ನವ ದೆಹಲಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಕುಸಿತದ ಜತೆಗೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ (Rupee fall) ಕೂಡ ಸೋಮವಾರ 81.55 ರೂ.ಗೆ ಕುಸಿಯಿತು. ಇದರಿಂದಾಗಿ ಆಮದು ತುಟ್ಟಿಯಾಗಲಿದೆ. ಇದು ಈವರೆಗಿನ ಸಾರ್ವಕಾಲಿಕ ಮೌಲ್ಯ ಕುಸಿತವಾಗಿದೆ.
ಅಮೆರಿಕದಲ್ಲಿ ಬಾಂಡ್‌ಗಳ ಆದಾಯ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ದಾಖಲೆಯ 81.55 ರೂ.ಗೆ ಕುಸಿಯಿತು.
ಅಮೆರಿಕದ ಡಾಲರ್ ಇಂಡೆಕ್ಸ್ 114 ಅಂಕಗಳಿಗೆ ಏರಿಕೆಯಾಗಿದೆ. ಕುಸಿಯುತ್ತಿರುವ ರೂಪಾಯಿ ಮೌಲ್ಯ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿಲ್ಲ. ಅಮೆರಿಕದ ಎರಡು ವರ್ಷಗಳ ಅವಧಿಯ ಬಾಂಡ್‌ಗಳ ಆದಾಯ 1.3 ಪರ್ಸೆಂಟ್ ಏರಿಕೆಯಾಗಿದೆ. 10 ವರ್ಷಗಳ ಅವಧಿಯ ಬಾಂಡ್ ಆದಾಯ 3.75%ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: Rupee @81 | ಡಾಲರ್ ಎದುರು ಮೊದಲ ಬಾರಿಗೆ ರೂಪಾಯಿ 81ಕ್ಕೆ ಕುಸಿತ, ಪರಿಣಾಮವೇನು?