Site icon Vistara News

ಮೋದಿ ಇರುವ ಸಿರಿಧಾನ್ಯಗಳ ಹಾಡು ಗ್ರ್ಯಾಮಿ ಅವಾರ್ಡ್‌ಗೆ ನಾಮಿನೇಟ್!

Song about millets nominated for Grammy award and PM Modi featuring in this song

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನೂ (PM Narendra Modi) ಒಳಗೊಂಡಿರುವ ‘ಅಬಂಡನ್ಸ್ ಇನ್ ಮಿಲೆಟ್ಸ್’ (Abundance in Millets) ಹಾಡನ್ನು ಈ ವರ್ಷದ ಗ್ರ್ಯಾಮಿಗೆ (Grammy award 2024) ನಾಮನಿರ್ದೇಶನ ಮಾಡಲಾಗಿದೆ. ಈ ಹಾಡಿಗೆ ಸಂಗೀತ ನೀಡಿರುವ ಫಲ್ಗುಣಿ ಶಾ ಮತ್ತು ಗೌರವ್ ಶಾ ಹಾಡಿದ್ದಾರೆ. ಕೀನ್ಯಾ ಆಟಿ, ಗ್ರೆಗ್ ಗೊನ್ಜಾಲೆಜ್ ಮತ್ತು ಸೌಮ್ಯ ಚಟರ್ಜಿ ಜೊತೆಗೆ ಇಬ್ಬರೂ ಗಾಯಕರು ಬರೆದಿದ್ದಾರೆ. ಆಟಿ ಮ್ಯೂಸಿಕ್ ವಿಡಿಯೋ ಕೂಡ ಹಾಡನ್ನು ನಿರ್ಮಾಣ ಮಾಡಿದೆ(Millets Song).

ಸಿರಿಧಾನ್ಯಗಳ ಮಹತ್ವವನ್ನು ಸಾರುವುದಕ್ಕಾಗಿ ಈ ಹಾಡನ್ನು ಲಾಂಚ್ ಮಾಡಲಾಗಿತ್ತು. ಇಡೀ ಜಗತ್ತು, 2023ರ ವಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನಾಗಿ ಆಚರಿಸುತ್ತಿದೆ. ಸಿರಿಧಾನ್ಯಗಳನ್ನು ಉತ್ತೇಜಿಸುವುದಕ್ಕಾಗಿ ಸೃಷ್ಟಿಸಲಾದ ಈ ಹಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಣಿಸಿಕೊಂಡಿದ್ದಾರೆ. ರಾಗಿಯನ್ನು ಜೀವನಶೈಲಿಯ ಭಾಗವಾಗಿ ಅಳವಡಿಸಿಕೊಳ್ಳುವ ಮಹತ್ವದ ಕುರಿತು ಪ್ರಧಾನಿ ನರೇಂದ್ರ ಮಾತನಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಜತೆಗೆ ಇದರಿಂದ ದೇಶದ ರೈತರಿಗೆ ಅನುಕೂಲವಾಗಲಿದೆ ಎನ್ನುವುದನ್ನು ಕೇಳಿಸಿಕೊಳ್ಳಬಹುದು.

ಅಬಂಡನ್ಸ್ ಇನ್ ಮಿಲೆಟ್ಸ್ ಹಾಡನ್ನು ಇಲ್ಲಿ ಕೇಳಿ

“ಅತ್ಯಂತ ಸೃಜನಾತ್ಮಕವಾಗಿದೆ ಮತ್ತು ಆರೋಗ್ಯಕರ ಜೀವನಕ್ಕಾಗಿ ರಾಗಿಗಳನ್ನು ಅಳವಡಿಸಿಕೊಳ್ಳಲು ಹೆಚ್ಚಿನ ಜನರನ್ನು ಪ್ರೇರೇಪಿಸುತ್ತದೆ!” ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಹಾಡಿನ ಬಗ್ಗೆ ಬರೆದುಕೊಂಡಿದ್ದಾರೆ. ಇತ್ತೀಚೆಗೆ, ವರ್ಲ್ಡ್ ಫುಡ್ ಇಂಡಿಯಾ 2023 ರ ಭಾಷಣದಲ್ಲಿ ಪ್ರಧಾನ ಮಂತ್ರಿಗಳು ರಾಗಿಗಳನ್ನು ಭಾರತದ ‘ಸೂಪರ್ ಫುಡ್ ಬಕೆಟ್’ನ ಭಾಗವೆಂದು ಕರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಾರತದಲ್ಲಿ ನಾವು ಸಿರಿಧಾನ್ಯಗಳಿಗೆ ಅನ್ನದ ಗುರುತನ್ನು ನೀಡಿದ್ದೇವೆ. ಭಾರತದ ಉಪಕ್ರಮದಿಂದ, ಇಂದು ಮತ್ತೊಮ್ಮೆ ವಿಶ್ವದಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಅಭಿಯಾನ ಪ್ರಾರಂಭವಾಗಿದೆ. ಅಂತಾರಾಷ್ಟ್ರೀಯ ಯೋಗ ದಿನವು ಯೋಗವನ್ನು ಮೂಲೆ ಮೂಲೆಗೆ ಕೊಂಡೊಯ್ದಿದೆ ಎಂದು ನಾನು ನಂಬುತ್ತೇನೆ. ಈಗ ಸಿರಿಧಾನ್ಯಗಳು ಕೂಡ ಪ್ರಪಂಚದ ಮೂಲೆ ಮೂಲೆಯನ್ನು ತಲುಪಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Ricky Kej: ಯುಎನ್‌ಸಿಸಿಡಿಗೆ 3 ಬಾರಿ ಗ್ರ್ಯಾಮಿ ಅವಾರ್ಡ್ ವಿನ್ನರ್, ಬೆಂಗಳೂರಿಗ ರಿಕಿ ಕೇಜ್ ಸದ್ಭಾವನಾ ರಾಯಭಾರಿ!

Exit mobile version