ಬೆಂಗಳೂರು: ಎಂದಿನಂತೆ ಪ್ರತಿಯೊಂದು ತಿಂಗಳಿನಲ್ಲೂ ಹೊಸ ಬದಲಾವಣೆಗಳು ಜನಜೀವನದ ಮೇಲೆ ಪರಿಣಾಮ ಬೀರುತ್ತದೆ. ಸಾಮಾಜಿಕ ಜಾಲತಾಣ, ಬ್ಯಾಂಕ್ ಸಾಲ, ಎಲ್ಪಿಜಿ ಸಿಲಿಂಡರ್ ಇತ್ಯಾದಿಗಳ ದರಗಳು (Rules change from March 1) ಪ್ರಭಾವ ಬೀರುತ್ತವೆ. ಅದೇ ರೀತಿ ಮಾರ್ಚ್‌ನಲ್ಲಿ ಯಾವೆಲ್ಲ ಬದಲಾವಣೆಗಳು ಇವೆ ಎಂಬುದನ್ನು ನೋಡೋಣ.
ಬ್ಯಾಂಕ್ ಸಾಲ ದುಬಾರಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ರೆಪೊ ದರವನ್ನು 6.25%ರಿಂದ 6.50%ಕ್ಕೆ ಏರಿಸಿತ್ತು. ಇದರಿಂದಾಗಿ ಬ್ಯಾಂಕ್‌ಗಳು ಎಂಸಿಎಲ್‌ಆರ್ ದರಗಳು ಪರಿಷ್ಕರಣೆಯಾಗಿದ್ದು, ನಿಮ್ಮ ಸಾಲ ಮತ್ತು ಇಎಂಐ ಮೇಲೆ ಪರಿಣಾಮ ಬೀರಲಿದೆ.
ಎಲ್‌ಪಿಜಿ, ಸಿಎನ್‌ಜಿ ದರ ಏರಿಕೆ ಸಂಭವ:
ಪ್ರತಿ ತಿಂಗಳಿನ ಆರಂಭದಲ್ಲಿ ಎಲ್‌ಪಿಜಿ, ಸಿಎನ್‌ಜಿ ಮತ್ತು ಪಿಎನ್‌ಜಿದರಗಳು ಪರಿಷ್ಕರಣೆಯಾಗುತ್ತವೆ. ಹೀಗಿದ್ದರೂ ಫೆಬ್ರವರಿಯಲ್ಲಿ ಎಲ್ಪಿಜಿ ದರ ಏರಿಕೆಯಾಗಿರಲಿಲ್ಲ.
ರೈಲ್ವೆ ವೇಳಾಪಟ್ಟಿಯಲ್ಲಿ ಬದಲಾವಣೆ
ಬೇಸಗೆ ಸಮೀಪಿಸುತ್ತಿರುವಂತೆ ಭಾರತೀಯ ರೈಲ್ವೆ ತನ್ನ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಸಾವಿರಾರು ಪ್ರಯಾಣಿಕರ ರೈಲುಗಳು ಹಾಗೂ 5,000 ಸರಕು ಸಾಗಣೆ ರೈಲುಗಳ ವೇಳಾಪಟ್ಟಿ ಮಾರ್ಚ್ 1ರಿಂದ ಬದಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳ ನಿಯಮಾವಳಿ ಬದಲು:
ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಹೊಸ ನಿಯಮಾವಳಿಗಳನ್ನು ತಂದಿದ್ದು, ಟ್ವಿಟರ್, ಫೇಸ್‌ಬುಕ್, ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ಇತ್ಯಾದಿ ಕಂಪನಿಗಳು ವಹಿಸಬೇಕಾಗುತ್ತದೆ. ಸುಳ್ಳು ಮಾಹಿತಿಗಳನ್ನು, ಸಾಮಾಜಿಕ ಅಶಾಂತಿಗೆ ಕಾರಣವಾಗಬಲ್ಲ, ಧಾರ್ಮಿಕ ಭಾವನೆಗಳನ್ನು ಕೆರಳಿಸಬಲ್ಲ ಪೋಸ್ಟ್‌ಗಳನ್ನು ಹಾಕಿದರೆ ದಂಡ ಹಾಗೂ ಕಠಿಣ ಕ್ರಮ ಎದುರಿಸಬೇಕಾಗಿ ಬರಬಹುದು.
ತಿರುಪತಿ ದೇವಾಲಯದಲ್ಲಿ ಫೇಶಿಯಲ್ ರೆಕಗ್ನಿಶನ್ ಟೆಕ್ನಾಲಜಿ:
ತಿರುಮಲದ ತಿರುಪತಿ ದೇವಸ್ಥಾನದಲ್ಲಿ ಮುಖ ಚಹರೆ ಪತ್ತೆಹಚ್ಚಬಲ್ಲ ಫೇಶಿಯಲ್ ರೆಕಗ್ನಿಶನ್ ಟೆಕ್ನಾಲಜಿ ಮಾರ್ಚ್ 1ರಿಂದ ಜಾರಿಯಾಗಲಿದೆ. (Facial recognition technology) ಟೋಕನ್‌ಲೆಸ್ ದರ್ಶನ ಮತ್ತು ವಸತಿ ವ್ಯವಸ್ಥೆ ಮಂಜೂರಾತಿಯಲ್ಲಿ ಪಾರದರ್ಶಕತೆ ತರಲು ಈ ತಂತ್ರಜ್ಞಾನ ಬಳಕೆಯಾಗಲಿದೆ.