Site icon Vistara News

Mumbai Hit And Run: ಮುಂಬೈನಲ್ಲಿ ಹಿಟ್‌ ಆ್ಯಂಡ್‌ ರನ್‌ಗೆ ಮಹಿಳೆ ಬಲಿ; ಶಿವಸೇನೆ ನಾಯಕನ ಬಂಧನ!

Mumbai Hit And Run

Shinde Sena leader detained after son's BMW rams couple on bike in Mumbai, killing woman

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ ನಡೆದ ಹಿಟ್‌ ಆ್ಯಂಡ್‌ ರನ್‌ (Mumbai Hit And Run) ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ (ಏಕನಾಥ್‌ ಶಿಂಧೆ ಬಣ) ನಾಯಕ ರಾಜೇಶ್‌ ಶಾ (Rajesh Shah) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ ವೊರ್ಲಿಯಲ್ಲಿ ರಾಜೇಶ್‌ ಶಾ (Rajesh Shah) ಅವರ ಪುತ್ರ ಮಿಹಿರ್‌ ಶಾ (Mihir Shah) ಕುಡಿದು ವಾಹನ ಚಲಾಸುವಾಗ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು, ಮಹಿಳೆ ಮೃತಪಟ್ಟಿದ್ದಾರೆ. ಆಕೆಯ ಪತಿಯು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ 24 ವರ್ಷದ ಮಿಹಿರ್‌ ಶಾ ಪರಾರಿಯಾಗಿದ್ದು, ಈಗ ಪೊಲೀಸರು ಅವರ ತಂದೆಯನ್ನು ವಶಪಡಿಸಿಕೊಂಡಿದ್ದಾರೆ.

ಶಿವಸೇನೆ ನಾಯಕ ನಾಯಕ ರಾಜೇಶ್‌ ಶಾ ಅವರನ್ನು ಪಾಲ್ಘರ್‌ ಜಿಲ್ಲೆಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರು ರಾಜೇಶ್‌ ಶಾ ಅವರ ಹೆಸರಿನಲ್ಲಿ ನೋಂದಣಿಯಾಗಿರುವ ಕಾರಣ ಅವರನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಕಾರು ಚಾಲಕ ರಾಜಋಷಿ ಬಿದಾವತ್‌ ಎಂಬುವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾವೇರಿ ನಖ್ವಾ ಮತ್ತು ಪ್ರದೀಕ್‌ ನಖ್ವಾ ಎಂಬ ದಂಪತಿ ಹೋಗುತ್ತಿದ್ದ ಬೈಕ್‌ಗೆ BMW ಕಾರು ಡಿಕ್ಕಿ ಹೊಡೆದಿದ್ದು, ಕೂಡಲೇ ಮಿಹಿರ್‌ ಶಾ ಎಸ್ಕೇಪ್‌ ಆಗಿದ್ದಾನೆ. ಬೆಳಗ್ಗೆ 5:30ರ ಸಮಯದಲ್ಲಿ ದಂಪತಿ ಸಾಸಾನ್‌ ಡಾಕ್‌ ಮಾರುಕಟ್ಟೆಯಿಂದ ಮೀನು ಖರೀದಿಸಿ ವಾಪಾಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನು ದಂಪತಿ ಪ್ರದೀಕ್‌ ನಖ್ವಾ ಮಾರುಕಟ್ಟೆಯಲ್ಲಿ ಮೀನಿನ ವ್ಯಾಪಾರಿಯಾಗಿದ್ದಾರೆ. ಕಾರು ಡಿಕ್ಕಿಯಗುತ್ತಿದ್ದಂತೆ ರಸ್ತೆಗೆ ಬಿದ್ದಿದ್ದ ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು. ಕಾವೇರಿ ಮತ್ತು ಪ್ರದೀಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಾವೇರಿ ಕೊನೆಯುಸಿರೆಳೆದಿದ್ದಾರೆ.

ಘಟನೆ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಮಿಹಿರ್‌ ಶಾ ನಾಪತ್ತೆಯಾಗಿದ್ದಾನೆ. ಮಿಹಿರ್‌ ಶಾ ತನ್ನ ಫೋನನ್ನೂ ಸ್ವಿಚ್‌ ಆಫ್‌ ಮಾಡಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. ಪೊಲೀಸರ ಪ್ರಕಾರ ಮಿಹಿರ್‌ ಕಳೆದ ರಾತ್ರಿ ಜೂಹೂ ಪ್ರದೇಶದಲ್ಲಿರುವ ಬಾರ್‌ನಲ್ಲಿ ಕಂಠಪೂರ್ತಿ ಕುಡಿದಿದ್ದು. ತನ್ನ ಮನೆಗೆ ಹಿಂದಿರುಗುವ ವೇಳೆ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗುವಂತೆ ಡ್ರೈವರ್‌ಗೆ ಹೇಳಿದ್ದಾನೆ. ವರ್ಲಿಗೆ ತಲುಪುತ್ತಿದ್ದಂತೆ ತಾನು ಕಾರು ಚಲಾಯಿಸುವುದಕ್ಕೆ ಮುಂದಾಗಿದ್ದಾನೆ. ಆಗ ಅತ್ಯಂತ ವೇಗವಾಗಿ ಕಾರು ಚಲಾಯಿಸಿದ ಮಿಹಿರ್, ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಇನ್ನು ಘಟನೆ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾತ್‌ ಶಿಂಧೆ ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ದುರಾದೃಷ್ಟಕರವಾದುದು. ಕಾನೂನಿನ ಎದುರು ಎಲ್ಲರೂ ಸಮಾನ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಪೊಲೀಸರು ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Hit and Run Case: ಶಿವಸೇನೆ ಮುಖಂಡನ ಪುತ್ರನಿಂದ ಡ್ರಂಕ್‌ ಆ್ಯಂಡ್‌ ಡ್ರೈವ್‌; ಸ್ಕೂಟರ್‌ಗೆ BMW ಕಾರು ಡಿಕ್ಕಿ ಹೊಡೆದು ಮಹಿಳೆ ಸಾವು

Exit mobile version