ಲಖನೌ: ಶುಕ್ರವಾರದ ಪ್ರಾರ್ಥನೆಗಳ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಲಖನೌದಲ್ಲಿ ಕೂಡ ಸೆಕ್ಷನ್ ಜುಲೈ 10ರಂದು ಸೆಕ್ಷನ್ 144 ವಿಧಿಸಲಾಗಿದೆ.
ಪ್ರವಾದಿ ಕುರಿತ ನೂಪುರ್ ಶರ್ಮಾ ಅವರ ಟೀಕೆಯ ಹಿನ್ನೆಲೆಯಲ್ಲಿ ಕಾನ್ಪುರದಲ್ಲಿ ಭುಗಿಲೆದ್ದ ಘರ್ಷಣೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮುಸ್ಲಿಮರ ಶುಕ್ರವಾರದ ಪ್ರಾರ್ಥನೆಗೆ ಮುಂಚಿತವಾಗಿ ಉತ್ತರ ಪ್ರದೇಶ ರಾಜ್ಯಾದ್ಯಂತ ಜಾಗರೂಕತೆ ಹೆಚ್ಚಿಸಲಾಗಿದೆ.
ಜುಲೈ 31ರವರೆಗೆ ಕಾನ್ಪುರದಲ್ಲಿ ಈಗಾಗಲೇ ಸೆಕ್ಷನ್ 144 ಜಾರಿಯಲ್ಲಿದೆ. ಈಗ ಲಖನೌದಲ್ಲಿ ಕೂಡ ಜುಲೈ 10ರವರೆಗೆ ವಿಧಿಸಲಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿ ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಆತ್ಮಹತ್ಯಾ ದಾಳಿಗಳನ್ನು ನಡೆಸಲಾಗುವುದು ಎಂದು ಭಯೋತ್ಪಾದಕ ಸಂಘಟನೆ ಅಲ್ ಕೈದಾ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿಯೂ ಈ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಎರಡೂ ಕಡೆಗಳ ಧಾರ್ಮಿಕ ಮುಖಂಡರನ್ನು ಸಂಯಮಪೂರ್ವಕವಾಗಿ ವರ್ತಿಸುವಂತೆ ಮನವಿ ಮಾಡಲಾಗಿದ್ದು, ಯಾವುದೇ ವಿಧದ ಗುಂಪು ಸೇರುವಿಕೆ ನಿಷೇಧಿಸಲಾಗಿದೆ.
ಇದನ್ನೂ ಓದಿ: ಯೋಗಿ ಸೆಕೆಂಡ್ ಇನಿಂಗ್ಸ್| 100 ದಿನದಲ್ಲಿ 525 ಎನ್‌ಕೌಂಟರ್, 1034 ಮಂದಿ ಅರೆಸ್ಟ್, ಐವರು ಬಲಿ