ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆಯ ಕೊನೆಯ ಅಥವಾ ಅಂತಿಮ ಹಂತದ ಮತದಾನ (Gujarat Election) ಸೋಮವಾರ (ಡಿಸೆಂಬರ್ ೧) ನಡೆಯಲಿದ್ದು, ಅಹಮದಾಬಾದ್, ವಡೋದರಾ, ಗಾಂಧಿನಗರ ಸೇರಿ ೧೪ ಜಿಲ್ಲೆಗಳಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಎರಡನೇ ಹಂತದಲ್ಲಿ ೯೩ ಕ್ಷೇತ್ರಗಳಲ್ಲಿ ಬೆಳಗ್ಗೆ ೮ ಗಂಟೆಯಿಂದ ಸಂಜೆ ೫ರವರೆಗೆ ಮತದಾನ ನಡೆಯಲಿದೆ.
ಕಣದಲ್ಲಿರುವ ಪ್ರಮುಖರು ಯಾರು?
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿ ಹಲವು ಪ್ರಮುಖರ ಭವಿಷ್ಯವು ಸೋಮವಾರ ನಿರ್ಧಾರವಾಗಲಿದೆ. ಭೂಪೇಂದ್ರ ಪಟೇಲ್ ಅವರು ಅಹಮದಾಬಾದ್ ಜಿಲ್ಲೆಯ ಘಾಟ್ಲೋಡಿಯಾ, ವೀರಂಗಮ್ ಕ್ಷೇತ್ರದಲ್ಲಿ ಬಿಜೆಪಿಯ ಹಾರ್ದಿಕ್ ಪಟೇಲ್, ವಡ್ಗಾಮ್‌ನಲ್ಲಿ ಕಾಂಗ್ರೆಸ್‌ನಿಂದ ದಲಿತ ನಾಯಕ ಜಿಗ್ನೇಶ್ ಮೇವಾನಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸುಕ್ರಮ್ ರತ್ವಾ ಅವರು ಜೆಟ್ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಹಾಗಾಗಿ, ಎರಡನೇ ಹಂತದ ಮತದಾನವು ಕುತೂಹಲ ಮೂಡಿಸಿದೆ. ಮೊದಲ ಹಂತದಲ್ಲಿ ಶೇ.೬೩ರಷ್ಟು ಮತದಾನ ದಾಖಲಾಗಿತ್ತು.
೮೩೩ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಎರಡನೇ ಹಂತದಲ್ಲಿ ೬೧ ರಾಜಕೀಯ ಪಕ್ಷಗಳ ೮೩೩ ಅಭ್ಯರ್ಥಿಗಳ ಭವಿಷ್ಯ ತೀರ್ಮಾನವಾಗಲಿದೆ. ಪುರುಷರು ಹಾಗೂ ಮಹಿಳೆಯರು ಸೇರಿ ಒಟ್ಟು ೨.೫೧ ಕೋಟಿ ಜನ ಮತ ಚಲಾಯಿಸಲಿದ್ದಾರೆ. ಚುನಾವಣೆ ಆಯೋಗವು ೧೪,೯೭೫ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ೧.೧೩ ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಗುಜರಾತ್‌ನಲ್ಲಿ ೧೯೯೫ರಿಂದಲೂ ಬಿಜೆಪಿಯೇ ಅಧಿಕಾರದಲ್ಲಿದ್ದು, ದಾಖಲೆಯ ಸತತ ಏಳನೇ ಬಾರಿ ಗದ್ದುಗೆ ಏರಲು ಸಿದ್ಧವಾಗಿದೆ. ಅತ್ತ, ರಾಜ್ಯದಲ್ಲಿ ಅಧಿಕಾರದ ಬರ ಎದುರಿಸುತ್ತಿರುವ ಕಾಂಗ್ರೆಸ್ ಗೆಲುವಿಗೆ ಹವಣಿಸುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆಯೇ ಗುಜರಾತ್‌ನಲ್ಲಿ ನೆಲೆಯೂರಲು ಇನ್ನಿಲ್ಲದ ಪ್ರಯತ್ನ ನಡೆಸಿದೆ.
ಇದನ್ನೂ ಓದಿ | Gujarat Election | ಗುಜರಾತ್‌ನಲ್ಲಿ ಕಳೆದ ಬಾರಿಗಿಂತ ಈ ಬಾರಿ ಮೊದಲ ಹಂತದಲ್ಲಿ 5% ಮತದಾನ ಕುಸಿತ, ಕಾರಣಗಳೇನು?