ಮುಂಬೈ: ಸ್ಥಿರ ಠೇವಣಿದಾರರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ (State Bank Of India) ಸಿಹಿ ಸುದ್ದಿ ನೀಡಿದೆ. ಸ್ಥಿರ ಠೇವಣಿ ಮೇಲಿನ ಬಡ್ಡಿದರದಲ್ಲಿ (SBI FD Rates) ಎಸ್‌ಬಿಐ 50 ಮೂಲಾಂಕಗಳನ್ನು ಏರಿಸಿದೆ. ಅಂದರೆ, ಎಫ್‌ಡಿ ಮೇಲೆ ಇದುವರೆಗೆ ಸಿಗುತ್ತಿದ್ದ ಬಡ್ಡಿದರಕ್ಕಿಂತ ಇನ್ನುಮುಂದೆ ಶೇ.0.50ರಷ್ಟು ಹೆಚ್ಚಿನ ಬಡ್ಡಿಯ ಲಾಭ ಸಿಗಲಿದೆ. ಕಳೆದ 10 ತಿಂಗಳಲ್ಲಿ ಗ್ರಾಹಕರ ಹಿತದೃಷ್ಟಿಯಿಂದ ಎಸ್‌ಬಿಐ (SBI) ತೆಗೆದುಕೊಂಡ ಪ್ರಮುಖ ನಿರ್ಧಾರ ಇದಾಗಿದೆ ಎಂದು ತಿಳಿದುಬಂದಿದೆ.
ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಗರಿಷ್ಠ ಎರಡು ಕೋಟಿ ರೂಪಾಯಿವರೆಗೆ ಸ್ಥಿರ ಠೇವಣಿ ಇಡುವವರಿಗೆ ನೂತನ ಬಡ್ಡಿದರವು ಭಾರಿ ಅನುಕೂಲವಾಗಲಿದೆ. ಇದರೊಂದಿಗೆ ಬ್ಯಾಂಕ್ ಆಫ್ ಇಂಡಿಯಾ, ಫೆಡರಲ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್ ಹಾಗೂ ಡಿಸಿಬಿ ಬ್ಯಾಂಕ್ ನಂತರ ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದ ಬ್ಯಾಂಕ್ ಎಂಬ ಖ್ಯಾತಿಗೆ ಎಸ್‌ಬಿಐ ಪಾತ್ರವಾಗಿದೆ. ಎಫ್‌ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಕಾರಣ ಮುಂದಿನ ದಿನಗಳಲ್ಲಿ ಎಫ್‌ಡಿ ಠೇವಣಿದಾರರ ಸಂಖ್ಯೆ ಜಾಸ್ತಿಯಾಗಲಿದೆ ಎಂದು ತಿಳಿದುಬಂದಿದೆ.
SBI hikes short term Fixed Deposit (FD) rates.
— Save Invest Repeat 📈 (@InvestRepeat) December 27, 2023
Above 5 year rate remains 6.5%.
HDFC currently gives 7% for a 10 year FD. pic.twitter.com/tNRxANMVG6
ಹೀಗಿರಲಿದೆ ನೂತನ ಬಡ್ಡಿದರ
ಎಫ್‌ಡಿ ಅವಧಿ | ನೂತನ ಬಡ್ಡಿದರ |
180-210 ದಿನ | 6.25% |
211 ದಿನದಿಂದ 1 ವರ್ಷ | 6.50% |
1-2 ವರ್ಷ | 7.30% |
2-3 ವರ್ಷ | 7.50% |
3-5 ವರ್ಷ | 7.25% |
5-10 ವರ್ಷ | 7.50% |
ಇದನ್ನೂ ಓದಿ: Money Guide: ಕಡಿಮೆ ಬಡ್ಡಿ ದರದ ಸಾಲ ಬೇಕೆ? ಮೊದಲು ಈ ಕೆಲಸ ಮಾಡಿ
ಎಫ್‌ಡಿ ಬಡ್ಡಿದರ ಏರಿಸಲು ಕಾರಣವೇನು?
ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ಆರ್ಥಿಕತೆಯು ಏಳಿಗೆಯತ್ತ ಸಾಗುತ್ತಿದೆ. ಇದರಿಂದ ಬ್ಯಾಂಕ್‌ಗಳಲ್ಲಿ ವಾಹಿವಾಟು ಜಾಸ್ತಿಯಾಗಿದೆ. ಅಲ್ಲದೆ, ಕಳೆದ ಏಪ್ರಿಲ್ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮುಂದಿನ ದಿನಗಳಲ್ಲೂ ರೆಪೋ ದರದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆ ಕಡಿಮೆ ಇದೆ. ಇದರಿಂದ ಗೃಹ ಸಾಲದ ಮೇಲೆ ಹೆಚ್ಚಿನ ಇಎಂಐ ಕಟ್ಟುವ ಹೊರೆಯು ಜನರಿಗೆ ಇರುವುದಿಲ್ಲ. ಹಾಗಾಗಿ, ಎಸ್‌ಬಿಐ ಸೇರಿ ಹಲವು ಬ್ಯಾಂಕ್‌ಗಳು ಜನರಿಂದ ಹೆಚ್ಚಿನ ಠೇವಣಿಯನ್ನು ಸೆಳೆಯಲು ಸ್ಥಿರ ಠೇವಣಿ ಮೇಲಿನ ಬಡ್ಡಿದರವನ್ನು ಏರಿಕೆ ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