Site icon Vistara News

G20 Summit 2023: ದೆಹಲಿಯಲ್ಲಿ ಕಾರಂಜಿಗಾಗಿ ಶಿವಲಿಂಗ ಬಳಕೆ; ಬಿಜೆಪಿ-ಆಪ್‌ ವಾಕ್ಸಮರ ಶುರು

Shivling fountains at Delhi

Shivling fountains at Delhi's Dhaula Kuan ahead of G20 stir row Between BJP And AAP

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಜಿ-20 ಶೃಂಗಸಭೆಗೆ (G20 Summit 2023) ಕೆಲವೇ ದಿನಗಳು ಬಾಕಿ ಇವೆ. ಭಾರತದ ಅಧ್ಯಕ್ಷತೆಯಲ್ಲಿಯೇ ಸಭೆ ನಡೆಯುತ್ತಿರುವ ಹಾಗೂ ಜಗತ್ತಿನ ಹಲವು ರಾಷ್ಟ್ರಗಳ ನಾಯಕರು ಪಾಲ್ಗೊಳ್ಳುವ ಕಾರಣದಿಂದಾಗಿ ದೆಹಲಿಯನ್ನು ಹಲವು ರೀತಿಯಲ್ಲಿ ಸಿಂಗರಿಸಲಾಗುತ್ತಿದೆ. ಇನ್ನು ಈ ಸಿಂಗಾರ ಸಿರಿ ಈಗ ಬಿಜೆಪಿ ಹಾಗೂ ಆಮ್‌ ಆದ್ಮಿ ಪಕ್ಷದ ಮಧ್ಯೆ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ.

ಹೌದು, ದೆಹಲಿಯ ಧೌಲಾ ಕೌನ್‌ನಲ್ಲಿ (Dhaula Kuan) ಜಿ-20 ಶೃಂಗಸಭೆಯ ಹಿನ್ನೆಲೆಯಲ್ಲಿ ಶಿವಲಿಂಗದ ಆಕಾರದಲ್ಲಿರುವ ಕಾರಂಜಿಗಳನ್ನು ಅಳವಡಿಸಲಾಗಿದೆ. ದೆಹಲಿ ಸರ್ಕಾರವು ಶಿವಲಿಂಗ ಆಕಾರದ ಕಾರಂಜಿಗಳನ್ನು ಅಳವಡಿಸಿದೆ ಎಂದು ಬಿಜೆಪಿ ಆರೋಪಿಸುವ ಜತೆಗೆ ಆಕ್ರೋಶ ವ್ಯಕ್ತಪಡಿಸಿದೆ. “ಶಿವಲಿಂಗವನ್ನು ಸಿಂಗರಿಸಲು ಬಳಸಲಾಗಿದೆ. ಅಷ್ಟಕ್ಕೂ ಧೌಲಾ ಕೌನ್‌ ಜ್ಞಾನವಾಪಿ ಅಲ್ಲ. ಆಪ್‌ ಸರ್ಕಾರ ನಡೆ ಅನುಸರಿಸಿರುವುದು ಸರಿಯಲ್ಲ” ಎಂದು ಬಿಜೆಪಿಯ ಚಾರು ಪ್ರಜ್ಞಾ ಟೀಕಿಸಿದ್ದಾರೆ.

ತಿರುಗೇಟು ನೀಡಿದ ಆಪ್‌

ಬಿಜೆಪಿ ಆರೋಪ ಮಾಡಿದ ಬೆನ್ನಲ್ಲೇ ಆಪ್‌ ತಿರುಗೇಟು ನೀಡಿದೆ. ನರೇಂದ್ರ ಮೋದಿ ನೇತೃತ್ವದಲ್ಲಿಯೇ ಶಿವಲಿಂಗಗಳನ್ನು ಡೆಕೊರೇಷನ್‌ಗೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದೆ. ಆಪ್‌ ಸಂಸದ ಸಂಜಯ್‌ ಸಿಂಗ್‌ ಅವರು ಹಲವು ಫೋಟೊಗಳನ್ನು ಟ್ವೀಟ್‌ ಮಾಡಿದ್ದು, “ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶಿವಲಿಂಗಗಳಿಗೆ ಅವಮಾನ ಮಾಡಲಾಗಿದೆ. ಬಿಜೆಪಿಯು ಇಂತಹ ಫೋಟೊಗಳನ್ನು ನಾಚಿಕೆಯಿಲ್ಲದೆ ಶೇರ್‌ ಮಾಡುತ್ತಿದೆ. ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಶಿವಲಿಂಗಕ್ಕೆ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದಿದ್ದಾರೆ.

ಇದನ್ನೂ ಓದಿ: G20 Summit 2023: ಶೃಂಗಸಭೆಯಲ್ಲಿ ಕಲ್ಚರ್ ಕಾರಿಡಾರ್, ಡಿಜಿಟಲ್ ಮ್ಯೂಸಿಯಂ! ಏನೆಲ್ಲ ಇರಲಿದೆ?

ಜಿ-20ಯು 20 ಪ್ರಮುಖ ಆರ್ಥಿಕ ದೇಶಗಳ ಅಂತಾರಾಷ್ಟ್ರೀಯ ಸಭೆ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಎರಡೂ ಬಗೆಯ ದೇಶಗಳು ಇಲ್ಲಿವೆ. ಭಾರತ, ಆಸ್ಟ್ರೇಲಿಯಾ, ಅರ್ಜೆಂಟೀನಾ, ಬ್ರೆಜಿಲ್,
ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಒಕ್ಕೂಟ ಇದರಲ್ಲಿವೆ. ಈ ದೇಶಗಳ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Exit mobile version