Site icon Vistara News

Vistara Top 10 News : ರಾಮ ಮಂದಿರದ ಬಳಿ ನೂಕುನುಗ್ಗಲು; ಮಂದಿರದ ವಿಚಾರದಲ್ಲಿ ಕಾಂಗ್ರೆಸ್​ನಿಂದ ವಿವಾದಾತ್ಮಕ ಹೇಳಿಕೆ ಇತ್ಯಾದಿ ದಿನದ ಪ್ರಮುಖ ಸುದ್ದಿಗಳು

Ram Mandir

1. ರಾಮನ ದರ್ಶನಕ್ಕೆ ಸೇರಿದ ಲಕ್ಷಾಂತರ ಜನ; ನೂಕುನುಗ್ಗಲು, ಕಾಲ್ತುಳಿತ
ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರ (Ram Mandir) ಲೋಕಾರ್ಪಣೆಯಾದ ಬೆನ್ನಲ್ಲೇ ಶ್ರೀರಾಮನ ದರ್ಶನಕ್ಕಾಗಿ ಅಯೋಧ್ಯೆಯಲ್ಲಿ (Ayodhya) ಲಕ್ಷಾಂತರ ಭಕ್ತರು (Devotees) ಸೇರಿದ್ದಾರೆ. ಅದರಲ್ಲೂ, ಮಂಗಳವಾರ ಮಧ್ಯಾಹ್ನ ಎರಡನೇ ಅವಧಿಯ ದರ್ಶನದ ವೇಳೆ ನೂಕುನುಗ್ಗಲು, ತಳ್ಳಾಟ ಹಾಗೂ ಕಾಲ್ತುಳಿತ ಉಂಟಾಗಿದ್ದು, ಇದರಿಂದ ಕೆಲ ಭಕ್ತರು ಗಾಯಗೊಂಡಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : Ram Mandir: ರಾಜಸ್ಥಾನ ಶಿಲ್ಪಿಯ ವಿಗ್ರಹ ಆಯ್ಕೆಯಾಗಿದ್ದರೆ ಬಾಲಕ ರಾಮ ಹೀಗಿರುತ್ತಿದ್ದ ನೋಡಿ…

2. ಕೈಯಲ್ಲಿ ಮಂತ್ರಾಕ್ಷತೆ, ಬಗಲಲ್ಲಿ ದೊಣ್ಣೆ ಹಿಡಿದ ಬಿಜೆಪಿ ಗೂಂಡಾಗಳಿಗೆ ಹೆದರಲ್ಲ: ಡಿಕೆಶಿ
ಬೆಂಗಳೂರು: ಬಿಜೆಪಿ ಗೂಂಡಾಗಳು (BJP goons) ಕೈಯಲ್ಲಿ ಮಂತ್ರಾಕ್ಷತೆ ಹಿಡಿದಿದ್ದರೆ, ಬಗಲಲ್ಲಿ ದೊಣ್ಣೆ ಹಿಡಿದಿದ್ದಾರೆ. ಈ ಗೂಂಡಾಗಳ ಗೊಡ್ಡು ಬೆದರಿಕೆಗೆ ಯಾವುದೇ ಕಾಂಗ್ರೆಸ್ಸಿಗ ಹೆದರುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Rama Mandir : ಜೈ ಶ್ರೀರಾಮ್‌ ಘೋಷಣೆಯಲ್ಲಿ ತಪ್ಪೇನಿದೆ; ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಕಾಂಗ್ರೆಸ್‌

