ನವದೆಹಲಿ: ಜಗತ್ತಿನಾದ್ಯಂತ ಆ್ಯಂಡ್ರಾಯ್ಡ್ ಡಿವೈಸ್‌ಗಳ ಪ್ರಮುಖ ಭದ್ರತಾ ಮಾಹಿತಿ ಸೋರಿಕೆಯಾಗಿದ್ದು, (Major Security Leak) ಸ್ಯಾಮ್‌ಸಂಗ್ ಸೇರಿ ಹಲವು ಕಂಪನಿಗಳ ಮೊಬೈಲ್ ಬಳಕೆದಾರರಿಗೆ ಸಂಕಷ್ಟ ಎದುರಾಗಿದೆ ಎಂದು ತಿಳಿದುಬಂದಿದೆ.
ಸ್ಯಾಮ್‌ಸಂಗ್, ಎಲ್‌ಜಿ ಸೇರಿ ವಿವಿಧ ಕಂಪನಿಗಳ ಸೆಕ್ಯುರಿಟಿ ಲೀಕ್ ಆಗಿದ್ದು, ಪ್ರಮಾಣಪತ್ರಗಳು ಹ್ಯಾಕರ್‌ಗಳ ಪಾಲಾಗಿರುವ ಸಾಧ್ಯತೆ ಇದೆ. ಕಂಪನಿಗಳಲ್ಲಿರುವ ಉದ್ಯೋಗಿಗಳಿಂದ ಮಾಹಿತಿ ಸೋರಿಕೆಯಾಗಿದೆಯೋ ಅಥವಾ ಹ್ಯಾಕರ್‌ಗಳ ಕೈಚಳಕದಿಂದ ಹೀಗಾಗಿದೆಯೋ ಎಂಬುದರ ಮಾಹಿತಿ ಲಭ್ಯವಾಗಿಲ್ಲ.
ಲಕ್ಷಾಂತರ ಡಿವೈಸ್‌ಗಳ ಮಾಹಿತಿ ಲೀಕ್ ಆಗಿರುವುದರಿಂದ ಹ್ಯಾಕರ್‌ಗಳು ಬಳಕೆದಾರರ ಮೊಬೈಲ್‌ಗಳನ್ನು ಹ್ಯಾಕ್ ಮಾಡಬಹುದು ಇಲ್ಲವೇ ಇಡೀ ಮೊಬೈಲ್‌ನ ಮಾಹಿತಿ ಕದಿಯಬಹುದು. ಹಾಗೆಯೇ, ನಕಲಿ ಆ್ಯಪ್‌ಗಳನ್ನು ಸೃಷ್ಟಿಸಿ ಮೊಬೈಲ್ ಬಳಕೆದಾರರ ಹಣ ವಂಚಿಸಬಹುದು ಎಂದು ಎಚ್ಚರಿಸಲಾಗಿದೆ.
ಇದರ ಕುರಿತು ತನಿಖೆ ನಡೆಯುತ್ತಿದ್ದು, ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಮೊಬೈಲ್‌ಗಳಿಗೆ ಮಾಲ್ವೇರ್ ದಾಳಿ ಮಾಡುವ ಸಾಧ್ಯತೆ ಹೆಚ್ಚಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Social Media ಬಳಕೆಗೆ ಇಲ್ಲಿವೆ ಸೈಬರ್ ಸುರಕ್ಷತೆ ಸಲಹೆಗಳು