Site icon Vistara News

Stock Market: ಏರುಗತಿಯಲ್ಲಿದ್ದ ಭಾರತೀಯ ಷೇರುಪೇಟೆ ದಿಢೀರ್ ಕುಸಿತ! ಕಾರಣವೇನು?

Stock Market, Sensex recorded one month low at 1000 points

ಮುಂಬೈ: ಡಿಸೆಂಬರ್ ತಿಂಗಳಲ್ಲಿ ದಾಖಲೆಯ ಏರಿಕೆಯನ್ನು ಕಂಡಿದ್ದ ಭಾರತೀಯ ಷೇರುಪೇಟೆ (Indian Stock Market) ಬುಧವಾರ ದಿಢೀರ್ ಕುಸಿತವನ್ನು ದಾಖಲಿಸಿದೆ. ಸೆನ್ಸೆಕ್ಸ್ (Sensex) ಬುಧವಾರ 900 ಪಾಯಿಂಟ್ಸ್ ಕುಸಿತವನ್ನು ದಾಖಲಿಸಿತು. ಟಿಸಿಎಸ್ (TCS) ಮತ್ತು ಹಿಂದೂಸ್ತಾನ್ ಯುನಿಲಿವರ್ (Hindustan Unilever) ಸೇರಿದಂತೆ ಪ್ರಮುಖ ಷೇರುಗಳು ಭಾರೀ ಕುಸಿದ ಪರಿಣಾಮವೇ ಷೇರು ಪೇಟೆ ಕೂಡ ಋಣಾತ್ಮಕವಾಗಿ ತನ್ನ ವ್ಯವಹಾರವನ್ನು ಮುಗಿಸಿದೆ. ನಿಫ್ಟಿ (NSE Nifty) ಕೂಡ ಋಣಾತ್ಮಕವಾಗಿ ತನ್ನ ವ್ಯವಹಾರವನ್ನು ಮುಗಿಸಿದೆ.

ಸೆನ್ಸೆಕ್ಸ್ ಮಾತ್ರವಲ್ಲದೇ ಎನ್ಎಸ್ಇ ನಿಫ್ಟಿ ಕೂಡ 21000ಕ್ಕಿಂತ ಕೆಳಗೆ ಇಳಿಯಿತು. ನಿಫ್ಟಿ ಕೂಡ ಈ ಹಿಂದೆ ದಾಖಲೆಯನ್ನು ಏರಿಕೆ ಕಂಡಿತ್ತು. ಐತಿಹಾಸಿಕ ದಾಖಲೆಯನ್ನು ಮಾಡಿದ ಎರಡು ವಾರದ ಬಳಿಕ ಸೆನ್ಸೆಕ್ಸ್ ಮತ್ತು ನಿಫ್ಟಿಗಳೆರಡೂ ಪಾತಾಳ ಕಂಡಿವೆ.

ಬ್ಯಾಂಕ್, ಲೋಹ, ಆಟೋ ಕಂಪನಿಗಳ ಷೇರುಗಳು ಬುಧವಾರ ಉತ್ತಮ ಪ್ರದರ್ಶನ ತೋರಲಿಲ್ಲ. ಬುಧವಾರದ ಪೂರ್ತಿ ವ್ಯವಹಾರದಲ್ಲಿ ಈ ವಲಯದ ಷೇರುಗಳು ಋಣಾತ್ಮಕವಾಗಿಯೇ ಸಾಗಿದವು. ಹಾಗೆಯೇ, ಎಚ್‌ಡಿಎಫ್‌ಸಿ ಹೊರತುಪಡಿಸಿ ಪ್ರಮುಖ ಐಟಿ ಹಾಗೂ ಬ್ಯಾಂಕ್ ಷೇರುಗಳು ಕೂಡ ಕುಸಿತವನ್ನು ದಾಖಲಿಸಿದ ಪರಿಣಾಮ, ಷೇರುಪೇಟೆಯು ವ್ಯವಹಾರವನ್ನು ಋಣಾತ್ಮಕವಾಗಿ ಮುಗಿಸಿತು.

ಮತ್ತೊಂದೆಡೆ, ಕೋವಿಡ್ ಕೇಸುಗಳ ಹೆಚ್ಚುತ್ತಿರುವುದು ಕೂಡ ಷೇರು ಪೇಟೆ ಕುಸಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತದೆ. 2020ರ ಲಾಕ್‌ಡೌನ್ ಬಳಿಕ ಷೇರುಪೇಟೆಗೆ ಕೋವಿಡ್ ಮತ್ತೊಮ್ಮೆ ಬೆದರಿಕೆಯನ್ನೊಡ್ಡಿದೆ. ಕೋವಿಡ್‌ ಹೊಸ ರೂಪಾಂತರ ಜೆಎನ್.1 ನಿಂದಾಗಿ ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು(ಎಫ್ಐಐಎಸ್) ಹೂಡಿಕೆಯಲ್ಲಿ ಇಳಿಕೆ ಕೂಡ ಸೆನ್ಸೆಕ್ಸ್ ಕುಸಿತಕ್ಕೆ ಕಾರಣವಾಗಿದೆ. ಷೇರು ಪೇಟೆ ದಿನದ ವ್ಯವಹಾರದಲ್ಲಿ ಬಹಳಷ್ಟು ವಿದೇಶಿ ಸಾಂಸ್ಥಿಕೆ ಹೂಡಿಕೆದಾರರು ತಮ್ಮ ಬಂಡವಾಳವನ್ನು ವಾಪಸ್ ಪಡೆದುಕೊಂಡಿದ್ದಾರೆ. ಸುಮಾರು 601 ಕೋಟಿ ರೂ. ಮೊತ್ತದ ಷೇರುಗಳನ್ನು ಮಾರಾಟ ಮಾಡಲಾಗಿದೆ. ಈ ಮಧ್ಯೆ, ದೇಶಿ ಸಾಂಸ್ಥಿಕ ಹೂಡಿಕೆದಾರರು ಕೇವಲ 294 ಕೋಟಿ ರೂ. ಷೇರುಗಳನ್ನು ಮಾತ್ರ ಖರೀದಿಸಿದ್ದಾರೆ. ಹೀಗಾಗಿ, ಭಾರತೀಯ ಷೇರು ಮಾರುಕಟ್ಟೆ ಬುಧವಾಣ ಭಾರೀ ತಲ್ಲಣ ಕಂಡಿದೆ.

ಈ ಸುದ್ದಿಯನ್ನೂ ಓದಿ: Repo Rate: ರೆಪೋ ರೇಟ್‌ನಲ್ಲಿ ಬದಲಾವಣೆ ಇಲ್ಲ! ದಾಖಲೆ ಏರಿಕೆ ಕಂಡ ಷೇರುಪೇಟೆ

Exit mobile version