ಬೆಂಗಳೂರು: ಕೆಎಲ್‌ಇ ಸೊಸೈಟಿಯ ಬಿ.ವಿ. ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜು ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಬೇಕಿದ್ದ ʼ3 ಈಡಿಎಟ್ಸ್ʼ ಖ್ಯಾತಿಯ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರಿಗೆ ಲಡಾಖ್‌ನಲ್ಲಿ ಗೃಹಬಂಧನ ವಿಧಿಸಲಾಗಿದೆ.
ಸೋನಮ್ ವಾಂಗ್‌ಚುಕ್ ಅವರು ಲಡಾಖ್ ನಿವಾಸಿಯಾಗಿದ್ದು, ಯುವ ಜನಾಂಗದಲ್ಲಿ ವಿಜ್ಞಾನ ಪ್ರಸಾರ, ಪರಿಸರ ಸಂರಕ್ಷಣೆ, ಸಾಮಾಜಿಕ ಸೇವೆ ಹಾಗೂ ವಿಜ್ಞಾನಿಯಾಗಿ ತೊಡಗಿಸಿಕೊಂಡಿದ್ದಾರೆ. ಆಮೀರ್ ಖಾನ್ ನಟನೆಯ 3 ಈಡಿಯೆಟ್ಸ್ ಸಿನಿಮಾದಲ್ಲಿ ಫುಂಗ್‌ಸುಕ್ ವಾಂಗ್ಡೊ ಪಾತ್ರವು ಇದೇ ಸೋನಮ್ ವಾಂಗ್‌ಚುಕ್ ಅವರ ಜೀವನವನ್ನೇ ಆಧರಿಸಿದ್ದಾಗಿತ್ತು.
ಜಮ್ಮು ಮತ್ತು ಕಾಶ್ಮೀರದಿಂದ ಸಂವಿಧಾನದ ಅನುಚ್ಛೆದ 370ನ್ನು ತೆರವುಗೊಳಿಸಿದ ನಂತರ ಲಡಾಖ್ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆ ಮಾಡಲಾಯಿತು. ಆದರೆ ಈ ಮೂರು ವರ್ಷದಲ್ಲಿ ಸ್ಥಳೀಯರಿಗೆ ಉಸ್ಯೋಗ ಸೃಜನೆ, ಭೂ ಹಕ್ಕುಗಳನ್ನು ಕಾಪಾಡುವಲ್ಲಿ ಸ್ಥಳೀಯ ಸರ್ಕಾರ ವಿಫಲವಾಗಿದೆ ಎಂದು ಅನೇಖ ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.
ಸಂವಿಧಾನದ 6ನೇ ಪರಿಚ್ಛೇದಕ್ಕೆ ಲಡಾಖ್ ಪ್ರದೇಶವನ್ನು ಸೇರಿಸಿದರೆ ವ್ಯಾಪಾರ ರಕ್ಷಣೆ ಆಗುತ್ತದೆ ಎಂಬ ಹೋರಾಟಕ್ಕೆ ಸೋನಮ್ ವಾಂಗ್‌ಚುಕ್ ಸಹ ಬೆಂಬಲ ಸೂಚಿಸಿದ್ದರು. ಖಾರ್‌ದೂಂಗ್ಲಾ ಪಾಸ್‌ನಲ್ಲಿ ಧರಣಿ ಮಾಡುವುದಾಗಿ ತಿಳಿಸಿದ್ದರು. ಆದರೆ ಅಲ್ಲಿ ಧರಣಿಗೆ ಅವಕಾಶ ಇಲ್ಲ ಎಂದು ತಿಳಿಸಿದ್ದ ಲೆಫ್ಟಿನೆಂಟ್ ಗವರ್ನರ್ ಕಚೇರಿ, ಲೇಹ್ ಬಳಿಯಿರುವ ಹಯಾಲ್‌ನಲ್ಲಿರುವ ಸೋನಮ್ ವಾಂಗ್‌ಚುಕ್‌ನಲ್ಲಿ ಮಾತ್ರವೇ ಮಾಡಲು ಅನುಮತಿ ನೀಡಲಾಗಿತ್ತು.
ಈ ಕುರಿತು ಶನಿವಾರ ಯೂಟ್ಯೂಬ್ ವಿಡಿಯೋ ಬಿಡುಗಡೆ ಮಾಡಿರುವ ಸೋನಮ್ ವಾಂಗ್‌ಚುಕ್, ಇದು ವಾಕ್‌ಸ್ವಾತಂತ್ರ್ಯವನ್ನು ದಮನಿಸುವ ಕಾರ್ಯವಾಗಿದೆ. ಕೇಂದ್ರ ಗೃಃಸಚಿವ ಅಮಿತ್ ಶಾ ಅವರು ಮಧ್ಯಪ್ರವೇಶಿಸಿ ಲಡಾಖ್ ಅಭಿವೃದ್ಧಿಗೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಶಶಿ ತರೂರ್ ಕಲ್ಪನೆಯ ಭಾರತದಲ್ಲಿ ಜಮ್ಮು-ಕಾಶ್ಮೀರ, ಲಡಾಖ್ಗಳು ಇಲ್ಲವೇ ಇಲ್ಲ; ಮತ್ತೆ ಅದೇ ಮಹಾ ಪ್ರಮಾದ!
ಹುಬ್ಬಳ್ಳಿಯಲ್ಲಿರುವ ಬಿ.ವಿ. ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ಅಮಿತ್ ಶಾ ಭಾಗವಹಿಸಿದ್ದಾರೆ. ಭಾನುವಾರದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಉಪಾಹಾರ ಕೂಟ ಏರ್ಪಡಿಸಲಾಗಿತ್ತು. ಸೋಹನ್ ವಾಂಗ್‌ಚುಕ್ ಜತೆಗೆ ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಸಹ ಭಾಗವಹಿಸಲಿದ್ದಾರೆ ಎಂದು ಕಳೆದ ವಾರ ಸುದ್ದಿಗೋಷ್ಠಿ ನಡೆಸಿದ್ದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅಶೋಕ್ ಶೆಟ್ಟರ್ ತಿಳಿಸಿದ್ದರು.
ಆದರೆ ಇದೀಗ ಸೋನಮ್ ವಾಂಗ್‌ಚುಕ್ ಗೃಹಬಂಧನದಲ್ಲಿರುವುದರಿಂದ, ಬಿ.ವಿ.ಬಿ. ಕಾಲೇಜು ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬಹುತೇಕ ಅಸಾಧ್ಯವಾಗಿದೆ.