Site icon Vistara News

SBI Warning: ನಕಲಿ ಸಂದೇಶಗಳ ಬಗ್ಗೆ ಎಚ್ಚರ‌ ಇರಲಿ; ಗ್ರಾಹಕರಿಗೆ ಎಸ್ ಬಿ ಐ ಸೂಚನೆ

SBI Warning

ರಿವಾರ್ಡ್ ಪಾಯಿಂಟ್ ಅಧಿಸೂಚನೆಗಳು (point redemption notifications) ಸೇರಿದಂತೆ ನಕಲಿ ಸಂದೇಶಗಳ (fake messages) ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI Warning) ಎಚ್ಚರಿಕೆ ನೀಡಿದೆ. ಎಸ್‌ಎಂಎಸ್ (SMS) ಅಥವಾ ವಾಟ್ಸಾಪ್ (whats app) ಮೂಲಕ ಕಳುಹಿಸಲಾದ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಅಥವಾ ಯಾವುದೇ ಅಪ್ಲಿಕೇಶನ್‌ ಅಥವಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡದಂತೆ ಬ್ಯಾಂಕ್ ಗ್ರಾಹಕರಿಗೆ ಸಲಹೆ ನೀಡಿದೆ.

ವಿವಿಧ ಬ್ಯಾಂಕಿಂಗ್ ಚಾನೆಲ್‌ಗಳ ಮೂಲಕ ಮಾಡಿದ ನಿಯಮಿತ ವಹಿವಾಟುಗಳಿಗಾಗಿ ಎಸ್‌ಬಿಐ ತನ್ನ ಗ್ರಾಹಕರಿಗೆ ಕಾರ್ಪೊರೇಟ್-ವೈಡ್ ಲಾಯಲ್ಟಿ ಕಾರ್ಯಕ್ರಮವಾಗಿ ಪಾಯಿಂಟ್‌ಗಳನ್ನು ನೀಡುತ್ತದೆ. ಅಲ್ಲದೆ, ಪ್ರತಿ ಪಾಯಿಂಟ್‌ನ ಮೌಲ್ಯವು 25 ಪೈಸೆ. ಅನೇಕ ಬಳಕೆದಾರರು ಹಲವಾರು ತಿಂಗಳುಗಳವರೆಗೆ ತಮ್ಮ ಅಂಕಗಳನ್ನು ಪಡೆದುಕೊಳ್ಳುವುದಿಲ್ಲ.

ಹೆಚ್ಚುತ್ತಿರುವ ವಂಚನೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಸ್‌ಬಿಐ ತನ್ನ ಗ್ರಾಹಕರು ಎಚ್ಚರಿಕೆ ವಹಿಸುವಂತೆ ತಿಳಿಸಿದೆ.

ಸೈಬರ್ ವಂಚಕರು ಗ್ರಾಹಕರನ್ನು ವಂಚಿಸಲು ಹೊಸ ಹೊಸ ವಿಧಾನವನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಮೊದಲಿಗೆ ನಕಲಿ ಎಪಿಕೆ ಲಿಂಕ್‌ಗಳ ಮೂಲಕ ಬಳಕೆದಾರರಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು ಅವಕಾಶ ನೀಡುವಂತೆ ಹೇಳುತ್ತಾರೆ. ಹೀಗಾಗಿ ಗ್ರಾಹಕರು ಎಚ್ಚರಿಕೆ ವಹಿಸಬೇಕು.

ಎಪಿಕೆ ಎಂದರೆ ಆಂಡ್ರಾಯ್ಡ್ ಅಪ್ಲಿಕೇಶನ್ ಪ್ಯಾಕೇಜ್. APK ಎನ್ನುವುದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಿಂದ ಸಾಧನಗಳಲ್ಲಿ ಅಪ್ಲಿಕೇಶನ್‌ಗಳನ್ನು ವಿತರಿಸಲು ಮತ್ತು ಸ್ಥಾಪಿಸಲು ಬಳಸುವ ಅಪ್ಲಿಕೇಶನ್ ಫೈಲ್ ಫಾರ್ಮ್ಯಾಟ್ ಆಗಿದೆ.
ಎಸ್ ಬಿ ಐ ಯು ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಲಿಂಕ್‌ಗಳನ್ನು ಎಂದಿಗೂ ಒದಗಿಸುವುದಿಲ್ಲ ಎಂದು ಬ್ಯಾಂಕ್ ಹೇಳಿಕೊಂಡಿದೆ.

ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಎಸ್‌ಬಿಐ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಲು ವಂಚಕರು ಎಪಿಕೆ ಮತ್ತು ಎಸ್ ಎಂಎಸ್ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಬ್ಯಾಂಕ್ ಹೇಳಿದೆ.

ಎಸ್ ಬಿಐ ಮಾಡಿರುವ ಪೋಸ್ಟ್ ಪ್ರಕಾರ ಎಸ್‌ಬಿಐ ಎಂದಿಗೂ ಲಿಂಕ್‌ಗಳು ಅಥವಾ ಅಪೇಕ್ಷಿಸದ ಎಪಿಕೆ ಗಳನ್ನು ಎಸ್ ಎಂಎಸ್ ಅಥವಾ ವಾಟ್ಸ್ ಆಪ್ ಮೂಲಕ ಒದಗಿಸುವುದಿಲ್ಲ. ಅಂತಹ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ಪರಿಚಯವಿಲ್ಲದ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ ಎಂದು ಎಸ್‌ಬಿಐ ತನ್ನ ಗ್ರಾಹಕರಿಗೆ ಹೇಳಿದೆ.


ಎಸ್ ಬಿ ಐ ಪಾಯಿಂಟ್‌ ಚೆಕ್ ಮಾಡುವುದು ಹೇಗೆ?

ಎಸ್ ಬಿ ಐ ಮಾಹಿತಿ ಪ್ರಕಾರ, ಬಳಕೆದಾರರು ಸ್ವಯಂಚಾಲಿತವಾಗಿ ಎಸ್ ಬಿ ಐ ರಿವಾರ್ಡ್ಜ್ ಪ್ರೋಗ್ರಾಂಗೆ ದಾಖಲಾಗುತ್ತಾರೆ. ನೀವು https://www.rewardz.sbi/ ನಲ್ಲಿ ನಿಮ್ಮ ಎಸ್ ಬಿಐ ಪಾಯಿಂಟ್‌ಗಳನ್ನು ರಿಡೀಮ್ ಮಾಡಬಹುದು. ಪೋರ್ಟಲ್ ಅನ್ನು ಬಳಸಲು, ನೀವು ಮೊದಲು ನೋಂದಾಯಿಸಿಕೊಳ್ಳಬೇಕು.

ಇದನ್ನೂ ಓದಿ: RBI Dividend: ಆರ್‌ಬಿಐನಿಂದ ಕೇಂದ್ರಕ್ಕೆ 2.11 ಲಕ್ಷ ಕೋಟಿ ರೂ.‌ ಡಿವಿಡೆಂಡ್! ಮುಂದಿನ ಸರ್ಕಾರಕ್ಕೆ ವರ!

https://www.rewardz.sbi ಗೆ ಹೋಗಿ ಮತ್ತು “ಹೊಸ ಬಳಕೆದಾರ” ಆಯ್ಕೆಯನ್ನು ಆರಿಸಿ. ಅನಂತರ SBI Rewardz ಗ್ರಾಹಕ ID ಅನ್ನು ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀಡಲಾದ ಒನ್-ಟೈಮ್ ಪಾಸ್‌ವರ್ಡ್ (OTP) ಅನ್ನು ನಮೂದಿಸಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸಿ ಮತ್ತು ರಿಡೀಮ್ ಮಾಡಲು ಪ್ರಾರಂಭಿಸಿ.

ಪಾಯಿಂಟ್ ಯಾವುದರಿಂದ ಸಿಗುವುದು?

ಎಸ್ ಬಿ ಐ ಯು ತನ್ನ ಗ್ರಾಹಕರಿಗೆ ಸರಕುಗಳು, ಚಲನಚಿತ್ರ ಟಿಕೆಟ್‌ಗಳು, ಮೊಬೈಲ್/ ಡಿಟಿ ಹೆಚ್ ರೀಚಾರ್ಜ್, ಏರ್‌ಲೈನ್ ಟಿಕೆಟ್‌ಗಳು, ಹೊಟೇಲ್ ಕಾಯ್ದಿರಿಸುವಿಕೆಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳು ಮತ್ತು ಸೇವೆಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತದೆ.

Exit mobile version