Site icon Vistara News

Shraddha Murder Case | ಶ್ರದ್ಧಾ ಕೊಲೆ ಪಾತಕಿ ಅಫ್ತಾಬ್ ಇದ್ದ ಪೊಲೀಸ್ ವಾಹನದ ಮೇಲೆ ಹಿಂದೂ ಸೇನಾ ಕಾರ್ಯಕರ್ತರ ದಾಳಿ

Aftab Delhi police van attacked

ನವದೆಹಲಿ: ಶ್ರದ್ಧಾ ವಾಳ್ಕರ್ ಕೊಲೆ (Shraddha Murder Case) ಆರೋಪಿ, ಪಾತಕಿ ಅಫ್ತಾಬ್ ಪೂನಾವಾಲನನ್ನು ಕರೆದಕೊಂಡು ಹೋಗುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ಕೆಲವರು ದಾಳಿ ನಡೆಸಿದ ಘಟನೆ ಸೋಮವಾರ ಸಂಜೆ ದಿಲ್ಲಿಯಲ್ಲಿ ನಡೆದಿದೆ. ಕ್ಯಾಮೆರಾ ಎದುರೇ ಕೆಲವರು ಖಡ್ಗಗಳನ್ನು ಹಿಡಿದುಕೊಂಡು ಪೊಲೀಸ್ ವ್ಯಾನ್ ಮೇಲೆ ದಾಳಿ ಮಾಡಿದ್ದಾರೆ. ಆರೋಪಿ ಅಫ್ತಾಬ್ ಸುರಕ್ಷಿತನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಪಾತಕಿ ಅಫ್ತಾಬ್ ಇದ್ದ ಪೊಲೀಸ್ ವ್ಯಾನ್ ಮೇಲೆ ದಾಳಿಯ ಹೊಣೆಯನ್ನು ಹಿಂದೂ ಸೇನಾ ಹೊತ್ತುಕೊಂಡಿದೆ. ಈ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಹೇಳಿಕೆಯನ್ನು ನೀಡಿ, ಅಫ್ತಾಬ್ ಹೇಗೆ ಹಿಂದೂ ಹುಡುಗಿಯನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆಂಬುದನ್ನು ಇಡೀ ದೇಶವೇ ಗಮನಿಸಿದೆ ಎಂದು ಹೇಳಿದ್ದಾರೆ.

ಪಶ್ಚಿಮ ದಿಲ್ಲಿಯ ಫಾರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿಯಲ್ಲಿ ಎರಡನೇ ದಿನದ ಪಾಲಿಗ್ರಾಫ್ ಟೆಸ್ಟ್ ಕೈಗೊಂಡ ಬಳಿಕ ಆರೋಪಿ ಅಫ್ತಾಬ್‌ನನ್ನು ಪೊಲೀಸ್ ವ್ಯಾನ್‌ನಲ್ಲಿ ವಾಪಸ್ ತಿಹಾರ್ ಜೈಲಿಗೆ ಕರೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಏತನ್ಣಧ್ಯೆ, ಅಫ್ತಾಬ್ ಪೂನಾವಾಲ ರಕ್ಷಣೆಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ಅಫ್ತಾಬ್ ಪರ ವಕೀಲರು ತಿಳಿಸಿದ್ದಾರೆ.

ಎಫ್ಎಸ್‌ಎಲ್ ಬಿಲ್ಡಿಂಗ್‌ ಬಳಿ ಪೊಲೀಸ್ ವಾಹನದ ಮೇಲೆ ಹಿಂದೂ ಸೇನಾ ಸಂಘಟನೆಯ ಸದಸ್ಯರು ಖಡ್ಗಗಳು ಮೂಲಕ ದಾಳಿ ನಡೆಸಿದರು. ಆಗ ಅನಿವಾರ್ಯವಾಗಿ ಪೊಲೀಸರು ರಿವಾಲ್ವರ್ ಮೂಲಕ ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಿದರು. ದಾಳಿಕೋರರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಅಫ್ತಾಬ್, ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾಳನ್ನು ಕೊಂದು, ಆಕೆಯ ದೇಹವನ್ನು 35 ಭಾಗಗಳಾಗ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ. ಬಳಿಕ 18 ದಿನಗಳ ಕಾಲ ಮಧ್ಯ ರಾತ್ರಿಯಲ್ಲಿ ದಿಲ್ಲಿಯ ಮೆಹ್ರೌಲಿ ಅರಣ್ಯದಲ್ಲಿ ದೇಹದ ಭಾಗಗಳನ್ನು ವಿಲೇವಾರಿ ಮಾಡಿದ್ದ. ಸದ್ಯ ಪೊಲೀಸ್ ವಶದಲ್ಲಿರುವ ಅಫ್ತಾಬ್‌ನನ್ನು ಕೊಲೆ ಸಂಬಂಧ ತೀವ್ರ ವಿಚಾರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ | Shraddha Murder Case | ಶ್ರದ್ಧಾಳ ದೇಹವನ್ನು 35 ಭಾಗಗಳಾಗಿ ಕತ್ತರಿಸಲು ಅಫ್ತಾಬ್ ಬಳಸಿದ್ದ ಆಯುಧಗಳು ಪತ್ತೆ!

Exit mobile version