3. ಹಿರೇಮಗಳೂರು ಕಣ್ಣನ್‌ಗೆ ನೋಟಿಸ್‌; 10 ವರ್ಷದ ಸಂಬಳ ವಾಪಸ್‌ ಕೇಳಿದ ಸರ್ಕಾರ
ಚಿಕ್ಕಮಗಳೂರು : ವಾರ್ಷಿಕ ಆದಾಯಕ್ಕಿಂತ ವಾರ್ಷಿಕ ವೆಚ್ಚವೇ ಹೆಚ್ಚುವರಿಯಾಗಿದೆ ಎಂದು ದೇವಸ್ಥಾನದ ಅರ್ಚಕರಿಗೆ ನೀಡುತ್ತಿದ್ದ ಸಂಬಳವನ್ನು ರಾಜ್ಯ ಸರ್ಕಾರವು ವಾಪಸ್ ಕೇಳಿದೆ. ಕನ್ನಡದ ಪಂಡಿತ, ಸಾಹಿತಿ ಎಂದೇ ಖ್ಯಾತಿ ಪಡೆದಿರುವ ಹಿರೇಮಗಳೂರು ಕಣ್ಣನ್‌ಗೆ (Hiremagaluru Kannan) ವೇತನ ತಡೆಹಿಡಿದು ಚಿಕ್ಕಮಗಳೂರು ಜಿಲ್ಲಾಡಳಿತವು ನೋಟಿಸ್ ನೀಡಿದೆ. ಕಣ್ಣನ್‌ ಅವರು ಹಿರೇಮಗಳೂರು ಗ್ರಾಮದಲ್ಲಿರುವ ಕೊಂದಡರಾಮಚಂದ್ರಸ್ವಾಮಿ ದೇವಾಲಯದ ಅರ್ಚಕರಾಗಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : KS Eshwarappa : ಅರ್ಚಕರ ವೇತನ ವಾಪಸ್‌ ಆದೇಶಕ್ಕೆ ಬಿಜೆಪಿ ಆಕ್ರೋಶ, ಇದು ಹುಚ್ಚು ಸರ್ಕಾರ ಎಂದ ಈಶ್ವರಪ್ಪ
ಇದನ್ನೂ ಓದಿ : Hiremagaluru Kannan: ಕಣ್ಣನ್‌ ತಪ್ಪಿಲ್ಲ, ನೋಟಿಸ್‌ ವಾಪಸ್‌ಗೆ ಸೂಚಿಸುವೆ: ಸಚಿವ ರಾಮಲಿಂಗಾರೆಡ್ಡಿ

4. ಏಪ್ರಿಲ್‌ 16ರಿಂದ ಲೋಕಸಭೆ ಚುನಾವಣೆ?‌ ಚುನಾವಣೆ ಆಯೋಗ ಹೇಳಿದ್ದೇನು?
ಹೊಸದಿಲ್ಲಿ: ಲೋಕಸಭೆ ಚುನಾವಣೆ-2024ಕ್ಕೆ (Lok Sabha Election 2024) ಇಷ್ಟರಲ್ಲಿಯೇ ದಿನಾಂಕ ಘೋಷಿಸಲಾಗುತ್ತದೆ ಎಂದು ಸುದ್ದಿ ಹರಡುತ್ತಿರುವ ಬೆನ್ನಲ್ಲಿಯೇ, ಮಹತ್ವದ ಸಂದೇಶವೊಂದನ್ನು ಚುನಾವಣಾ ಆಯೋಗ (Election commission) ತನ್ನ ಎಕ್ಸ್‌ (ಟ್ವಿಟರ್)‌ ಹ್ಯಾಂಡಲ್‌ನಲ್ಲಿ ಹರಿಬಿಟ್ಟಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

5. ಅಸ್ಸಾಂನಲ್ಲಿ ರಾಹುಲ್‌ ಯಾತ್ರೆಗೆ ತಡೆ; ಪೊಲೀಸ್-‌ ಕಾಂಗ್ರೆಸ್‌ ಕಾರ್ಯಕರ್ತರ ಚಕಮಕಿ
ಗುವಾಹಟಿ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ (Rahul Gandhi) ನೇತೃತ್ವದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯನ್ನು (Bharat Jodo Nayay Yatra) ಇಂದು ಅಸ್ಸಾಂನ ಗುವಾಹಟಿಗೆ ಪ್ರವೇಶಿಸುವ ಸಂದರ್ಭದಲ್ಲಿ ತಡೆದ ಪರಿಣಾಮ, ಪೊಲೀಸರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಚಕಮಕಿ ಉಂಟಾಗಿದೆ ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Bharat Nyay Jodo Yatra: ಸುಮ್ಮನಿದ್ರೆ ಸರಿ, ಇಲ್ಲಾಂದ್ರೆ ಅರೆಸ್ಟ್ ಮಾಡಿಸುವೆ! ರಾಹುಲ್‌ಗೆ ಅಸ್ಸಾಮ್ ಸಿಎಂ ಧಮ್ಕಿ

