Site icon Vistara News

PM Modi Parliament Speech: ಭಾರತದ ಏಳಿಗೆ, ಜಿ 20 ಆತಿಥ್ಯ ಕಂಡು ಕೆಲವರಿಗೆ ಹೊಟ್ಟೆ ಉರಿ ಎಂದ ಮೋದಿ

Some people unhappy with India hosting G20, PM Modi Parliament Speech

ನವದೆಹಲಿ: ಭಾರತವು ಜಿ 20 ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಆದರೆ, ಕೆಲವು ಜನರಿಗೆ ಈ ಬಗ್ಗೆ ಖುಷಿಯಿಲ್ಲ ಎಂದು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, 140 ಕೋಟಿ ಭಾರತೀಯರು ಕೋವಿಡ್ 19 ಸವಾಲನ್ನು ಗೆದ್ದು ಬಂದಿದ್ದಾರೆ. ಇದೊಂದು ಹೆಮ್ಮೆಯ ಸಂಗತಿ. ಹಾಗೆಯೇ ನಮ್ಮ ಆರ್ಥಿಕ ಸವಾಲಗಳು ನೀಗಿಸಿದ್ದರಿಂದ ನಾವೀಗ 5ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ ಎಂದು (PM Modi Parliament Speech) ಹೇಳಿದರು.

ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಪ್ರಶ್ನೆಗಳಿಗೆ ಉತ್ತರಿಸಿದ ಮೋದಿ ಅವರು, ಭಾರತವು ಈಗ ನೀತಿ ವೈಫಲ್ಯಗಳಿಂದ ಹೊರ ಬಂದು ಸಾಧನೆಯ ಹಾದಿಯಲ್ಲಿದೆ. ಆದರೆ ಭಾರತದ ಏಳಿಗೆ ಕಂಡು ಕೆಲವರಿಗೆ ಹೊಟ್ಟೆ ಉರಿ ಎಂದು ಹೇಳಿದರು.

ಇದನ್ನೂ ಓದಿ: Parliament Budget Session: ಲೋಕಸಭೆಯಲ್ಲಿ ಅದಾನಿ ಜತೆಗಿನ ಮೋದಿ ಫೋಟೋ ಪ್ರದರ್ಶಿಸಿದ ರಾಹುಲ್ ಗಾಂಧಿ

ಒಂದು ಭಾಷಣದ ನಂತರ ಇಡೀ ವ್ಯವಸ್ಥೆಯು ಹೇಗೆ ಝೇಂಕರಿಸುತ್ತದೆ ಎಂಬುದನ್ನು ನಾನು ನಿನ್ನೆ ನೋಡಿದೆ. ಕೆಲವರು ತುಂಬಾ ಉತ್ಸುಕರಾಗಿದ್ದರು ಮತ್ತು ಬಹುಶಃ ರಾತ್ರಿ ಚೆನ್ನಾಗಿ ಮಲಗಿದರು ಅಂತಾ ಕಾಣಿಸುತ್ತದೆ. ಒಬ್ಬ ಹಿರಿಯ ನಾಯಕ ರಾಷ್ಟ್ರಪತಿಗೂ ಅವಮಾನ ಮಾಡಿದ್ದಾರೆ ಎಂದು ಪ್ರಧಾನಿ ಹೇಳಿದರು.

Exit mobile version