Site icon Vistara News

ಸಿಕ್ಕಿಂ ದಿಢೀರ್ ಪ್ರವಾಹ; ವಾರದ ಬಳಿಕ ಭಾರೀ ಸಾಹಸಪಟ್ಟು ಇಡೀ ಹಳ್ಳಿಯನ್ನು ರಕ್ಷಿಸಿದ ‘ತ್ರಿಶಕ್ತಿ’ ಸೇನಾ ತಂಡ

Sikkim Flash Flood, Army rescue 245 people from village

ನವದೆಹಲಿ: ಸಿಕ್ಕಿಂ ದಿಢೀರ್ ಪ್ರವಾಹದಲ್ಲಿ (Sikkim Flash Flood) ಸಿಲುಕಿದ್ದ 245 ಜನರನ್ನು (People Rescued) ಭಾನುವಾರ ಭಾರತೀಯ ಸೇನೆಯ ತ್ರಿಶಕ್ತಿ ಕಾರ್ಪ್ಸ್ (Indian Army’s Trishakti Corps) ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ದಿಢೀರ್‍ ಪ್ರವಾಹದಿಂದಾಗಿ ಸಿಕ್ಕಿಂ ರಾಬೊಮ್ ಗ್ರಾಮದಲ್ಲಿ ಸಿಲುಕಿಕೊಂಡಿದ್ದ 245 ಜನರು ಸಿಲುಕಿಕೊಂಡಿದ್ದರು. ಹಠಾತ್ ಪ್ರವಾಹದ ನಂತರ ಕಡಿತಗೊಂಡಿರುವ ಗ್ರಾಮಗಳನ್ನು ಮರುಸಂಪರ್ಕಿಸಲು ತ್ರಿಶಕ್ತಿ ಕಾರ್ಪ್ಸ್ ಬೃಹತ್ ಪ್ರಮಾಣದಲ್ಲಿ ಕಾರ್ಯಾಚರಣೆಯನ್ನು ಕೈಗೊಳ್ಳುತ್ತಿದೆ. ಸೇನಾ ಪಡೆಗಳು ಕಷ್ಟಕರವಾದ ಭೂಪ್ರದೇಶದ ಮೂಲಕ ಸವಾಲಿನ ಕಾರ್ಯಾಚರಣೆಯನ್ನು ಕೈಗೊಂಡು, ರಾಬೊಮ್ ಗ್ರಾಮದ ಜನರನ್ನು ರಕ್ಷಿಸಿದೆ. ಈ ರಕ್ಷಣಾ ಕಾರ್ಯಾಚರಣೆಯು ಅಕ್ಟೋಬರ್ 7ರಂದು ಆರಂಭವಾಗಿ, ಅಕ್ಟೋಬರ್ 13ರವರೆಗೂ ಮುಂದುವರಿಯಿತು ಎಂದು ತ್ರಿಶಕ್ತಿ ಕಾರ್ಪ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ತ್ರಿಶಕ್ತಿ ಕಾರ್ಪ್ಸ್‌ನ ಪಡೆಗಳು ಉತ್ತರ ಸಿಕ್ಕಿಂನಲ್ಲಿ ಅಕ್ಟೋಬರ್ 7 ರಿಂದ 13 ರವರೆಗೆ ಧೈರ್ಯಶಾಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತು. ದಟ್ಟವಾದ ಕಾಡುಗಳು ಮತ್ತು ದಟ್ಟವಾದ ಗಿಡಗಂಟಿಗಳುಳ್ಳ ಪರ್ವತ ಪ್ರದೇಶದಲ್ಲಿ ಸಾಗುವ ಮೂಲಕ ಉತ್ತರ ಸಿಕ್ಕಿಂನ ರಬೋಮ್ ಗ್ರಾಮದಲ್ಲಿ ಸಿಲುಕಿರುವ 245 ಮಂದಿಯನ್ನು ಪಡೆಗಳು ತಲುಪಿದವು. ಸುದೀರ್ಘ ಅವಧಿಯ ಕಾರ್ಯಾಚರಣೆಯಿಂದಾಗಿ ಜನರೊಂದಿಗೆ ಆಹಾರ ಮತ್ತು ವೈದ್ಯಕೀಯ ಸಹಾಯವನ್ನು ಹಂಚಿಕೊಂಡವು ಎಂದು ತ್ರಿಶಕ್ತಿ ಕಾರ್ಪ್ಸ್ ಎಕ್ಸ್‌ ವೇದಿಕೆಯಲ್ಲಿ ಪೋಸ್ಟ್ ಮಾಡಿದೆ.

