Site icon Vistara News

Shraddha Murder Case | ಮೆಹ್ರೌಲಿ ಅರಣ್ಯದಲ್ಲಿ ಶ್ರದ್ಧಾಳ ತಲೆ ಬುರುಡೆಯ ಭಾಗಗಳು ಪತ್ತೆ!, ಸಿಬಿಐ ತನಿಖೆಗೆ ಮನವಿ

shraddha walker Skull Found

ನವದೆಹಲಿ: ತನ್ನ ಲಿವ್ ಇನ್‌ ಸಂಗಾತಿಯಿಂದಲೇ ಕೊಲೆಯಾದ ಶ್ರದ್ಧಾ ವಾಳ್ಕರ್ (Shraddha Murder Case) ಅವರ ತಲೆ ಬುರುಡೆಯ ಭಾಗಗಳು ದಿಲ್ಲಿಯ ಮೆಹ್ರೌಲಿ ಅರಣ್ಯದಲ್ಲಿ ಪತ್ತೆಯಾಗಿವೆ. ಆರೋಪಿ ಅಫ್ತಾಬ್ ಪೂನಾವಾಲ, ಶ್ರದ್ಧಾಳನ್ನು 35 ಭಾಗಗಳಾಗಿ ಕತ್ತರಿಸಿ ಮೆಹ್ರೌಲಿ ಅರಣ್ಯದಲ್ಲಿ ಎಸೆದಿದ್ದ. ಶ್ರದ್ಧಾಳ ವಿವಿಧ ಭಾಗಗಳು ಪೊಲೀಸ್ ಶೋಧದ ವೇಳೆ ಪತ್ತೆಯಾಗಿದ್ದವು. ಆದರೆ, ಈವರೆಗೂ ತಲೆ ಬುರುಡೆ ಮಾತ್ರ ಸಿಕ್ಕಿರಲಿಲ್ಲ. ಏತನ್ಮಧ್ಯೆ, ಶ್ರದ್ಧಾ ಕೊಲೆ ಪ್ರಕರಣವನ್ನು ದಿಲ್ಲಿ ಪೊಲೀಸ್‌ನಿಂದ ಸಿಬಿಐ ತನಿಖೆಗೆ ವರ್ಗಾಯಿಸಲು ಕೋರಿ ವಕೀಲರೊಬ್ಬರು ದಿಲ್ಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ಜೂನ್ ತಿಂಗಳಲ್ಲಿ ಮುಂಬೈನಿಂದ ಫ್ರಿಡ್ಜ್, ಪಾತ್ರೆಗಳು, ಗೃಹ ಬಳಕೆಯ ವಸ್ತುಗಳು ಮತ್ತು 20 ಸಾವಿರ ಮೌಲ್ಯದ ಬಟ್ಟೆಯನ್ನು ತನ್ನ ದಿಲ್ಲಿ ಅಡ್ರೆಸ್‌ಗೆ ಕೊರಿಯರ್ ಮಾಡಿಕೊಂಡಿದ್ದ ಸಂಗತಿಯೂ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಗುಡ್ ಲಕ್ ಪ್ಯಾಕರ್ಸ್ ಆ್ಯಂಡ್ ಮೂವರ್ಸ್ ಕಂಪನಿಯ ಮಾಲೀಕರನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಮತ್ತೊಂದೆಡೆ, ಶ್ರದ್ಧಾ ವಾಳ್ಕರ್ ಮತ್ತು ಅಫ್ತಾಬ್ ಪೂನಾವಾಲ ಅವರಿದ್ದ ಬಾಡಿಗೆ ಫ್ಲ್ಯಾಟ್‌ ಅನ್ನು ಪೊಲೀಸರು ಶೋಧಿಸಿದ್ದಾರೆ. ಈ ವೇಳೆ, ಎರಡು ಪ್ಲ್ಯಾಸ್ಟಿಕ್ ಬ್ಯಾಗುಗಳು ಪತ್ತೆಯಾಗಿವೆ.

ಶ್ರದ್ಧಾ ವಾಳ್ಕರ್ ಕೊಲೆ ಪ್ರಕರಣವು ಇಡೀ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿದೆ. ತನ್ನ ಲಿವ್ ಇನ್ ಸಂಗಾತಿಯನ್ನು ಅಫ್ತಾಬ್ ಗರಗಸ ಬಳಸಿಕೊಂಡು 35 ಭಾಗಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ. ಕತ್ತರಿಸಿದ ದೇಹದ ಭಾಗಗಳನ್ನು ನಿತ್ಯ ಮಧ್ಯ ರಾತ್ರಿ 2 ಗಂಟೆಗೆ ಪ್ಲ್ಯಾಸ್ಟಿಕ್ ಬ್ಯಾಗಿನಲ್ಲಿ ತುಂಬಿಕೊಂಡು ಆತ ಹತ್ತಿರದ ಮೆಹ್ರೌಲಿ ಅರಣ್ಯದಲ್ಲಿ ಎಸೆಯುತ್ತಿದ್ದ. ಆದರೆ, 18 ದಿನಗಳ ಕಾಲ ದೇಹದ ಭಾಗಗಳನ್ನು ವಿಲೇವಾರಿ ಮಾಡಿದ್ದಾನೆ ಎಂಬ ಮಾಹಿತಿ ಪೊಲೀಸ್ ತನಿಖೆ ವೇಳೆ ಪತ್ತೆಯಾಗಿದೆ.

ಇದನ್ನೂ ಓದಿ | Shraddha Murder Case | ಬ್ಯಾಗ್‌ ಹಿಡಿದು ಅಫ್ತಾಬ್‌ ಓಡಾಡುತ್ತಿರುವ ವಿಡಿಯೊ ಲಭ್ಯ, ಬ್ಯಾಗಲ್ಲಿತ್ತಾ ಶ್ರದ್ಧಾ ಬಾಡಿ?

Exit mobile version