Site icon Vistara News

Gehlot VS Pilot | ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವರೇ ಅಶೋಕ್ ಗೆಹ್ಲೋಟ್?‌ ಸಚಿನ್‌ ಪೈಲಟ್‌ ಹೇಳಿದ್ದೇನು?

Gehlot VS Pilot

ಜೈಪುರ: ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ಬಂಡಾಯ ನಾಯಕ ಸಚಿನ್‌ ಪೈಲಟ್‌ ಮಧ್ಯೆ (Gehlot VS Pilot) ಮತ್ತೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಅದರಲ್ಲೂ, ಈ ಬಾರಿ ಸಚಿನ್‌ ಪೈಲಟ್‌ ಮಾಡಿರುವ ಆರೋಪವು ಕಾಂಗ್ರೆಸ್‌ ಆಂತರಿಕ ಬಿಕ್ಕಟ್ಟು ಹಾಗೂ ಮುಂದಿನ ದಿನಗಳಲ್ಲಿ ನಡೆಯುವ ಬೆಳವಣಿಗೆಗಳ ಸಾಧ್ಯತೆಯನ್ನು ತೆರೆದಿಟ್ಟಿವೆ.

ರಾಜಸ್ಥಾನದಲ್ಲಿ ಮಂಗಳವಾರ (ನವೆಂಬರ್‌ 1) ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ವೇದಿಕೆ ಹಂಚಿಕೊಂಡಿದ್ದು, ಇದೇ ವೇಳೆ ಪರಸ್ಪರ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅದರಲ್ಲೂ, ಗೆಹ್ಲೋಟ್‌ ಅವರನ್ನು ಮೋದಿ ಹೊಗಳಿದ್ದಕ್ಕೆ ಪೈಲಟ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ನರೇಂದ್ರ ಮೋದಿ ಅವರು ಇದಕ್ಕೂ ಮೊದಲು ಗುಲಾಂ ನಬಿ ಆಜಾದ್‌ ಅವರನ್ನು ಹೊಗಳಿದ್ದರು. ಇದಾದ ಬಳಿಕ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಗೆಹ್ಲೋಟ್‌ ಅವರನ್ನು ಮೋದಿ ಹೊಗಳಿದ್ದು ಅಚ್ಚರಿ ಮೂಡಿಸಿದೆ” ಎಂದಿದ್ದಾರೆ. ಆ ಮೂಲಕ ಗೆಹ್ಲೋಟ್‌ ಅವರು ಕೂಡ ಕಾಂಗ್ರೆಸ್‌ ತೊರೆಯಲಿದ್ದಾರೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಮೋದಿ ಹಾಗೂ ಗೆಹ್ಲೋಟ್‌ ಪರಸ್ಪರ ಹೊಗಳಿದ್ದರು. “ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಯಾವುದೇ ದೇಶಕ್ಕೆ ಹೋದರೂ ಅವರಿಗಾಗಿ ಜನ ಕಾಯುತ್ತಾರೆ. ದೇಶಕ್ಕೆ ಮೋದಿ ಅವರು ಅಂತಹ ವರ್ಚಸ್ಸು ನೀಡಿದ್ದಾರೆ” ಎಂದು ಗೆಹ್ಲೋಟ್‌ ಹೇಳಿದ್ದರು. “ಅಶೋಕ್‌ ಗೆಹ್ಲೋಟ್‌ ಅವರು ದೇಶ ಕಂಡ ಹಿರಿಯ ರಾಜಕಾರಣಿಯಾಗಿದ್ದು, ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ” ಎಂದು ಮೋದಿ ಬಣ್ಣಿಸಿದ್ದರು.

ಶಿಸ್ತು ಕಾಪಾಡಿ ಎಂದ ಗೆಹ್ಲೋಟ್‌

ಸಚಿನ್‌ ಪೈಲಟ್‌ ಅವರು ಮಾಡಿದ ಆರೋಪಕ್ಕೆ ಅಶೋಕ್‌ ಗೆಹ್ಲೋಟ್‌ ತಿರುಗೇಟು ನೀಡಿದ್ದು, “ಪಕ್ಷದ ನಾಯಕರು ಶಿಸ್ತು ಕಾಪಾಡಿಕೊಳ್ಳಬೇಕು” ಎಂದು ಸೂಚಿಸಿದ್ದಾರೆ. “ಪಕ್ಷದ ಹಿತಾಸಕ್ತಿಗಳಿಗೆ ಧಕ್ಕೆ ತರುವ ಅಂಶಗಳ ಮೇಲೆ ನಾಯಕರು ಹೆಚ್ಚು ಗಮನಿಸಬೇಕು. ಶಿಸ್ತು ಮೀರಿದ ಹೇಳಿಕೆ ನೀಡಬಾರದು” ಎಂದಿದ್ದಾರೆ.

ಇದನ್ನೂ ಓದಿ | Gehlot VS Pilot | ಪೈಲಟ್‌ ಸಿಎಂ ಆದರೆ 70% ಶಾಸಕರ ರಾಜೀನಾಮೆ? ರಾಜಸ್ಥಾನದಲ್ಲಿ ನಾಟಕೀಯ ಬೆಳವಣಿಗೆ

Exit mobile version