ಹೊಸದಿಲ್ಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟಿದೆ. ಇನ್ನು ಮುಂದೆ ಎಸ್‌ಬಿಐನ ಸಾಲ ದುಬಾರಿಯಾಗಲಿದೆ. ಅಂದರೆ ಎಸ್‌ಬಿಐ ತಮ್ಮ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್(MCLR) ಅನ್ನು 5-10 ಪಾಯಿಂಟ್ ಹೆಚ್ಚಿಸಿದೆ. ಹೀಗಾಗಿ ಸಾಲದ ಮೇಲಿನ ದರ ಏರಿಕೆ ಆಗಲಿದ್ದು, ಇದು ನೇರವಾಗಿ ತಿಂಗಳ EMI ಮೇಲೆ ಬೀಳಲಿದೆ.
ಭಾರತದ ಅತಿದೊಡ್ಡ ಬ್ಯಾಂಕ್, ಎಸ್‌ಬಿಐ, 1 ವರ್ಷದ ಅವಧಿಯ ಸಾಲದ ಮೇಲಿನ ಎಂಸಿಎಲ್‌ಆರ್ ಅನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಮಾಡಿದ್ದು, ಶೇಕಡಾ 8.85 ಕ್ಕೆ ಏರಿಕೆ ಆಗಿದೆ. ಅಂತೆಯೇ, 3-ತಿಂಗಳು, 6-ತಿಂಗಳು ಮತ್ತು 2-ವರ್ಷದ ಸಾಲದ ಅವಧಿಗೆ MCLR ಅನ್ನು ತಲಾ 10 ಮೂಲ ಅಂಕಗಳನ್ನು ಹೆಚ್ಚಿಸಲಾಗಿದೆ, ಕ್ರಮವಾಗಿ 8.4 ಶೇಕಡಾ, 8.75 ಶೇಕಡಾ ಮತ್ತು 8.95 ಶೇಕಡಾವನ್ನು ತಲುಪಿದೆ.
ಇದಕ್ಕೂ ಮೊದಲು, ಜೂನ್ ಮಧ್ಯದಲ್ಲಿ ಎಸ್‌ಬಿಐ ವಿವಿಧ ಅವಧಿಗಳಿಗೆ ಎಂಸಿಎಲ್‌ಆರ್ ಅನ್ನು 10 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿತ್ತು, ಆ ಸಮಯದಲ್ಲಿ 1 ವರ್ಷದ ಸಾಲಗಳಿಗೆ ಬೆಂಚ್‌ಮಾರ್ಕ್ ದರವನ್ನು ಶೇಕಡಾ 8.75ಕ್ಕೆ ಏರಿಕೆ ಮಾಡಿತ್ತು.
2024-25ನೇ ಹಣಕಾಸು ವರ್ಷದಲ್ಲಿ ದೇಶಾದ್ಯಂತ ಗ್ರಾಮೀಣ ಭಾಗಗಳೂ ಸೇರಿ 400 ಹೊಸ ಶಾಖೆಗಳನ್ನು ತೆರೆಯಲು ಎಸ್‌ಬಿಐ ತೀರ್ಮಾನಿಸಿದೆ. ಇದರಿಂದಾಗಿ, ಗ್ರಾಮೀಣ ಪ್ರದೇಶಗಳಲ್ಲೂ ಜನ ಬ್ಯಾಂಕ್‌ಗಳನ್ನು ಹೊಂದಬಹುದಾಗಿದೆ. ಹೊಸ ಶಾಖೆಗಳನ್ನು ತೆರೆಯುವ ಕುರಿತು ಎಸ್‌ಬಿಐ ಚೇರ್ಮನ್ ದಿನೇಶ್ ಕುಮಾರ್ ಖಾರಾ ಅವರು ಮಾಹಿತಿ ನೀಡಿದ್ದರು.
ದೇಶದಲ್ಲಿ ಶೇ.89ರಷ್ಟು ವಹಿವಾಟುಗಳು ಡಿಜಿಟಲ್ ಮೂಲಕ ಹಾಗೂ ಶೇ.98ರಷ್ಟು ವಹಿವಾಟು ಬ್ಯಾಂಕ್ ಹೊರತಾಗಿ ನಡೆಯುತ್ತಿವೆ. ಹೀಗಿರುವಾಗ ಬ್ಯಾಂಕ್‌ಗಳ ಬ್ರ್ಯಾಂಚ್‌ಗಳು ಏಕೆ ಬೇಕು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ, ದೇಶದ ಪ್ರತಿಯೊಂದು ಭಾಗದಲ್ಲೂ, ಹೊಸ ಹೊಸ ಪಟ್ಟಣ, ಗ್ರಾಮಗಳಿಗೂ ಬ್ಯಾಂಕ್ ಬ್ರ್ಯಾಂಚ್‌ಗಳ ಅವಶ್ಯಕತೆ ಇದೆ. ಇದೇ ಕಾರಣಕ್ಕಾಗಿಯೇ 2024-25ನೇ ಹಣಕಾಸು ವರ್ಷದಲ್ಲಿ ದೇಶದ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಬ್ರ್ಯಾಂಚ್‌ಗಳನ್ನು ತೆರೆಯಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.
ದೇಶಾದ್ಯಂತ ಹೊಸ ಹೊಸ ಪ್ರದೇಶಗಳಲ್ಲಿ ಬ್ಯಾಂಕ್ ಶಾಖೆಗಳನ್ನು ಸ್ಥಳಗಳ ಹುಡುಕಾಟ ನಡೆಯುತ್ತಿದೆ. ಜನರಿಗೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಬ್ಯಾಂಕ್ ಸೇವೆಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ಸ್ಥಳಗಳನ್ನು ನಿರ್ಧರಿಸುವ ಕೆಲಸ ನಡೆಯುತ್ತಿದೆ. ದೇಶದ ಜನರಿಗೆ ಬ್ಯಾಂಕ್‌ಗಳ ಅವಶ್ಯಕತೆ ಹೆಚ್ಚಿಲ್ಲ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ದೇಶದ ಪ್ರತಿಯೊಂದು ಭಾಗದಲ್ಲಿ ಬ್ಯಾಂಕ್ ಬ್ರ್ಯಾಂಚ್‌ಗಳ ಅವಶ್ಯಕತೆ ಇದೆ. ಆ ಅವಶ್ಯಕತೆಯನ್ನು ಪೂರೈಸುವುದು ನಮ್ಮ ಆದ್ಯತೆಯಾಗಿದೆ” ಎಂದು ಪಿಟಿಐಗೆ ವಿವರಿಸಿದರು
ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟ ಚಲನಚಿತ್ರ ವಾಣಿಜ್ಯ ಮಂಡಳಿ