Site icon Vistara News

Advance Tax: ಮುಂಗಡ ತೆರಿಗೆಯ ಎರಡನೇ ಕಂತಿನ ಪಾವತಿಗೆ ಸೆ.15 ಕೊನೆ ದಿನ!

advance tax payment

ನವದೆಹಲಿ: 2024-25 ಸಾಲಿನ (assessment year ) ಮುಂಗಡ ತೆರಿಗೆಯ (Advance Tax) ಎರಡನೇ ಕಂತಿನ ಗಡುವು ಸೆ.15, ಶುಕ್ರವಾರ ಅಂತ್ಯಗೊಳ್ಳಲಿದೆ. ಈ ವರ್ಷಕ್ಕೆ ಅಂದಾಜು ತೆರಿಗೆಯು 10,000 ರೂ. ಅಥವಾ ಅದಕ್ಕಿಂತ ಹೆಚ್ಚು ತೆರಿಗೆ ಇರುವವರು ಮುಂಗಡ ತೆರಿಗೆಯನ್ನು ಪಾವತಿಸಬೇಕಾಗುತ್ತದೆ(Taxpayer).

ಮುಂಗಡ ತೆರಿಗೆ ಎಂದರೆ ವರ್ಷಾಂತ್ಯಕ್ಕಿಂತ ಮುಂಚಿತವಾಗಿ ಪಾವತಿಸುವ ಆದಾಯ ತೆರಿಗೆಯ ಮೊತ್ತವಾಗಿರುತ್ತದೆ. 1961ರ ಆದಾಯ ತೆರಿಗೆ ಕಾಯ್ದೆಯ 208ನೇ ಸೆಕ್ಷನ್ ಪ್ರಕಾರ, ವರ್ಷಕ್ಕೆ ಅಂದಾಜು ತೆರಿಗೆ ಹೊಣೆಗಾರಿಕೆಯು10,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಇರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ತೆರಿಗೆಯನ್ನು ಮುಂಗಡವಾಗಿ ‘ಮುಂಗಡ ತೆರಿಗೆ’ ರೂಪದಲ್ಲಿ ಪಾವತಿಸಬೇಕಾಗುತ್ತದೆ.

ಇದನ್ನೇ ಬೇರೆಯ ರೀತಿಯಲ್ಲಿ ಹೇಳುವುದಾದರೆ, ತೆರಿಗೆದಾರರ ಅಂದಾಜು ತೆರಿಗೆಯು 10,000 ರೂ. ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ, ಅವರು ವಿವಿಧ ಕಂತುಗಳಲ್ಲಿ ಪಾವತಿಸಲು ಮುಂಗಡ ತೆರಿಗೆಯ ರೂಪದಲ್ಲಿ ತೆರಿಗೆ ಹೊಣೆಗಾರಿಕೆಯನ್ನು ಬಿಡುಗಡೆ ಮಾಡಬೇಕಾಗುತ್ತದೆ. ಸಂಬಳದ ಉದ್ಯೋಗಿಗಳು, ಸ್ವಯಂ ಉದ್ಯೋಗಿಗಳು, ವ್ಯವಹಾರಗಳು, ಟ್ರಸ್ಟ್‌ಗಳು ಮತ್ತು ಪಾಲುದಾರಿಕೆಗಳು ಸಂಸ್ಥೆಗಳು ಮುಂಗಡ ತೆರಿಗೆಯನ್ನು ಪಾವತಿಸಬೇಕಾದವರಾಗಿರುತ್ತಾರೆ.

ಈ ಸುದ್ದಿಯನ್ನೂ ಓದಿ: Self-assessment taxes : ಮುಂಗಡ ತೆರಿಗೆ ಪಾವತಿಸುವುದು ಹೇಗೆ, ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ವರ್ಷದಲ್ಲಿ ನಾಲ್ಕು ಕಂತಗಳಲ್ಲಿ ಮುಂಗಡ ತೆರಿಗೆಯನ್ನು ಪಾವತಿಸಬೇಕಾದ ಅಗತ್ಯವಿರುತ್ತದೆ. ಮೊದಲ ಕಂತಿನಲ್ಲಿ, ಜೂನ್ 15ಕ್ಕಿಂತ ಮೊದಲು ಮುಂಗಡ ತೆರಿಗೆಯ ಶೇ.15ರಷ್ಟು ಪಾವತಿಸಬೇಕಾಗುತ್ತದೆ. ಎರಡನೇ ಕಂತಿನಲ್ಲಿ, ಈಗಾಗಲೇ ಪಾವತಿ ಮಾಡಿರುವ ಮುಂಗಡ ತೆರಿಗೆಯ ಪೈಕಿ ಕಡಿಮೆ ಅಂದರೆ ಶೇ.45ರಷ್ಟು ತೆರಿಗೆಯನ್ನು ಸೆಪ್ಟೆಂಬರ್ 15ಕ್ಕಿಂತ ಮುಂಚೆ ನೀಡಬೇಕು. ಮೂರನೇ ಕಂತಿನಲ್ಲಿ, ಶೇ.75ರಷ್ಟು ತೆರಿಗೆಯನ್ನು ಡಿಸೆಂಬರ್ 15ಕ್ಕಿಂತ ಮುಂಚೆ ಪಾವತಿಸಬೇಕಾಗುತ್ತದೆ. ನಾಲ್ಕನೆಯ ಅಥವಾ ಕೊನೆಯ ಕಂತಿನಲ್ಲಿ ಉಳಿದ ಪೂರ್ತಿ ಮುಂಗಡ ತೆರಿಗೆಯನ್ನು ಮಾರ್ಚ್ 15ಕ್ಕಿಂತ ಮುಂಚೆ ತೆರಿಗೆದಾರರು ನೀಡಬೇಕಾಗುತ್ತದೆ.

ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version