Site icon Vistara News

Sikkim Flash Flood: ಸಿಕ್ಕಿಂ ದಿಢೀರ್ ಪ್ರವಾಹ, ಇನ್ನೂ ಪತ್ತೆಯಾಗಿಲ್ಲ 23 ಯೋಧರು, 8 ಮಂದಿ ಸಾವು

Sikkim Flash Flood and Search operation still going on

ಗ್ಯಾಂಗ್‌ಟಾಕ್‌: ಉತ್ತರ ಸಿಕ್ಕಿಂನಲ್ಲಿ ಮೇಘಸ್ಫೋಟ ಉಂಟಾಗಿದ್ದು(Sikkim Flash Flood), ನದಿಗಳು ಉಕ್ಕಿ ಹರಿಯುತ್ತಿವೆ. ಅಷ್ಟೇ ಅಲ್ಲ, ಭಾರತೀಯ ಸೇನೆಯ 23 ಯೋಧರು (Indian Army Jawans) ಸೇರಿದಂತೆ ಒಟ್ಟು 49 ಜನರು ನಾಪತ್ತೆಯಾಗಿದ್ದಾರೆ. ಈ ಮಧ್ಯೆ 8 ಜನರು ಮೃತಪಟ್ಟಿರುವುದು ಖಚಿತಪಟ್ಟಿದೆ. ಹಾಗೆಯೇ ನಾಪತ್ತೆಯಾಗಿರುವವರ ಶೋಧ ಕಾರ್ಯಾಚರಣೆ ನಡೆದಿದೆ(Search operation). ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಿಕ್ಕಮ್ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ, ನೈಸರ್ಗಿಕ ವಿಪತ್ತು ನಿರ್ವಹಣೆಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳಿದ್ದಾರೆ.

ಈವರೆಗೆ, ಬಾರ್ಡರ್ ರೋಡ್ ಸಂಸ್ಥೆಯು(ಬಿಆರ್‌ಒ) ಒಟ್ಟು 80 ಸ್ಥಳೀಯರನ್ನು ಸಂರಕ್ಷಿಸಿದೆ. ಮೇಘಸ್ಫೋಟದಲ್ಲಿ ಈವರೆಗೆ 8 ಜನರು ಮೃತಪಟ್ಟ ವರದಿಯಾಗಿದೆ. ಕಾರ್ಯಾಚರಣೆಗೆ ಎನ್‌ಡಿಆರ್‌ಪಿಎಫ್ ನಿಯೋಜಿಸಲಾಗಿದೆ. “ನಮ್ಮ ತಂಡಗಳು ಸಿಂಗ್ಟಾಮ್‌ನಿಂದ ಏಳು ಜನರನ್ನು ರಕ್ಷಿಸಿವೆ. ನಾವು ಒಂದು ಎನ್‌ಡಿಆರ್‌ಎಫ್ ತಂಡವನ್ನು ಗ್ಯಾಂಗ್‌ಟಾಕ್‌ಗೆ ಮತ್ತು ಇಬ್ಬರನ್ನು ಪಶ್ಚಿಮ ಬಂಗಾಳದ ಸಿಕ್ಕಿಂನ ಪಕ್ಕದ ಪ್ರದೇಶಗಳಿಗೆ ನಿಯೋಜಿಸಿದ್ದೇವೆ” ಎಂದು ಎನ್‌ಡಿಆರ್‌ಎಫ್ ಎಎನ್‌ಐಗೆ ತಿಳಿಸಿದೆ.

ಲಾಚೆನ್ ಕಣಿವೆಯಲ್ಲಿ ಮೇಘಸ್ಫೋಟ

ಲಾಚೆನ್‌ ಕಣಿವೆಯಲ್ಲಿ ಏಕಾಏಕಿ ಮೇಘಸ್ಫೋಟ ಸಂಭವಿಸಿದೆ. ಇದರಿಂದಾಗಿ ತೀಸ್ತಾ ನದಿಯು ಅಪಾಯದ ಮಟ್ಟ ಮೀರಿ ಹರಿದಿದೆ. ಅಷ್ಟೇ ಅಲ್ಲ, ನದಿಯ ನೀರು ದಿಢೀರನೆ ಸೇನೆಯ ನೆಲೆಗೆ ನುಗ್ಗಿದ ಕಾರಣ 23 ಯೋಧರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಬರ್ದಾಂಗ್‌ನಲ್ಲಿ ನಿಲ್ಲಿಸಿದ್ದ ಸೇನೆಯ ವಾಹನಗಳು ಕೂಡ ಕೊಚ್ಚಿಕೊಂಡು ಹೋಗಿವೆ ಎನ್ನಲಾಗಿದೆ.

ಲ್ಹೋನಕ್‌ ಕೆರೆಯ ಬಳಿಯು ಮೇಘಸ್ಫೋಟ ಸಂಭವಿಸಿ ಎಲ್ಲೆಂದರಲ್ಲ ನೀರು ನುಗ್ಗಿದೆ. ನಾಪತ್ತೆಯಾಗಿರುವ ಯೋಧರು ಯಾರು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಪ್ರವಾಹದ ತೀವ್ರತೆಗೆ ಉತ್ತರ ಸಿಕ್ಕಿಂನ ಹಲವು ಭಾಗಗಳಲ್ಲಿ ಮನೆಗಳು ಮುಳುಗಿವೆ. ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ಕಾರು, ಬೈಕ್‌ಗಳು ಕೂಡ ನೀರಿನಲ್ಲಿ ಕೊಚ್ಚಿ ಹೋಗಿವೆ.

ಈ ಸುದ್ದಿಯನ್ನೂ ಓದಿ: Rain News | ಕಳಸಾಪುರ ಗ್ರಾಮದ ಮಧ್ಯೆಯೇ ದಿಢೀರ್‌ ನದಿ ಸೃಷ್ಟಿ: ಧುಮ್ಮಿಕ್ಕಿದ ಕೆಸರು ನೀರು, ಎಲ್ಲೆಡೆ ಪ್ರವಾಹ

ಸೇತುವೆಗಳು ಕುಸಿದು, ರಸ್ತೆಗಳು ಕೊಚ್ಚಿಹೋದ ಕಾರಣ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಡಿದುಹೋಗಿದೆ. ಅಷ್ಟೇ ಅಲ್ಲ, ಸಾವಿರಾರು ಜನ ಪ್ರವಾಹದಲ್ಲಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಹಾಗೆಯೇ, ಕೆಲವೆಡೆ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ ಎಂದು ಕೂಡ ಮೂಲಗಳು ತಿಳಿಸಿವೆ. ಚುಂಗ್‌ಥಾಂಗ್‌ ಅಣೆಕಟ್ಟಿನಿಂದ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿದ್ದು ಕೂಡ ಪ್ರವಾಹಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version