Site icon Vistara News

Smart City: ಇಂದೋರ್‌ ಮತ್ತೆ ಸ್ಮಾರ್ಟ್‌ ಸಿಟಿ; ಪಟ್ಟಿಯಲ್ಲಿ ಬೆಂಗಳೂರು ಇದೆಯಾ ನೋಡಿ

indore city

ಹೊಸದಿಲ್ಲಿ: ಕಳೆದ ವರ್ಷದ ಸ್ಮಾರ್ಟ್ ಸಿಟಿ ಪ್ರಶಸ್ತಿ (smart city 2022) ಮತ್ತೆ ಮಧ್ಯಪ್ರದೇಶದ ಇಂದೋರ್‌ನ (Indore) ಪಾಲಾಗಿದೆ. ಮಧ್ಯಪ್ರದೇಶಕ್ಕೆ (Madhya pradesh) ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯವೆಂದು ಮನ್ನಣೆ ದೊರೆತಿದೆ.

2022ರ ಇಂಡಿಯಾ ಸ್ಮಾರ್ಟ್ ಸಿಟೀಸ್ ಪ್ರಶಸ್ತಿ ಸ್ಪರ್ಧೆಯಲ್ಲಿ (ISAC) ಇಂದೋರ್‌ ನಂತರ ಸೂರತ್ (surat city) ಮತ್ತು ಆಗ್ರಾ (Agra city) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದುಕೊಂಡಿವೆ. ರಾಜ್ಯ ವಿಭಾಗದಲ್ಲಿ ಮಧ್ಯಪ್ರದೇಶದ ಬಳಿಕ ತಮಿಳುನಾಡು ಎರಡನೇ ಸ್ಥಾನ ಪಡೆದಿದ್ದು, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳು ನಂತರದ ಸ್ಥಾನದಲ್ಲಿವೆ.

2022ರ ISAC ಪ್ರಶಸ್ತಿಗಳಲ್ಲಿ ಚಂಡೀಗಢವು ಅತ್ಯುತ್ತಮ ಕೇಂದ್ರಾಡಳಿತ ಪ್ರದೇಶ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಆಯೋಜಿಸಿರುವ ಈ ಪ್ರಶಸ್ತಿಗಳನ್ನು ಸ್ಮಾರ್ಟ್ ಸಿಟೀಸ್ ಮಿಷನ್‌ನ ಭಾಗವಾಗಿ ನಿನ್ನೆ ಘೋಷಿಸಲಾಯಿತು. ಸ್ಮಾರ್ಟ್‌ ಸಿಟಿ ಅಥವಾ ರಾಜ್ಯ ಪಟ್ಟಿಯಲ್ಲಿ ಬೆಂಗಳೂರು ಅಥವಾ ಕರ್ನಾಟಕ ಯಾವುದೇ ವಿಭಾಗದಲ್ಲಿ ಕಾಣಿಸಿಕೊಂಡಿಲ್ಲ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 27ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ISAC ಪ್ರಶಸ್ತಿಗಳ ನಾಲ್ಕನೇ ಆವೃತ್ತಿ ಇದಾಗಿದೆ. ಹಿಂದಿನ ಆವೃತ್ತಿಗಳು 2018, 2019, ಮತ್ತು 2020ರಲ್ಲಿ ನಡೆದಿದ್ದವು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ, 2021ರಲ್ಲಿ ಯಾವುದೇ ಪ್ರಶಸ್ತಿಗಳನ್ನು ನೀಡಿಲ್ಲ.

100 ಸ್ಮಾರ್ಟ್ ಸಿಟಿಗಳಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ನಗರ ಯೋಜನೆಗಳು, ನವೀನ ಆಲೋಚನೆಗಳನ್ನು ಗುರುತಿಸಲು ಮತ್ತು ಪುರಸ್ಕರಿಸಲು ISAC ಪ್ರಶಸ್ತಿ ಯೋಜನೆ ಹಾಕಿಕೊಂಡಿದೆ. ಎಲ್ಲಾ ನಿವಾಸಿಗಳಿಗೆ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಸಮಾನ, ಸುರಕ್ಷಿತ, ಆರೋಗ್ಯಕರ ಮತ್ತು ಸಹಯೋಗದ ನಗರಗಳನ್ನು ಗುರುತಿಸಲು ಇದು ಪ್ರಯತ್ನಿಸುತ್ತದೆ.

ಇದನ್ನೂ ಓದಿ: Smart City : ರಾಜ್ಯದ ಎಲ್ಲ ಸ್ಮಾರ್ಟ್ ಸಿಟಿ ಕಾಮಗಾರಿ ಅವ್ಯವಹಾರಗಳ ತನಿಖೆ: ಸತೀಶ್‌ ಜಾರಕಿಹೊಳಿ

Exit mobile version