ಸೊಲ್ಲಾಪುರ, ಮಹಾರಾಷ್ಟ್ರ: ಲವ್ ಪಾಕಿಸ್ತಾನ್ (Lover Pakistan) ಮತ್ತು ಪಾಕಿಸ್ತಾನ್ ಜಿಂದಾಬಾದ್ (Pakistan Zindabad) ಎಂಬ ಘೋಷಣೆಗಳುಳ್ಳ ಬಲೂನ್ (balloon) ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು (vendor arrested) ಮಹಾರಾಷ್ಟ್ರದ (Maharashtra) ಸೊಲ್ಲಾಪುರ (Solapur City) ನಗರದಲ್ಲಿ ಗುರುವಾರ ನಡೆದಿದೆ. ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಸೊಲ್ಲಾಪುರ ನಗರದ ಹೊಟ್ಗಿ ರಸ್ತೆಯಲ್ಲಿರುವ ಶಾಹಿ ಅಲಮಗಿರ್ ಈದ್ಗಾದ ದರ್ಗಾ ಬಳಿ ವ್ಯಕ್ತಿ ಈ ಬಲೂನ್ಗಳನ್ನು ಮಾರುತ್ತಿದ್ದ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯ ಮುಸ್ಲಿಮರು, ಆತನ ಬಂಧನಕ್ಕೆ ಪೊಲೀಸರಿಗೆ ಸಹಾಯ ಮಾಡಿದರು ಎಂದು ಇಂಡಿಯಾ ಟಿವಿ ವರದಿ ಮಾಡಿದೆ.
ದರ್ಗಾ ಬಳಿ ಬಲೂನ್ ಮಾರುತ್ತಿದ್ದ ವ್ಯಕ್ತಿಯ ಬಗ್ಗೆ ಪೊಲೀಸರಿಗೆ ಮುಸ್ಲಿಮರೇ ಮಾಹಿತಿ ನೀಡಿದ್ದಾರೆ. ಅಲ್ಲದೇ ಬಲೂನ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಕುರಿತು ಬೇರೆಯವರಿಗೂ ತಿಳಿಸಿದ್ದಾರೆ. ಬಳಿಕ ಆತನನ್ನು ಬಂಧಿಸುವಲ್ಲಿ ಪೊಲೀಸರಿಗೆ ನೆರವು ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Vijayapura News: ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲಿಂ ರಾಷ್ಟ್ರ ಎಂದು ಸ್ಟೇಟಸ್ ಹಾಕಿದ್ದ ಯುವಕನ ಬಂಧನ
ಬಲೂನ್ ಆಕಾಶಬುಟ್ಟಿಗಳ ಮೇಲೆ ಇತರ ಆಕ್ಷೇಪಾರ್ಹ ಪಠ್ಯವನ್ನು ಬರೆಯಲಾಗಿದೆ. ಇದನ್ನು ಮನಗಂಡ ದರ್ಗಾಕ್ಕೆ ಭೇಟಿ ನೀಡಿದ ಮುಸ್ಲಿಮರು ಕೂಡಲೇ ಆ ಪ್ರದೇಶದಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಜನರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯಾ ಟಿವಿ ವರದಿ ಮಾಡಿದೆ.
ಈ ಘಟನೆಯ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.