6. ಒಂದು ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಸೆನ್ಸೆಕ್ಸ್! 8 ಲಕ್ಷ ಕೋಟಿ ರೂ. ನಷ್ಟ?
ನವದೆಹಲಿ: ರಾಮ ಮಂದಿರ (Ram Mandir) ಉದ್ಘಾಟನೆಗೊಂಡ ಮಾರನೇ ದಿನ ಕರಡಿ ಕುಣಿತಕ್ಕೆ ಭಾರತೀಯ ಷೇರುಪೇಟೆ (Indian Stock Market) ಭಾರೀ ನಷ್ಟ ಅನುಭವಿಸಿದೆ. ಮಂಗಳವಾರ ವ್ಯವಹಾರ ಆರಂಭಿಸಿದ ಸೆನ್ಸೆಕ್ಸ್ (Sensex) ತಿಂಗಳ ಕನಿಷ್ಠ ಕುಸಿತ ಕಂಡು, 1000 ಪಾಯಿಂಟ್ಸ್ ಕುಸಿತ ದಾಖಲಿಸಿತು. ಅದೇ ರೀತಿ ನಿಫ್ಟಿ (Nifty) ಕೂಡ 330 ಪಾಯಿಂಟ್ ಕುಸಿತ ಕಂಡಿದೆ. ಮಂಗಳವಾರ ಸೆನ್ಸೆಕ್ಸ್ 1,053.10 ಅಂಕ ಕುಸಿದು 70,370.55ಕ್ಕೆ ಸ್ಥಿರವಾದರೆ, ನಿಫ್ಟಿ 330.15 ಅಂಕ ಕುಸಿದು 21,241.65ಕ್ಕೆ ತಲುಪಿತು. ಸೆನ್ಸೆಕ್ಸ್‌ನಲ್ಲಿರುವ 30 ಕಂಪನಿಗಳ ಪೈಕಿ 25 ಷೇರುಗಳು ನಷ್ಟ ಅನುಭವಿಸಿವೆ. ಹೂಡಿಕೆದಾರರಿಗೆ (Investors) 8 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗುತ್ತಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

7. ಮಸೀದಿಗಾಗಿ ಉತ್ತರ ಪ್ರದೇಶ ಸರ್ಕಾರ ನೀಡಿರುವ ಜಾಗದಲ್ಲಿ ಈಗ ಏನು ನಡೆಯುತ್ತಿದೆ?
ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು (Ram Mandir) ಸೋಮವಾರ (ಜನವರಿ 22) ಲೋಕಾರ್ಪಣೆ ಮಾಡಲಾಗಿದೆ. ಮಂಗಳವಾರದಿಂದ (ಜನವರಿ 23) ಭಕ್ತರ ದರ್ಶನಕ್ಕೆ ಅವಕಾಶವನ್ನೂ ಕಲ್ಪಿಸಲಾಗಿದ್ದು, ಸಾವಿರಾರು ಜನ ರಾಮಲಲ್ಲಾನ (Ram Lalla) ದರ್ಶನಕ್ಕೆ ಕಾಯುತ್ತಿದ್ದಾರೆ. ಸುಪ್ರೀಂ ಕೋರ್ಟ್‌ ಆದೇಶ ನೀಡಿದ ಬಳಿಕ ರಾಮಮಂದಿರದ ಕನಸು ನನಸಾಗಿದೆ. ಆದರೆ, ಅಯೋಧ್ಯೆಯಿಂದ 25 ಕಿಲೋಮೀಟರ್‌ ದೂರದ ಧನ್ನಿಪುರ ಗ್ರಾಮದಲ್ಲಿ ಮಸೀದಿ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ 5 ಎಕರೆ ಜಾಗ ನೀಡಿದೆ. ಆದರೆ, ಇದುವರೆಗೆ ಮಸೀದಿ ನಿರ್ಮಾಣ ಕಾರ್ಯ ಮಾತ್ರ ಆರಂಭವಾಗಿಲ್ಲ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

