ನವದೆಹಲಿ: ಟಾಟಾ ಕಂಪನಿಯ ಏರ್ ಇಂಡಿಯಾದಲ್ಲಿ ವಿಸ್ತಾರ ವಿಲೀನಗೊಳಿಸಲು (Air India-Vistara) ಸಿಂಗಾಪುರ್ ಏರ್‌ಲೈನ್ಸ್ ಸಂಸ್ಥೆಯ ಆಡಳಿತ ಮಂಡಳಿಯು ತನ್ನ ಒಪ್ಪಿಗೆಯನ್ನು ನೀಡಿದೆ. ಜತೆಗೇ ವಿಸ್ತರಿತ ಏರ್ ಇಂಡಿಯಾ ಸಂಸ್ಥೆಯಲ್ಲಿ ಹೆಚ್ಚಿನ ಹೂಡಿಕೆಯನ್ನೂ ಮಾಡಲು ಮುಂದಾಗಿದ್ದು, ವಿಲೀನ ಪ್ರಕ್ರಿಯೆ 2024 ಮಾರ್ಚ್ ಹೊತ್ತಿಗೆ ಪೂರ್ಣಗೊಳ್ಳಲಿದೆ.
ಸಿಂಗಾಪುರ ಏರ್‌ಲೈನ್ಸ್ ಮತ್ತು ಟಾಟಾ ಸನ್ಸ್ ಕಂಪನಿಗಳೆರಡೂ 2013ರಲ್ಲಿ ವಿಸ್ತಾರ ವಿಮಾನಯಾನ ಸಂಸ್ಥೆಯನ್ನು ಹುಟ್ಟು ಹಾಕಿದ್ದವು. ಈ ಸಂಸ್ಥೆಯಲ್ಲಿ ಟಾಟಾ ಸನ್ಸ್ ಶೇ.51 ಷೇರು ಹೊಂದಿದ್ದರೆ, ಸಿಂಗಪುರ್ ಏರ್‌ಲೈನ್ಸ್ ಶೇ.49 ಪಾಲುದಾರಿಕೆಯನ್ನು ಹೊಂದಿದೆ. ಒಂದೆರಡು ವರ್ಷದ ಹಿಂದೆ ಸರ್ಕಾರ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಕಂಪನಿ ಸ್ವಾಧೀನಡಿಸಿಕೊಂಡಿತ್ತು.
ಸಿಂಗಾಪುರ ಏರ್‌ಲೈನ್ಸ್ ಸಂಸ್ಥೆಯು ಏರ್ ಇಂಡಿಯಾದಲ್ಲಿ ಸುಮಾರು 250 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದೆ. ಇದರಿಂದಾಗಿ ಏರ್ ಇಂಡಿಯಾ ಗ್ರೂಪ್‌ನಲ್ಲಿ ಸಿಂಗಾಪುರ ಏರ್‌ಲೈನ್ಸ್ ಪಾಲುದಾರಿಕೆ ಶೇ.25.1ಕ್ಕೆ ಏರಿಕೆಯಾಗಿದೆ. ಮಾರ್ಚ್ 2024ರ ಮಾರ್ಚ್ ಹೊತ್ತಿಗೆ ವಿಸ್ತಾರ ಏರ್‌ಲೈನ್ಸ್ ಮತ್ತು ಏರ್ ಇಂಡಿಯಾ ವಿಲೀನ ಪೂರ್ಣಗೊಳ್ಳಲಿದೆ.
ಇದನ್ನೂ ಓದಿ | ವಿಸ್ತಾರ Explainer| ಭಾರತದ ಆಕಾಶದಲ್ಲಿ ಆಕಾಶ್ ಏರ್ ಕ್ರಾಂತಿಗೆ ದಿನಗಣನೆ ಶುರು!