Site icon Vistara News

GST Collection: ಆಗಸ್ಟ್‌ ತಿಂಗಳಲ್ಲಿ ಭರ್ಜರಿ 1.6 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ!

GST Collection

GST collection in October 2023 hit second highest ever of ₹1.72 lakh crore

ನವದೆಹಲಿ: ಆಗಸ್ಟ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (Goods and Services Tax- GST) ಸಂಗ್ರಹ ಭರ್ಜರಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.11ರಷ್ಟು ಏರಿಕೆಯಾಗಿದ್ದು ಒಟ್ಟು 1.6 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರದ (Central Government) ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ (Sanjay Malhotra) ಅವರು ತಿಳಿಸಿದ್ದಾರೆ. 2022ರ ಆಗಸ್ಟ್ ತಿಂಗಳಲ್ಲಿ 1,43,612 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು(GST Collection).

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಆರಂಭ ತಿಂಗಳಗಳಲ್ಲಿ ಶೇ.11ರಷ್ಟು ಬೆಳವಣಿಯಾಗಿದೆ. ಅಂದರೆ, ಶೇ.11ರಷ್ಟು ಬೆಳವಣಿಗೆಯನ್ನು ನಗದಾಗಿ ಪರಿಗಣಿಸಿದರೆ ಅಂದಾಜು 1.60 ಲಕ್ಷ ಕೋಟಿ ರೂ. ಆಗುತ್ತದೆ ಎಂಬ ಕಂದಾಯ ಕಾರ್ದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಈ ಕುರಿತು ಅಧಿಕೃತ ಅಂಕಿ-ಸಂಖ್ಯೆಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಕಳೆದ ಜುಲೈ ತಿಂಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 1.65 ಲಕ್ಷ ಕೋಟಿ ರೂ. ಜಿಎಸ್‌ಟಿ ಆದಾಯವನ್ನು ಗಳಿಸಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ.11 ಹೆಚ್ಚಳವಾಗಿದೆ. ಬೃಹತ್ ಆರ್ಥಿಕತೆಯನ್ನು ಹೊಂದಿರುವ ರಾಜ್ಯಗಳ ಪೈಕಿ ಪಂಜಾಬ್, ಹರ್ಯಾಣ, ದಿಲ್ಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳು ನಾಡು ರಾಜ್ಯಗಳು ಎರಡಂಕಿ ಆದಾಯವನ್ನು ದಾಖಲಿಸಿದ್ದವು. ದಿಲ್ಲಿ ವಾರ್ಷಿ ಶೇ.25 ಬೆಳವಣಿಗೆಯಂತೆ ಜುಲೈ ತಿಂಗಳಲ್ಲಿ 5405 ಕೋಟಿ ರೂ. ಜಿಎಸ್‌ಟಿ ಆದಾಯವನ್ನು ಗಳಿಸಿದರೆ, ಉತ್ತರ ಪ್ರದೇಶವು ಶೇ.24ರ ದರದಲ್ಲಿ 8802 ಕೋಟಿ ರೂ. ಆದಾಯ ದಾಖಲಿಸಿತ್ತು.

ಈ ಸುದ್ದಿಯನ್ನೂ ಓದಿ: GST collection : ಜುಲೈನಲ್ಲಿ 1.6 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ, ದೇಶದಲ್ಲೇ ಕರ್ನಾಟಕ ನಂ.2

2023ರ ಜೂನ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ 161497 ಕೋಟಿ ರೂಪಾಯಿಯಾಗಿತ್ತು. ಈ ಪೈಕಿ 31,013 ಕೋಟಿ ಕೇಂದ್ರ ಜಿಎಸ್‌ಟಿಯಾಗಿದ್ದರೆ, ಸ್ಟೇಟ್ ಜಿಎಸ್‌ಟಿ 38,292 ಕೋಟಿ ರೂಪಾಯಿಯಾಗಿತ್ತು. ಐಜಿಎಸ್‌ಟಿ 80,292 ಕೋಟಿ ರೂ.ಯಾಗಿತ್ತು. ಅಲ್ಲದೇ ಸೆಸ್ ಮೊತ್ತ 11,900 ಕೋಟಿ ರೂಪಾಯಿಯಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version