ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ವರ್ಷಾಂತ್ಯಕ್ಕೆ ಪೆಟ್ರೋಲ್ (Petrol Price) ಮತ್ತು ಡೀಸೆಲ್ ಬೆಲೆಯನ್ನು (Diesel Price) ಇಳಿಕೆ ಮಾಡುವ ಸಾಧ್ಯತೆ ಇದೆ(Price Cut). ಮುಂಬರುವ ಲೋಕಸಭೆ ಚುನಾವಣೆಯ (Lok Sabha Election 2024) ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು (Central Government) ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ಗೆ 8 ರೂ.ನಿಂದ 10 ರೂ.ವರೆಗೆ ಇಳಿಸಲಿದೆ. ಈ ಕುರಿತಾದ ಅಧಿಕೃತ ಹೇಳಿಕೆಯನ್ನು ಪ್ರಧಾನಿ ಮೋದಿ ಅವರು ಈ ವರ್ಷಾಂತ್ಯಕ್ಕೆ ನೀಡಲಿದ್ದಾರೆ.
ಪೆಟ್ರೋಲಿಯಂ ಸಚಿವರು ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 8 ರಿಂದ 10 ರೂಪಾಯಿಗಳವರೆಗೆ ಕಡಿತವನ್ನು ಸೇರಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದಾರೆ. ಗುರುವಾರ ಈ ಪ್ರಸ್ತಾಪನೆಯನ್ನು ಪ್ರಧಾನಿ ಮೋದಿ ಅವರಿಗೆ ಸಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಎರಡು ಇಂಧನಗಳನ್ನು ಉತ್ಪಾದಿಸಲು ಸಂಸ್ಕರಣಾಗಾರಗಳಿಗೆ ಹೋಗುವ ಆಮದು ಮಾಡಿದ ಕಚ್ಚಾ ತೈಲದ ಖರೀದಿ ಬೆಲೆಯಲ್ಲಿ ತೀವ್ರ ಇಳಿಕೆಯಾಗಿರುವುದು ಕೇಂದ್ರ ಸರ್ಕಾರವು ಬೆಲೆ ಇಳಿಕೆಗೆ ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಕೆಲವು ಮೂಲಗಳ ಪ್ರಕಾರ, ಚುನಾವಣೆಯ ಹಿನ್ನೆಲೆಯಲ್ಲಿ ಬೆಲೆಯನ್ನು ತಗ್ಗಿಸಲಾಗುತ್ತಿದೆ.
2023-24 ರ ವರ್ಷದ (ಏಪ್ರಿಲ್-ಮಾರ್ಚ್) ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಕೇವಲ ಎರಡು ತಿಂಗಳುಗಳಲ್ಲಿ ಪ್ರತಿ ಬ್ಯಾರೆಲ್‌ಗೆ ಸರಾಸರಿ 77.14 ಡಾಲರ್ ಇತ್ತು. ಸೆಪ್ಟೆಂಬರ್‌ನಲ್ಲಿ 93.54 ಡಾಲರ್ ಮತ್ತು ಅಕ್ಟೋಬರ್‌ನಲ್ಲಿ 90.08 ಡಾಲರ್ ಏರಿಕೆಯಾಗಿತ್ತು. 2022-23ರ ಆರ್ಥಿಕ ವರ್ಷದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ ಸರಾಸರಿ 93.15 ಡಾಲರ್‌ನಷ್ಟಿತ್ತು.
2022 ಏಪ್ರಿಲ್ 5ರಿಂದ ಪೆಟ್ರೋಲ್ ಮತ್ತು ಡೀಸೆಲ್ ಎಕ್ಸ್ ರಿಫೈನರಿ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅಲ್ಲದೇ ಪ್ರಸಕ್ತ ಹಣಕಾಸು ವರ್ಷದಲ್ಲಿ ಕಚಾ ತೈಲ ಬೆಲೆಗಳು ಇಳಿಕೆಯಾಗಿದ್ದರಿಂದ ಸರ್ಕಾರಿ ಸ್ವಾಮ್ಯದ ಮೂರು ಕಂಪನಿಗಳಿಗೆ ದೊಡ್ಡ ಲಾಭವೇ ಬಂದಿದೆ. ಇಂಡಿಯನ್ ಆಯಿಲ್ ಕಾರ್ಪ್, ಭಾರತ್ ಪೆಟ್ರೋಲಿಯಂ ಕಾರ್ಪ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ಗಳು ನಷ್ಟದಿಂದ ಹೊರ ಬಂದಿವೆ. ಈ ಆರ್ಥಿಕ ವರ್ಷದ ಮೊದಲ ಆರು ತಿಂಗಳುಗಳಲ್ಲಿ ಈ ಮೂರು ಕಂಪನಿಗಳು ಒಟ್ಟಾರೆ 58,198 ಕೋಟಿ ರೂಪಾಯಿ ಲಾಭಗಳಿಸಿವೆ.
2022ರ ಮೇ 22ರಂದು ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರೀಯ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 8 ರೂ. ಮತ್ತು 6 ರೂ.ನಷ್ಟು ಕಡಿಮೆ ಮಾಡಿತು, ಹಣದುಬ್ಬರವನ್ನು ಕಡಿಮೆ ಮಾಡಲು ಎರಡು ವಾಹನ ಇಂಧನಗಳು ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಮೇಲೆ ಪರಿಣಾಮ ಬೀರುತ್ತವೆ.
ಈ ಸುದ್ದಿಯನ್ನೂ ಓದಿ: IMF Report: ಹೆಚ್ಚುತ್ತಿರುವ ಭಾರತದ ಸಾಲ! ಕಳವಳ ವ್ಯಕ್ತಪಡಿಸಿದ ಐಎಂಎಫ್