ನವದೆಹಲಿ: ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾ ವಾಳ್ಕರಳನ್ನು (Shraddha Murder Case) ಕೊಂದು, ದೇಹವನ್ನು 35 ಭಾಗ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು, ಮತ್ತೊಬ್ಬ ಯುವತಿ ಜತೆ ಅದೇ ಫ್ಲ್ಯಾಟ್‌ನಲ್ಲಿ ಚಕ್ಕಂದ ಆಡಿದ್ದ ಪಾತಕಿ ಅಫ್ತಾಬ್ ಪೂನಾವಾಲ. ಈ ಸುದ್ದಿ ಹೊರಗೆ ಗೊತ್ತಾದಾಗ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಅಫ್ತಾಬ್ ಜತೆ ಆಗ ಮಂಚ ಹಂಚಿಕೊಂಡ ಯುವತಿ ಯಾರೆಂದು ಗೊತ್ತಾಗಿದ್ದು, ಆಕೆ ವೃತ್ತಿಯಲ್ಲಿ ವೈದ್ಯಳಾಗಿದ್ದಾಳೆ. ಆದರೆ, ಆಕೆಗೆ ಶ್ರದ್ಧಾಳ ಕೊಲೆಯಾಗಲೀ, ಫ್ರಿಡ್ಜ್‌ನಲ್ಲಿ ಆಕೆಯ ದೇಹದ ಭಾಗಗಳು ಇರುವುದಾಗಲಿ ಗೊತ್ತಿರಲಿಲ್ಲ!
ವೃತ್ತಿಯಲ್ಲಿ ವೈದ್ಯಳಾಗಿರುವ ಯುವತಿಯನ್ನು ಪಾತಕಿ ಅಫ್ತಾಬ್ ಬಂಬಲ್ (Bumble) ಡೇಟಿಂಗ್ ಆ್ಯಪ್ ಮೂಲಕ ಸಂಪರ್ಕಿಸಿದ್ದ. ಇನ್‌ಫ್ಯಾಕ್ಟ್, ಕೊಲೆಯಾದ ಶ್ರದ್ಧಾಳನ್ನು ಇದೇ ರೀತಿಯ ಡೇಟಿಂಗ್ ಆ್ಯಪ್ ಮೂಲಕವೇ ಭೇಟಿಯಾಗಿದ್ದ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಪಾತಕಿ ಜತೆಗೆ ಸಂಬಂಧ ಬೆಳೆಸಿದ್ದ ವೈದ್ಯೆ ಬಗ್ಗೆ ಪೊಲೀಸರು ಸತತ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಶ್ರದ್ಧಾ ವಾಳ್ಕರ್ ಕೊಲೆಯ ತನಿಖೆಯ ಭಾಗವಾಗಿ ದಿಲ್ಲಿ ಪೊಲೀಸರು, ಬಂಬಲ್ ಡೇಟಿಂಗ್ ಆ್ಯಪ್ ಸಂಪರ್ಕಿಸಿ, ಆಫ್ತಾಪ್ ಈ ಆ್ಯಪ್‌ನಲ್ಲಿ ಯಾವೆಲ್ಲ ಮಹಿಳೆಯರನ್ನು ಸಂಪರ್ಕಿಸಿದ್ದಾನೆಂಬ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಏತನ್ಮಧ್ಯೆ, ನವೆಂಬರ್ 28ರಂದು ಪಾತಕಿ ಅಫ್ತಾಬ್‌ನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದೇ ವೇಳೆ, ದಿಲ್ಲಿ ನ್ಯಾಯಾಲಯವು ಪಾತಕಿ ಅಫ್ತಾಬ್‌ನನ್ನು ಮತ್ತೆ 13 ದಿನಗಳವರೆಗೆ ಪೊಲೀಸ್ ವಶಕ್ಕೆ ನೀಡಿದೆ. ಆತನನ್ನು ತಿಹಾರ್ ಜೈರಿಗೆ ಸ್ಥಳಾಂತರಿಸಲಾಗುತ್ತಿದ್ದು, ಡಿಸೆಂಬರ್ 8ರವರೆಗೆ ಆತ ಇಲ್ಲಿಯೇ ಇರಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ | Shraddha Murder Case| ತಾನೊಬ್ಬ ಮುಸ್ಲಿಂ ಎಂದು ಹೇಳಿಕೊಂಡು ಅಫ್ತಾಬ್ ಕೃತ್ಯವನ್ನು ಸಮರ್ಥಿಸಿದ್ದ ಹಿಂದು ಯುವಕ ಬಂಧನ