8. ಮಂದಿರ ಉದ್ಘಾಟನೆ ದಿನ ಹುಟ್ಟಿದ ಮಗನಿಗೆ ರಾಮ್‌ ರಹೀಮ್‌ ಎಂದು ಹೆಸರಿಟ್ಟ ಮುಸ್ಲಿಂ ಮಹಿಳೆ!
ಲಖನೌ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಉದ್ಘಾಟಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಲಲ್ಲಾನಿಗೆ (Ram Lalla) ಪ್ರಾಣ ಪ್ರತಿಷ್ಠಾಪನೆ (Pran Pratishtha) ನೆರವೇರಿಸುವ ಜತೆಗೆ ಇದು ರಾಷ್ಟ್ರ ಮಂದಿರ ಎಂದು ಕರೆದಿದ್ದಾರೆ. ಎಲ್ಲರೂ ರಾಮನ ದರ್ಶನ ಪಡೆಯಿರಿ ಎಂದು ಕೂಡ ಮನವಿ ಮಾಡಿದ್ದಾರೆ. ಇದರ ಮಧ್ಯೆಯೇ, ರಾಮಮಂದಿರ ಲೋಕಾರ್ಪಣೆ ದಿನವಾದ ಸೋಮವಾರವೇ (ಜನವರಿ 23) ಗಂಡು ಮಗುವಿಗೆ ಜನ್ಮ ನೀಡಿದ ಮುಸ್ಲಿಂ ಮಹಿಳೆಯೊಬ್ಬರು, ಆ ಮಗುವಿಗೆ ರಾಮ್‌ ರಹೀಮ್‌ (Ram Rahim) ಎಂದು ಹೆಸರಿಡುವ ಮೂಲಕ ಸೌಹಾರ್ದದ ಸಂದೇಶ ರವಾನಿಸಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

9. ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್​ ಅಲ್ಲ, ಮತ್ಯಾರಿಗೆ ಹೊಣೆ?
ಬೆಂಗಳೂರು: ಜನವರಿ 25ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ (Ind vs Eng) 5 ಪಂದ್ಯಗಳ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸಜ್ಜಾಗಿದೆ. ಹೈದರಾಬಾದ್​​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಮೊದಲ ಟೆಸ್ಟ್ ಸಮೀಪಿಸುತ್ತಿರುವುದರಿಂದ ಭಾರತ ವಿರುದ್ಧದ ಸರಣಿಗೆ ಭಾರತದ ವಿಕೆಟ್ ಕೀಪರ್ ಯಾರು ಎಂಬ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

10. ರೇಖಾ ಜತೆಗಿನ 70ರ ದಶಕದ ಫೋಟೊ ಹಂಚಿಕೊಂಡು ಕುತೂಹಲ ಕೆರಳಿಸಿದ ಬಿಗ್‌ ಬಿ
ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿತಾಭ್‌ ಬಚ್ಚನ್‌ (Amitabh Bachchan) ಸುಮಾರು 50 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ವೈವಿಧ್ಯಮಯ ಪಾತ್ರಗಳ ಆಯ್ಕೆಯೊಂದಿಗೆ ಇಂದಿಗೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಹಿಂದಿ ಸಿನಿಮಾಗಳ ಜತೆಗೆ ಆಗಾಗ ಅನ್ಯ ಭಾಷೆಯ ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ. ಜತೆಗೆ ಜಾಹೀರಾತು, ಕಿರುತೆರೆ ಶೋನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಆಗಾಗ ಸೋಷಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳ ಜತೆ ಸಂಪರ್ಕದಲ್ಲಿ ಇರುತ್ತಾರೆ. ಅದರಂತೆ ಇತ್ತೀಚೆಗೆ ಬಿಗ್‌ ಬಿ ಬ್ಲಾಗ್ ಪೋಸ್ಟ್‌ನಲ್ಲಿ ಉದ್ಯಮದಲ್ಲಿನ ತಮ್ಮ ಆರಂಭಿಕ ದಿನಗಳ ಸಿಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ರೇಖಾ, ರಾಜ್ ಕಪೂರ್, ವಿನೋದ್ ಖನ್ನಾ, ಸಂಗೀತ ನಿರ್ದೇಶಕ ಕಲ್ಯಾಣ್, ರಣಧೀರ್ ಕಪೂರ್, ಮೆಹಮೂದ್ ಮತ್ತು ಶಮ್ಮಿ ಕಪೂರ್ ಅವರನ್ನೊಳಗೊಂಡ ಫೋಟೋವನ್ನು ಶೇರ್‌ ಮಾಡಿದ್ದಾರೆ. ಇದು 70ರ ದಶಕದಲ್ಲಿ ತೆಗೆದ ಫೋಟೊ ಎನ್ನುವುದು ವಿಶೇಷ. ಈ ಫೋಟೊದ ಹಿಂದೆ ದೊಡ್ಡ ಕಥೆಯೇ ಇದೆ ಎಂದು ಹೇಳಿಕೊಂಡಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

Exit mobile version