Site icon Vistara News

Viral Video: ಆಜಾನ್​ ವೇಳೆ ಭಾಷಣ ನಿಲ್ಲಿಸಿದರೂ ನೀವು ಸೈತಾನ್​ ಆಗಿಯೇ ಇರುತ್ತೀರಿ; ಪ್ರಧಾನಿ ಮೋದಿ ವಿರುದ್ಧ ಪಾಕ್​ ಮಾಜಿ ಕ್ರಿಕೆಟರ್​ ವಾಗ್ದಾಳಿ

Saeed Anwar Called PM modi As Shaitan Video Viral

#image_title

ಪಾಕಿಸ್ತಾನ ಕ್ರಿಕೆಟ್​ ಆಟಗಾರ, ತಂಡದ ಮಾಜಿ ಕ್ಯಾಪ್ಟನ್​ ಸಯೀದ್ ಅನ್ವರ್​ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ವಿಡಿಯೊವೊಂದು ವೈರಲ್ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಸೈತಾನ್​ (ದೆವ್ವ) ಎಂದು ಕರೆದರು. ‘ಎಷ್ಟೇ ಸಲ ನೀವು ಮುಸ್ಲಿಮರ ಅಜಾನ್​ (ಪ್ರಾರ್ಥನೆಗಾಗಿ ಮುಸ್ಲಿಂ ಸಮುದಾಯದವರನ್ನು ಕರೆಯುವುದು) ವೇಳೆ ನಿಮ್ಮ ಭಾಷಣವನ್ನು ನಿಲ್ಲಿಸಿದರೂ ಕೂಡ ನೀವೊಬ್ಬ ದೆವ್ವ ಹಿಡಿದ ಹಿಂದುವಾಗಿಯೇ ಉಳಿಯುತ್ತೀರಿ’ ಎಂದು ಅನ್ವರ್ ಹೇಳಿರುವುದನ್ನು ವಿಡಿಯೊದಲ್ಲಿ ಕೇಳಬಹುದು. ಹಾಗೇ, ಗೃಹ ಸಚಿವ ಅಮಿತ್​ ಶಾ ಅವರ ವಿರುದ್ಧವೂ ಅನ್ವರ್ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಮುಸ್ಲಿಂ ನಾಯಕರು ತಮಗೆ ತೊಡಿಸಲು ಬಂದ ಟೋಪಿಯನ್ನು ಧರಿಸಲು ನಿರಾಕರಿಸಿದ್ದರು. ಅದಾದ ಬಳಿಕ ಗುಜರಾತ್​​ನಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಆಜಾನ್​ ಕೇಳುತ್ತಿದ್ದಂತೆ ಸ್ವಲ್ಪ ಕಾಲ ಭಾಷಣ ನಿಲ್ಲಿಸಿ, ಆಜಾನ್ ಮುಗಿಯುತ್ತಿದ್ದಂತೆ ಮಾತು ಮುಂದುವರಿಸಿದ್ದರು. ಅದೇ ರೀತಿ ಗೃಹ ಸಚಿವ ಅಮಿತ್ ಶಾ ಅವರು ಕಳೆದ ವರ್ಷ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಾಷಣ ಮಾಡುತ್ತಿದ್ದಾಗ, ಆಜಾನ್​ ಕೂಗುತ್ತಿದ್ದಂತೆ ತಮ್ಮ ಮಾತು ನಿಲ್ಲಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಈ ನಡೆಯನ್ನು ಸಾರ್ವಜನಿಕರು ಪ್ರಶಂಸಿಸಿದ್ದರು. ಆದರೆ ಅದೇ ವಿಷಯವನ್ನು ಇಟ್ಟುಕೊಂಡು ಸಯೀದ್ ಅನ್ವರ್ ಅವರು ಮೋದಿ ಮತ್ತು ಅಮಿತ್​ ಶಾ ವಿರುದ್ಧ ಮಾತನಾಡಿದ್ದಾರೆ. ಇಬ್ಬರೂ ದೆವ್ವ ಹಿಡಿದ ಹಿಂದುಗಳು ಎಂದಿದ್ದಾರೆ.

ಸಯೀದ್ ಅನ್ವರ್​ ಅವರು ಪಾಕಿಸ್ತಾನದ ನಿವೃತ್ತ ಕ್ರಿಕೆಟ್​ ಆಟಗಾರ. ಏಕದಿನ ಮತ್ತು ಟೆಸ್ಟ್​ ಪಂದ್ಯಗಳಿಗೆ ಕ್ಯಾಪ್ಟನ್​ ಆಗಿದ್ದರು. 1989ರಿಂದ 2003ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿದ್ದಾರೆ. ಸದ್ಯ ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ತಮಗೆ ನರೇಂದ್ರ ಮೋದಿಯಾದರೂ ಪ್ರಧಾನಿಯಾಗಿ ಸಿಬೇಕಿತ್ತು ಎಂದು ಹೇಳಿದ್ದ ವಿಡಿಯೊ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಸೈಯೀದ್ ಅನ್ವರ್​ ಅವರು ಪ್ರಧಾನಿಗೆ ಬೈದ ವಿಡಿಯೊ ವೈರಲ್ ಆಗಿದೆ.

Exit mobile version