Site icon Vistara News

Sikh Symbol: ಸ್ತ್ರೀಯರ ಒಳಉಡುಪುಗಳ ಮೇಲೆ ಸಿಖ್‌ ಚಿಹ್ನೆ ಮುದ್ರಿಸಿ ಮಾರಾಟ; ಏನಿದು ಜಾಲ?

Sikh Symbol

Sikh Symbol Printed On Women Undergarments Sold In Delhi's Gandhinagar Market; Shopkeeper Held

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಗಾಂಧಿನಗರ ಮಾರುಕಟ್ಟೆಯಲ್ಲಿ (Gandhinagar Market) ಅಂಗಡಿ ಮಾಲೀಕನೊಬ್ಬ ಹೆಣ್ಣುಮಕ್ಕಳ ಒಳಉಡುಪುಗಳ ಮೇಲೆ ಸಿಖ್‌ ಧರ್ಮದ (Sikh Symbol) ಚಿಹ್ನೆಗಳನ್ನು ಮುದ್ರಿಸಿ ಮಾರಾಟ ಮಾಡಿದ್ದಾನೆ. ಅಲ್ಲದೆ, ಅಂಗಡಿಗೆ ತೆರಳಿದ ಹೆಣ್ಣುಮಕ್ಕಳ ಜತೆ ಅನುಚಿತವಾಗಿ ವರ್ತಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಹೆಣ್ಣುಮಕ್ಕಳ ಬಟ್ಟೆಗಳ ಮೇಲೆ ಸಿಖ್‌ ಧರ್ಮದ ಚಿಹ್ನೆಗಳು ಮುದ್ರಣವಾಗಿರುವ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗಿದೆ.

ಗಾಂಧಿನಗರ ಮಾರುಕಟ್ಟೆ ಸೇರಿ ಸುತ್ತಮುತ್ತಲಿನ ಮಹಿಳೆಯರು ಬಟ್ಟೆ ಖರೀದಿಗೆ ಈತನ ಅಂಗಡಿಗೆ ತೆರಳಿದ್ದಾರೆ. ಆಗ ಒಂದಷ್ಟು ಮಹಿಳೆಯರು ಬಟ್ಟೆಯ ಮೇಲೆ ಸಿಖ್ಖರ ಚಿಹ್ನೆಗಳು ಕಂಡುಬಂದಿವೆ. ಮಹಿಳೆಯರು ಇದನ್ನು ಪ್ರಶ್ನಿಸಿದಾಗ, ಅವರ ಮೇಲೆಯೇ ಅಂಗಡಿ ಮಾಲೀಕನು ಕೂಗಾಡಿದ್ದಾನೆ. ಇದಾದ ಬಳಿಕ ಮಹಿಳೆಯರು ಸೇರಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯ ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

“ಸ್ಥಳೀಯ ನಿವಾಸಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ ವಿಡಿಯೊ ಕೂಡ ವೈರಲ್‌ ಆಗಿದೆ. “ಸಿಖ್‌ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರಲು ಇಂತಹ ಕೃತ್ಯಗಳನ್ನು ಎಸಗಲಾಗುತ್ತಿದೆ. ಇದೇ ರೀತಿಯ ಬಟ್ಟೆಗಳು ದೇಶಾದ್ಯಂತ ಮಾರಾಟವಾಗರೆ ಏನು ಮಾಡುವುದು? ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಆರೋಪಿ ವಿರುದ್ಧ ಐಪಿಸಿ 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಆತನ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಮಹಿಳೆಯು ಆರೋಪಿಸಿದ್ದಾರೆ.

ಇದನ್ನೂ ಓದಿ: Sakshi Agarwal: ನೆಟ್ಟಿಗನಿಗೆ ಮುಟ್ಟಿ ನೋಡಿಕೊಳ್ಳುವಂಥ ಉತ್ತರ ಕೊಟ್ಟ ‘ಸಾಫ್ಟ್‌ವೇರ್ ಗಂಡ’ ಕನ್ನಡ ಸಿನ್ಮಾ ನಟಿ!

ನಗರದಲ್ಲಿ ಯಾವುದೇ ಕಾರಣಕ್ಕೂ ಇಂತಹ ಬಟ್ಟೆಗಳನ್ನು ಮಾರಾಟ ಮಾಡಲು ಬಿಡಬಾರದು. ಇಂತಹ ದೊಡ್ಡ ಜಾಲವೇ ಇರುವ ಕಾರಣ ಪೊಲೀಸರು ಸಮಗ್ರ ತನಿಖೆ ನಡೆಸಬೇಕು. ಇದರ ಹಿಂದಿರುವ ದುಷ್ಕರ್ಮಿಗಳನ್ನು ಮಟ್ಟ ಹಾಕಬೇಕು. ಆ ಮೂಲಕ ಸಿಖ್ಖರ ಭಾವನೆಗಳಿಗೆ ಧಕ್ಕೆಯಾಗುವುದನ್ನು ತಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಆದಾಗ್ಯೂ, ಬಂಧಿತ ಆರೋಪಿಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version