲ್ಲಿ ಮೊದಲು ಲಕ್ಷದ್ವೀಪ ಇರಲಿ ಕೂಡ ಹೇಳಿದ್ದರು. ಇದು ಈಗ ಮಾಲ್ಡೀವ್ಸ್‌ ಕಣ್ಣು ಕೆಂಪಾಗಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version