ಮೇಘಸ್ಫೋಟದಿಂದಾಗಿ ಉತ್ತರ ಸಿಕ್ಕಿಂನಲ್ಲಿ ದಿಢೀರ್ ಪ್ರವಾಹ ಉಂಟಾಗಿತ್ತು. ಈ ವೇಳೆ, ಸಾವಿರಾರು ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ. ಈವರೆಗೂ 1,700 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಈ ಮೊದಲು ಭಾರತೀಯ ವಾಯುಪಡೆ ಹೇಳಿತ್ತು. ಐಎಎಫ್ ಅಧಿಕಾರಿಗಳ ಪ್ರಕಾರ, ಭಾರತೀಯ ವಾಯುಪಡೆಯ ಚಿನೂಕ್ ಮತ್ತು Mi-17 V5 ಹೆಲಿಕಾಪ್ಟರ್‌ಗಳು ಸಿಕ್ಕಿಂನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಪರಿಹಾರ ಪ್ರಯತ್ನಗಳನ್ನು ಹೆಚ್ಚಿಸಲು 200 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Sikkim Flash Flood: ಸಿಕ್ಕಿಂ ದಿಢೀರ್ ಪ್ರವಾಹ, ಇನ್ನೂ ಪತ್ತೆಯಾಗಿಲ್ಲ 23 ಯೋಧರು, 8 ಮಂದಿ ಸಾವು

ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ಇಲ್ಲಿಯವರೆಗೆ ಸುಮಾರು 99 ಟನ್‌ಗಳಷ್ಟು ಪರಿಹಾರ ಸಾಮಗ್ರಿಗಳನ್ನು ಪ್ರವಾಹಪೀಡಿತರಿಗೆ ತಲುಪಿಸಿವೆ. ಅಗತ್ಯತೆ ಇರುವೆಡೆ ಕಾರ್ಯಾಚರಣೆಗಳು ಮುಂದುವರಿಯಲಿವೆ ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ 11ರ ರಾತ್ರಿಯ ವೇಳೆಗೆ ಈ ದಿಢೀರ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 37ಕ್ಕೆ ಏರಿಕೆಯಾಗಿದ್ದು, ಇನ್ನೂ 78 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಅಕ್ಟೋಬರ್ 3 ರಂದು ಸಿಕ್ಕಿಂನ ಲ್ಹೋನಾಕ್ ಹಿಮನದಿಯು ಒಡೆದು, ಸರೋವರದ ಒಂದು ಬದಿ ಕೊಚ್ಚಿಕೊಂಡು ಹೋಗಿತ್ತು ಪರಿಣಾಮ ತೀಸ್ತಾದಲ್ಲಿ ನೀರಿನ ಮಟ್ಟ ದಿಢೀರ್ ಹೆಚ್ಚಳವಾಗಿ ಭೀಕರ ಪ್ರವಾಹ ಸೃಷ್ಟಿಯಾಯಿತು. ಪರಿಣಾಮ ರಾಜ್ಯದ ಹಲವಾರು ಪ್ರದೇಶಗಳನ್ನು ನೀರಿನಲ್ಲಿ ಮುಳುಗಿದವು ಮತ್ತು ಹಲವರು ಪ್ರಾಣ ಕಳೆದುಕೊಂಡರೆ, ಇನ್ನೂ ಕೆಲವರು ನಾಪತ್ತೆಯಾದರು. ಸಾವಿರಾರು ಪ್ರವಾಸಿಗರು ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಈಗಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version