ನವದೆಹಲಿ: ಮಾರ್ಚ್ ತಿಂಗಳಿಗೆ ಮುಕ್ತಾಯವಾದ ನಾಲ್ಕನೇ ತ್ರೈಮಾಸಿಕದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ನಿವ್ವಳ 16,694 ಕೋಟಿ ರೂ. ಲಾಭಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಎಸ್‌ಬಿಐ 9,113.53 ಕೋಟಿ ರೂ. ಲಾಭಗಳಿಸಿತ್ತು. ಅಂದರೆ, ಲಾಭ ಗಳಿಕೆಯಲ್ಲಿ ಶೇ.83.18 ಏರಿಕೆಯಾಗಿದೆ. ಇದೇ ವೇಳೆ, 40,392. 50 ಕೋಟಿ ರೂಪಾಯಿ ಆದಾಯ ಬಂದಿದೆ. ಕಳೆದ ವರ್ಷ ಆದಾಯ ಪ್ರಮಾಣ 31,197 ಕೋಟಿ ರೂ. ಇದ್ದು, ಅದು29.5ರಷ್ಟು ಏರಿಕೆಯಾಗಿದೆ(SBI Q4 Results).
ಸಮೀಕ್ಷೆಯ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ವರ್ಷಕ್ಕಿಂತ ಈ ವರ್ಷ 68 ಪ್ರತಿಶತದಷ್ಟು ಲಾಭವನ್ನು ಗಳಿಸುವ ನಿರೀಕ್ಷೆಯಿದೆ. ನಿವ್ವಳ ಬಡ್ಡಿ ಆದಾಯವು ಶೇ.25.8 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಡಳಿತ ಮಂಡಳಿಯುವ ಪ್ರತಿ ಈಕ್ವಿಟಿ ಷೇರ್‌ಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ 11.30 ರೂ. ಲಾಭಾಂಶ ನೀಡಲು ಶಿಫಾರಸು ಮಾಡಿದೆ. ಷೇರುದಾರರಿಗೆ 2023ರ ಜೂನ್ 14ರಂದು ಲಾಭಾಂಶ ವಿತರಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ.
ಇದನ್ನೂ ಓದಿ: Scam Alert: ಎಸ್‌ಬಿಐ ಬ್ಯಾಂಕ್ ಖಾತೆ ತಾತ್ಕಾಲಿಕ ರದ್ದಾಗಿದೆ ಎಂಬ ಸಂದೇಶ ಬಂದಿದೆಯೇ? ಹಾಗಿದ್ದರೆ, ಹುಷಾರಾಗಿರಿ!
2023 ಹಣಕಾಸು ವರ್ಷದಲ್ಲಿ ಬ್ಯಾಂಕಿನ ಸ್ವತ್ತುಗಳ ಮೇಲಿನ ಆದಾಯ (ROA) ಮತ್ತು ಇಕ್ವಿಟಿ ಮೇಲಿನ ಆದಾಯ (ROE) ಕ್ರಮವಾಗಿ 0.96 ಪ್ರತಿಶತ ಮತ್ತು 19.43 ಪ್ರತಿಶತದಷ್ಟಿದೆ ಎಂದು ಎಂದು ಎಸ್ ಬಿ ಐ ಹೇಳಿದೆ.
ಇನ್ನಷ್ಟು ವಾಣಿಜ್ಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.