Site icon Vistara News

Anantnag Encounter: ಲಷ್ಕರೆ ಉಗ್ರನ ಹತ್ಯೆಯೊಂದಿಗೆ ಅಂತ್ಯವಾದ 7 ದಿನಗಳ ಅನಂತನಾಗ್ ಎನ್‌ಕೌಂಟರ್!

Anantnag Encounter

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅನಂತನಾಗ್ ಜಿಲ್ಲೆಯ (Anantnag Encounter) ಗಡೋಲ್ ಅರಣ್ಯದಲ್ಲಿ (Gadol Forest) ನಡೆದ ಸುದೀರ್ಘ ಉಗ್ರರ ವಿರುದ್ಧದ ಕಾರ್ಯಾಚರಣೆಯು (anti-terror operation) ಸ್ಥಳೀಯ ಲಷ್ಕರ್ ಭಯೋತ್ಪಾದಕನನ್ನು ಕೊಲ್ಲುವುದರೊಂದಿಗೆ ಕೊನೆಗೊಂಡಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು (J and K Police) ತಿಳಿಸಿದ್ದಾರೆ. ಮತ್ತೊಬ್ಬ ಉಗ್ರನ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರ. ಒಂದು ವಾರಗಳ ಕಾಲ ನಡೆದ ಈ ಗುಂಡಿನ ಚಕಮಕಿಯಲ್ಲಿ ನೂರಾರು ಮಾರ್ಟರ್ ಶೆಲ್‌ಗಳು, ರಾಕೆಟ್‌ಗಳು ದಾಳಿಯಿಂದ ಅರಣ್ಯ ನಲುಗಿ ಹೋಗಿದೆ. ಈಗ ಅರಣ್ಯದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.

ಅನಂತನಾಗ್ ಗುಂಡಿನ ಚಕಮಕಿ ವೇಳೆ ಉಗ್ರರ ಗುಂಡಿಗೆ ಸೇನೆಯ ಕರ್ನಲ್ ಮನಪ್ರೀತ್ ಸಿಂಗ್, ಮೇಜರ್ ಆಶೀಷ್ ಮತ್ತು ಜಮ್ಮು-ಕಾಶ್ಮೀರ ಪೊಲೀಸ್‌ನ ಡಿವೈಎಸ್‌ಪಿ ಹುಮಾಯೂನ್ ಭಟ್ ಅವರು ಹುತಾತ್ಮರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಈ ಗುಂಡಿನ ಚಕಮಕಿ ಅತಿ ದೀರ್ಘವಾದ ಎನ್‌ಕೌಂಟರ್ ಎಂದು ಹೇಳಲಾಗುತ್ತಿದೆ.

ಕನಿಷ್ಠ ಮೂವರು ಲಷ್ಕರ್ ಭಯೋತ್ಪಾದಕರ ಅಡಗಿಕೊಂಡಿರುವ ನಿಖರ ಮಾಹಿತಿಯ ನಂತರ ಸೇನೆ ಮತ್ತು ಪೊಲೀಸರು ಗಡೋಲ್ ಅರಣ್ಯದಲ್ಲಿ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಬುಧವಾರದಿಂದ ಉಗ್ರರ ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಕಾಳಗ ಶುರುವಾಗಿತ್ತು.

ಗುಂಡಿನ ಕಾಳಗ ನಡೆದ ಸ್ಥಳದಲ್ಲಿ ಗುರುತಿಸಲು ಸಾಧ್ಯವಾಗದಷ್ಟು ಸುಟ್ಟು ಕರಕಲವಾದ ದೇಹವೊಂದು ಭಾನುವಾರ ದೊರೆತಿತ್ತು. ಈ ಶವವನ್ನು ವೈದ್ಯಕೀಯ-ಕಾನೂನು ಪ್ರಕ್ರಿಯೆಗಾಗಿ ಕಳುಹಿಸಲಾಗಿದೆ. ಸುಟ್ಟು ಕರಕಲಾದ ವ್ಯಕ್ತಿ ಸ್ಥಳೀಕ ಉಝೈರ್ ಖಾನ್ ಎಂದು ಗುರುತಿಸಲಾಗಿದೆ. ಆತ ಲಷ್ಕರ್ ಭಯೋತ್ಪಾದಕ. ಒಂದು ವರ್ಷದ ಹಿಂದೆ ಆತ ಉಗ್ರರ ಗುಂಪಿಗೆ ಸೇರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Anantnag Encounter: ಕಾಶ್ಮೀರದಲ್ಲಿ ನಕ್ಸಲ್ ನಿಗ್ರಹ ರೀತಿಯ ಆಪರೇಷನ್? ಮೊದಲ ಬಾರಿಗೆ CoBRA ನಿಯೋಜನೆ

ಎಲ್‌ಇಟಿ ಕಮಾಂಡರ್ ಉಝೈರ್‌ನನ್ನು ಕೊಲ್ಲಲಾಗಿದೆ. ಆತನ ದೇಹ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾವು ಇನ್ನೊಬ್ಬ ಭಯೋತ್ಪಾದಕನ ದೇಹವನ್ನು ಗುರುತಿಸಿದ್ದೇವೆ. ಶೋಧ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಜಮ್ಮು ಮತ್ತಾ ಕಾಶ್ಮೀರದ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ ವಿಜಯ್ ಕುಮಾರ್ ಅವರು ತಿಳಿಸಿದ್ದಾರೆ. ಗುಂಡಿನ ಕಾಳಗ ನಡೆದ ಸ್ಥಳಕ್ಕೆ ಹೋಗದಂತೆ ಜನರಿಗೆ ಸೂಚಿಸಿದ್ದಾರೆ. ಈಗಲೂ ಸ್ಥಳದಲ್ಲಿ ಸ್ಫೋಟವಾಗದ ಸಾಕಷ್ಟು ಶೆಲ್‌ಗಳು ಎಂದು ಎಚ್ಚರಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version