ಬೆಂಗಳೂರು: ಆಟೋ ರಿಕ್ಷಾಗಳ (auto rickshaw) ಹಿಂಬದಿ ಬರಹಗಳು ಸಾದಾ ಆಗಿದ್ದರೂ ಅವುಗಳಲ್ಲಿರುವ ಅರ್ಥ ಸಾಕಷ್ಟು ವಿವೇಚನೆಗೀಡು ಮಾಡುತ್ತವೆ, ನಗೆಯುಕ್ಕಿಸುತ್ತವೆ. ಈ ರೀತಿಯ ಆಟೋ ಬರಹಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತವೆ. ಅದೇ ರೀತಿ, ಆಟೋ ಹಿಂಬದಿಯ ಬರಹವೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ವಂಶಿಕಾ ಗಾರ್ಗ್ ಎಂಬುವರು ಟ್ವಿಟರ್‌ನಲ್ಲಿ ಆಟೋ ಹಿಂಬದಿಯ ಬರಹದ ಫೋಟೋವನ್ನು ಷೇರ್ ಮಾಡಿಕೊಂಡಿದ್ದಾರೆ. ಅದರಲ್ಲಿರುವ, ”ಸಾರಿ ಹುಡುಗಿಯರೇ, ನನ್ನ ಹೆಂಡತಿ ಬಹಳಾ ಸ್ಟ್ರಿಕ್ಟು”(Sorry girls, my wife is very strict) ಎಂಬ ಬರಹ ಸಖತ್ ವೈರಲ್ ಆಗಿದೆ(Viral News).
ಟ್ವಿಟರ್‌ನಲ್ಲಿ ಈ ಫೋಸ್ಟ್ ಈಗಾಗಲೇ 1.15 ಲಕ್ಷ ವ್ಯೂವ್ಸ್ ಕಂಡಿದೆ. ನಾನು ಗ್ಯಾರಂಟಿಯಾಗಿ ಹೇಳುತ್ತೇನೆ, ಈ ಬರಹವನ್ನು ಆತನ ಹೆಂಡತಿಯ ಬರೆಯಿಸಿರಬೇಕು ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು, ಓಹೋ ಹಾಗಿದ್ದರೆ, ಈವರೆಗೆ ಎಷ್ಟು ಹುಡುಗಿಯರು ಉಳಿದಿದ್ದಾರಪ್ಪ? ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಕಾನ್ಫಿಡೆನ್ಸ್ ಲೇವಲ್; 10000 ಪ್ರತಿಶತ ಎಂದು ಬರೆದುಕೊಡಿದ್ದಾರೆ. ಮಲ್ಟಿಪಲ್ ಡೇಟಿಂಗ್‌ನ ಈ ದಿನಗಳಲ್ಲಿ ನಾನು ನನ್ನ ವ್ಯಕ್ತಿಯಿಂದ ಇಂಥ ನಿಷ್ಠೆಯನ್ನು ನಿರೀಕ್ಷಿಸುತ್ತೇನೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral News : ನಾಯಿ ಎಂದುಕೊಂಡು ಕರಡಿಯನ್ನು ಸಾಕಿದ ಮಹಿಳೆ! ದಿನಕ್ಕೆ ಬೇಕಿತ್ತು ಎರಡು ಬಕೆಟ್ ನೂಡಲ್ಸ್!
ಆಟೋಗಳ ಹಿಂದೆ ಈ ರೀತಿಯ ಫನ್ನಿ ವಾಕ್ಯಗಳನ್ನು ನೋಡಬಹುದು. ಬೆಂಗಳೂರಿನ ಆಟೋಗಳಲ್ಲಿ ಈ ರೀತಿಯ ಬರಹಗಳನ್ನು ಆಗಾಗ ಕಾಣುತ್ತೇವೆ. ಮಾತನಾಡಿಸಿ ಮರೆಯಬೇಡ, ಮನಸ್ಸು ಕೊಟ್ಟು ನೋಯಿಸಬೇಡ, ಕಣ್ ಇರೋದೇ ನೋಡೋಕೆ ನೀ ಯಾರೇ ಕೇಳೋಕೆ, ಡ್ರೈವರ್ ಆದ್ರೇನ್ ಚಿನ್ನ, ಡೈಮಂಡ್ ತರ ಸಾಕ್ತಿನಿ ನಿನ್ನ.., ಲೇ ಹುಡುಗಿ ನೀ ಸಿಕ್ಕರೆ ಲೈಫು ಸೂಪರ್, ಸಿಗದಿದ್ರೆ ಬೇರೆ ಹುಡುಗಿಗೆ ಆಫರ್…. ಈ ರೀತಿಯ ನೂರಾರು ಬರಹಗಳನ್ನು ಕಾಣಬಹುದು.